ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿ ಎದುರಿಸಲು ಬ್ಯಾಟ್ಸ್‌ಮನ್‌ಗಳು ಪರದಾಡುತ್ತಿದ್ದಾರೆ. ಇದಕ್ಕೆ ಮಾಜಿ ನಾಯಕ ಕೇವಿನ್ ಪೀಟರ್ಸನ್ ಹಲವು ಟಿಪ್ಸ್ ನೀಡಿದ್ದಾರೆ.
ಲಂಡನ್(ಜೂ.06): ವಿಶ್ವಕಪ್ ಟೂರ್ನಿಯಲ್ಲಿ ಡೇಂಜರಸ್ ಬೌಲರ್‌ಗಳ ಪೈಕಿ ಟೀಂ ಇಂಡಿಯಾದ ಜಸ್ಪ್ರೀತ್ ಬುಮ್ರಾ ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ಸೌತ್ ಆಫ್ರಿಕಾ ವಿರುದ್ಧ ಬುಮ್ರಾ ಅದ್ಬುತ ಬೌಲಿಂಗ್ ದಾಳಿ ಮಾಡೋ ಮೂಲಕ ಹರಿಗಣಗಳನ್ನು ಕಟ್ಟಿಹಾಕಿದ್ದರು. ಇದು ಇತರ ತಂಡಗಳ ಚಿಂತೆಗೆ ಕಾರಣವಾಗಿದೆ. ಹೀಗಾಗಿ ಬುಮ್ರಾ ಎದುರಿಸೋ ಬ್ಯಾಟ್ಸ್‌ಮನ್‌ಗಳಿಗೆ ಕೆವಿನ್ ಪೇಟೀರ್ಸನ್ ಟಿಪ್ಸ್ ನೀಡಿದ್ದಾರೆ.
Quick memo to all right handed batters - get onto off stump against Bumrah & look to hit him from, straight back at the stumps to square leg.
Eliminate the off side completely!
ಬುಮ್ರಾ ಎದಿರಿಸೋ ಬಲಗೈ ಬ್ಯಾಟ್ಸ್‌ಮನ್‌ಗಳಿಗೆ ಪೀಟರ್ಸನ್ ಕಿವಿ ಮಾತು ಹೇಳಿದ್ದಾರೆ. ಬುಮ್ರಾ ಬೌಲಿಂಗ್ ವೇಳೆ ಆಫ್ ಸ್ಟಂಪ್ ಬದಿ ಬಂದು ಸ್ಕ್ವಾರ್ ಲೆಗ್ ರೀಜನ್‌ಗೆ ಹಿಟ್ ಮಾಡಿ ಎಂದು ಪೀಟರ್ಸನ್ ಕಿವಿ ಮಾತು ಹೇಳಿದ್ದಾರೆ. ಪೀಟರ್ಸನ್ ಟಿಪ್ಸ್ ಪಾಲಿಸುವ ಬ್ಯಾಟ್ಸ್‌ಮನ್ ಯಶಸ್ವಿಯಾಗ್ತಾರಾ ಅಥವಾ ಬುಮ್ರಾಗೆ ಬಲಿಯಾಗ್ತ್ರಾ ಅನ್ನೋ ಕುತೂಹಲ ಇದೀಗ ಮನೆ ಮಾಡಿದೆ.