ವಿಶ್ವಕಪ್ 2019: ಮೊದಲ ಪಂದ್ಯಕ್ಕೆ ಕೇದಾರ್ ಜಾಧವ್ ಡೌಟ್!

Published : Jun 03, 2019, 05:04 PM IST
ವಿಶ್ವಕಪ್ 2019: ಮೊದಲ ಪಂದ್ಯಕ್ಕೆ ಕೇದಾರ್ ಜಾಧವ್ ಡೌಟ್!

ಸಾರಾಂಶ

ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯಕ್ಕೆ ಸಜ್ಜಾಗಿರುವ ಟೀಂ ಇಂಡಿಯಾಗೆ ಇದೀಗ ಕೇದಾರ್ ಜಾಧವ್ ಅಲಭ್ಯರಾಗೋ ಸಾಧ್ಯತೆ ಹೆಚ್ಚಿದೆ. ಇಂಜುರಿಯಿಂದ ಚೇತರಿಸಿಕೊಂಡು ತಂಡ ಸೇರಿಕೊಂಡಿರುವ ಕೇದಾರ್ ಮೇಲಿನ ಅನುಮಾನಕ್ಕೆ ಕಾರಣವೇನು? ಇಲ್ಲಿದೆ ವಿವರ.

ಲಂಡನ್(ಜೂ.03): ವಿಶ್ವಕಪ್ ಟೂರ್ನಿಯಲ್ಲಿ ಅಭ್ಯಾಸ ಪಂದ್ಯ ಮುಗಿಸಿ ಇದೀಗ ನೆಟ್ ಪ್ರಾಕ್ಟೀಸ್ ನಡೆಸುತ್ತಿರುವ ಟೀಂ ಇಂಡಿಯಾ ಜೂನ್ 5 ರಂದು ಸೌತ್ಆಫ್ರಿಕಾ ವಿರುದ್ದ ಮೊದಲ ಪಂದ್ಯ ಆಡಲಿದೆ. ಆದರೆ ಮೊದಲ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದಲ್ಲೂ ಇಂಜುರಿ ಸಮಸ್ಯೆಗಳು ಕಾಡತೊಡಗಿದೆ. ಇಂಜುರಿಯಿಂದ ಚೇತರಿಸಿಕೊಂಡು ವಿಶ್ವಕಪ್ ತಂಡ ಸೇರಿಕೊಂಡಿರುವ ಕೇದಾರ್ ಜಾಧವ್ ಇದೀಗ ಮೊದಲ ಪಂದ್ಯಕ್ಕೆ ಅಲಭ್ಯರಾಗೋ ಸಾಧ್ಯತೆ ಇದೆ.

ಇದನ್ನೂ ಓದಿ: ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ..?

ಐಪಿಎಲ್ ಟೂರ್ನಿ ವೇಳೆ ಭುಜಕ್ಕೆ ಗಾಯಮಾಡಿಕೊಂಡ  ಕೇದಾರ್ ಜಾಧವ್, ಐಪಿಎಲ್ ಟೂರ್ನಿಯಿಂದಲೇ ಹೊರಗುಳಿದಿದ್ದರು. ಬಳಿಕ ಚೇತರಿಸಿಕೊಂಡು  ವಿಶ್ವಕಪ್ ತಂಡ ಸೇರಿಕೊಂಡಿದ್ದರು. ಆದರೆ ಅಭ್ಯಾಸದ ವೇಳೆ ಕೇದಾರ ಗಾಯ ಮತ್ತೆ ಉಲ್ಭಣಗೊಂಡಿದೆ. ಹೀಗಾಗಿ ಆರಂಭಿಕ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಮೊದಲ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್..!

ನೆಟ್  ಪ್ರಾಕ್ಟೀಸ್ ವೇಳೆ ಕೇದಾರ್ ಜಾಧವ್ ಅಭ್ಯಾಸ ನಡೆಸಿದ್ದಾರೆ. ಆದರೆ ಕೇದಾರ್ ಲಭ್ಯತೆ ಕುರಿತು ಟೀಂ ಮ್ಯಾನೇಜ್ಮೆಂಟ್ ಯಾವುದೇ ಖಚಿತ ಮಾಹಿತಿ ಬಹಿರಂಗ ಪಡಿಸಿಲ್ಲ. ಹೀಗಾಗಿ ಕೇದಾರ್ ಜಾಧವ್ ಮೊದಲ ಪಂದ್ಯ ಆಡೋದು ಅನುಮಾನವಾಗಿದೆ. 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!