ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ..?

Published : Jun 03, 2019, 03:59 PM ISTUpdated : Jun 03, 2019, 04:43 PM IST
ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ..?

ಸಾರಾಂಶ

ಭಾರತ ತಂಡದ ನೀಲಿ ವರ್ಣದ ಜೆರ್ಸಿಗೂ ಇಂಗ್ಲೆಂಡ್ ತಂಡದ ಜೆರ್ಸಿಗೂ ಸಾಕಷ್ಟು ಸಾಮ್ಯವಿರುವ ಕಾರಣದಿಂದ, ಭಾರತ ತಂಡ ಪರ್ಯಾಯ ಜೆರ್ಸಿಯ ಮೊರೆ ಹೋಗಿದ್ದು, 2 ಪಂದ್ಯಗಳಲ್ಲಿ ಕಿತ್ತಳೆ ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಹೀಗಿದೆ ನೋಡಿ ಟೀಂ ಇಂಡಿಯಾ ಹೊಸ ಜೆರ್ಸಿ...

ಲಂಡನ್[ಜೂ.03]: ಪ್ರಸ್ತುತ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪರ್ಯಾಯ ಜೆರ್ಸಿ ಯಾವ ರೀತಿ ಇರಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ಪರ್ಯಾಯ ಜೆರ್ಸಿಯ ಮೊದಲ ನೋಟ ಲಭ್ಯವಾಗಿದೆ. ಈ ಸಂಬಂಧ ಸುದ್ದಿ ಸಂಸ್ಥೆಯೊಂದು ವಿಶೇಷ ವರದಿ ಪ್ರಕಟಿಸಿದ್ದು, ತಂಡದ ಪರ್ಯಾಯ ಜೆರ್ಸಿಯ ಫೋಟೋವನ್ನು ಬಹಿರಂಗಗೊಳಿಸಿದೆ. 

ಜೆರ್ಸಿ ಸಂಪೂರ್ಣ ಕಿತ್ತಳೆ ಬಣ್ಣದಾಗಿದ್ದು, ಎಂದಿನ ಬ್ಲೂ ಕಲರ್’ಗಿಂತ ಸಂಪೂರ್ಣ ವಿಭಿನ್ನವಾಗಿದೆ ಎಂದು ಸುದ್ದಿ ಸಂಸ್ಥೆ ಹೇಳಿದೆ. ಭಾರತ ತಂಡದ ನೀಲಿ ವರ್ಣದ ಜೆರ್ಸಿಗೂ ಇಂಗ್ಲೆಂಡ್ ತಂಡದ ಜೆರ್ಸಿಗೂ ಸಾಕಷ್ಟು ಸಾಮ್ಯವಿರುವ ಕಾರಣದಿಂದ, ಭಾರತ ತಂಡ ಪರ್ಯಾಯ ಜೆರ್ಸಿಯ ಮೊರೆ ಹೋಗಿದೆ ಎಂದು ಹೇಳಲಾಗುತ್ತಿದೆ. 

ಭಾರತ ತಂಡವು ಜೂ.22ರ ಆಫ್ಘಾನಿಸ್ತಾನ, ಜೂ.30ರ ಇಂಗ್ಲೆಂಡ್‌ ವಿರುದ್ಧದ ಪಂದ್ಯಗಳಿಗೆ ಭಾರತ ಕೇಸರಿ ಮಿಶ್ರಿತ ಜೆರ್ಸಿ ತೊಡಲಿದೆ. ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾವು ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್’ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. 

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!