ಬಾಂಗ್ಲಾ ತಂಡಕ್ಕೆ ’ಆರಂಭಿಕ’ ಆಘಾತ..!

Published : Jun 01, 2019, 04:20 PM IST
ಬಾಂಗ್ಲಾ ತಂಡಕ್ಕೆ ’ಆರಂಭಿಕ’ ಆಘಾತ..!

ಸಾರಾಂಶ

ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ತನ್ನ ಅಭಿಯಾನ ಆರಂಭಿಸುವ ಮುನ್ನವೇ ಆಘಾತಕ್ಕೊಳಗಾಗಿದೆ. ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿರುವ ಬಾಂಗ್ಲಾ ಪಡೆ ಇದೀಗ ಆತಂಕಕ್ಕೆ ಒಳಗಾಗಿದೆ. ಯಾಕೆ ಹೀಗೆ..? ಈ ಸ್ಟೋರಿ ಓದಿ...

ಲಂಡನ್[ಜೂ.01]: ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಮೊದಲ ಪಂದ್ಯ ಆಡುವ ಮುನ್ನವೇ ಬಾಂಗ್ಲಾದೇಶ ತಂಡದಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚುತ್ತಿದೆ. ಶುಕ್ರವಾರ  ಅಭ್ಯಾಸದ ವೇಳೆ ಆರಂಭಿಕ ಬ್ಯಾಟ್ಸ್‌ಮನ್‌ ತಮೀಮ್‌ ಇಕ್ಬಾಲ್‌ ಎಡಗೈಗೆ ಗಾಯವಾಗಿದ್ದು, ಭಾನುವಾರ ಇಲ್ಲಿ ದ.ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ.

ಗಾಯದ ತೀವ್ರತೆ ತಿಳಿಯಲು ಮುನ್ನೆಚ್ಚರಿಕಾ ಕ್ರಮವಾಗಿ ಎಕ್ಸ್-ರೇ ತೆಗೆಸಲಾಗಿದ್ದು, ಯಾವುದೇ ತೀವ್ರವಾದ ಗಾಯದ ಬಗ್ಗೆ ವರದಿಯಾಗಿಲ್ಲ ಎನ್ನಲಾಗಿದೆ. ಆದರೂ ತಮೀಮ್ ಇನ್ನೊಂದು ಪರೀಕ್ಷೆಗೆ ಒಳಗಾಗಲಿದ್ದು, ಅದರ ಬಳಿಕವಷ್ಟೇ ಜೂನ್ 02ರಂದು ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಕಣಕ್ಕಿಳಿಯುವ ಬಗ್ಗೆ ಸ್ಪಷ್ಟವಾಗಲಿದೆ.

ತಮೀಮ್ ಭಾರತ ವಿರುದ್ಧದ ಏಕೈಕ ಅಭ್ಯಾಸ ಪಂದ್ಯದಲ್ಲೂ ಕಣಕ್ಕಿಳಿದಿರಲಿಲ್ಲ. ಬಾಂಗ್ಲಾದೇಶ  ನಾಯಕ ಮಶ್ರಾಫೆ ಮೊರ್ತಾಜಾ, ಮುಷ್ತಾಫಿಜುರ್ ರೆಹಮಾನ್ ಹಾಗೂ ಮೊಹಮ್ಮದುಲ್ಲಾ ಈಗಾಗಲೇ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. 


 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!