ವಿಶ್ವಕಪ್ 2019: ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ

Published : Jun 01, 2019, 02:43 PM IST
ವಿಶ್ವಕಪ್ 2019: ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ

ಸಾರಾಂಶ

ಹಾಲಿ ರನ್ನರ್ ಅಪ್ ನ್ಯೂಜಿಲೆಂಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ಲಂಕಾ ತಂಡವು ಕಿವೀಸ್‌ಗೆ ಶಾಕ್ ಕೊಡಲು ಎದುರು ನೋಡುತ್ತಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ... 

ಕಾರ್ಡಿಫ್[ಜೂ.01]: ಹಾಲಿ ವಿಶ್ವಕಪ್ ರನ್ನರ್ ಅಪ್ ನ್ಯೂಜಿಲೆಂಡ್ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಲು ಎದರು ನೋಡುತ್ತಿದ್ದು ಇಂದು ಶ್ರೀಲಂಕಾ ತಂಡವನ್ನು ಎದರಿಸಲು ಸಜ್ಜಾಗಿದೆ. ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಫೀಲ್ಡಿಂಗ್ ಆಯ್ದುಕೊಂಡಿದೆ.

ಭಾರತ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದ ಕಿವೀಸ್ ಪಡೆ, ಸತತ ಸೋಲುಗಳಿಂದ ಕಂಗೆಟ್ಟಿರುವ ಶ್ರೀಲಂಕಾ ಮೇಲೆ ಸವಾರಿ ಮಾಡಲು ಮುಂದಾಗಿದೆ. ಕಳೆದ ವರ್ಷ ಲಂಕಾ ಸತತ 9 ಸೋಲುಗಳನ್ನು ಕಂಡ ಬಳಿಕ ಸ್ಕಾಟ್’ಲ್ಯಾಂಡ್ ವಿರುದ್ಧ ಗೆದ್ದು ನಿಟ್ಟುಸಿರುಬಿಟ್ಟಿತ್ತು.  

ನ್ಯೂಜಿಲೆಂಡ್ ತಂಡವು ಓರ್ವ ಸ್ಪಿನ್ನರ್ ಹಾಗೂ ಇಬ್ಬರು ಆಲ್ರೌಂಡರ್’ನೊಂದಿಗೆ ಕಣಕ್ಕಿಳಿದಿದೆ. ಇನ್ನು ಲಂಕಾ ತಂಡವು ಸಮತೋಲಿತ ತಂಡದೊಂದಿಗೆ ಕಣಕ್ಕಿಳಿದಿದೆ.

ತಂಡಗಳು ಹೀಗಿವೆ:

ನ್ಯೂಜಿಲೆಂಡ್:

ಶ್ರೀಲಂಕಾ:

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!