ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ - ಭವಿಷ್ಯ ನುಡಿದ ತೆಂಡುಲ್ಕರ್!

By Web Desk  |  First Published Jun 7, 2019, 3:49 PM IST

ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ 1 ಗೆಲುವು 1 ಸೋಲು ಕಂಡಿದೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧ ಆರಂಭದಲ್ಲಿ ಅಬ್ಬರಿಸಿ ಬಳಿಕ ಪಂದ್ಯವನ್ನೇ ಕೈಚೆಲ್ಲಿದೆ. ಈ ಪಂದ್ಯದ ಬಳಿಕ ಸಚಿನ್ ತೆಂಡುಲ್ಕರ್ ವಿಂಡೀಸ್ ಭವಿಷ್ಯ ಹೇಳಿದ್ದಾರೆ.


ಮುಂಬೈ(ಜೂ.07): ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಭರ್ಜರಿ ಆರಂಭ ಪಡೆದಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧ ವಿಂಡೀಸ್ ಲೆಕ್ಕಾಚಾರ ಉಲ್ಟಾ ಆಗಿದೆ. ಅದ್ಬುತ ಹೋರಾಟ ನೀಡಿದ ಆಸಿಸ್, ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದೆ. ಆದರೆ ವೆಸ್ಟ್ ಇಂಡೀಸ್ ಬೌಲಿಂಗ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಈ ಪಂದ್ಯದ ಬಳಿಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ವಿಂಡೀಸ್ ಭವಿಷ್ಯ ಹೇಳಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಪೋಸ್ಟ್‌ ಕೆಣಕಿದ ಮೈಕಲ್ ವಾನ್‌ಗೆ ಐಸಿಸಿ ತಿರುಗೇಟು!

Tap to resize

Latest Videos

undefined

ಆಸ್ಟ್ರೇಲಿಯಾ ವಿರುದ್ದ ವೆಸ್ಟ್ ಇಂಡೀಸ್ ಅದ್ಬುತ ಬೌಲಿಂಗ್ ದಾಳಿ ಸಂಘಟಿಸಿದೆ. ಬೌನ್ಸರ್ ಮೂಲಕ ಆಸಿಸ್ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದರು. ಹೀಗಾಗಿ ವಿಂಡೀಸ್ ಈ ಬಾರಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸುವ ತಂಡಗಳ ಪೈಕಿ ಒಂದಾಗಿದೆ ಎಂದು ಸಚಿನ್ ಹೇಳಿದ್ದಾರೆ.

 

West Indies have been aggressive & are bowling test match line & lengths. They have used short pitched deliveries rather well. If they continue in this manner, they are contenders for the TOP 4. playing well is good for Cricket. 🏏

— Sachin Tendulkar (@sachin_rt)

 

ಇದನ್ನೂ ಓದಿ: 2019ರ ವಿಶ್ವಕಪ್ ಟೂರ್ನಿ ಆಡಲು ಬಯಸಿದ್ದ ABD

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಆಡಿದ 2 ಪಂದ್ಯದಲ್ಲಿ 1 ಸೋಲು 1 ಗೆಲುವು ಕಂಡಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಗೆದ್ದ ವಿಂಡೀಸ್, 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿದೆ. 
 

click me!