ಕಿರಿಯತ ಮಹಿಳಾ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿಂದು ಫೈನಲ್ ಕದನ
ಪ್ರಶಸ್ತಿಗಾಗಿಂದು ಭಾರತ ಹಾಗೂ ಕೊರಿಯಾ ನಡುವೆ ಕದನ
ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಭಾರತ ಕಿರಿಯರ ಮಹಿಳಾ ಹಾಕಿ ತಂಡ
ಕಾಕಮಿಗಹರಾ(ಜಪಾನ್): ಆತಿಥೇಯ ಜಪಾನ್ ವಿರುದ್ಧ ಸೆಮಿಫೈನಲ್‌ನಲ್ಲಿ 1-0 ಗೋಲಿನ ರೋಚಕ ಗೆಲುವು ಸಾಧಿಸಿದ ಭಾರತ, ಕಿರಿಯ ಮಹಿಳೆಯರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ 2ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಜೊತೆಗೆ ವರ್ಷಾಂತ್ಯದಲ್ಲಿ ಚಿಲಿಯಲ್ಲಿ ನಡೆಯಲಿರುವ ಎಫ್ಐಎಚ್ ಕಿರಿಯರ ಮಹಿಳಾ ವಿಶ್ವಕಪ್ಗೂ ಅರ್ಹತೆ ಗಿಟ್ಟಿಸಿಕೊಂಡಿತು.
ಶನಿವಾರ ನಡೆದ 8ನೇ ಆವೃತ್ತಿಯ ಕಿರಿಯ ಮಹಿಳೆಯರ ಏಷ್ಯಾಕಪ್ ಹಾಕಿ ( Women’s Junior Asia Cup) ಟೂರ್ನಿಯ ಸೆಮೀಸ್ನಲ್ಲಿ ಭಾರತದ ಪರ 47ನೇ ನಿಮಿಷದಲ್ಲಿ ಸುನೆಲಿತಾ ಟೊಪ್ಪೊ ಏಕೈಕ ಗೋಲು ಬಾರಿಸಿ ತಂಡವನ್ನು ಪ್ರಶಸ್ತಿ ಸುತ್ತಿಗೇರಿಸಿದರು. ಎರಡೂ ತಂಡಗಳಿಗೂ ತಲಾ 12 ಪೆನಾಲ್ಟಿಕಾರ್ನರ್ ಅವಕಾಶ ಸಿಕ್ಕರೂ ಯಾವುದೇ ಗೋಲು ದಾಖಲಾಗಲಿಲ್ಲ. ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿರುವ ಭಾರತ, ಭಾನುವಾರ ಫೈನಲ್ನಲ್ಲಿ 4 ಬಾರಿ ಚಾಂಪಿಯನ್ ಕೊರಿಯಾ ವಿರುದ್ಧ ಸೆಣಸಲಿದೆ. ಕೊರಿಯಾ ಸೆಮೀಸ್ನಲ್ಲಿ ಚೀನಾವನ್ನು 2-0 ಗೋಲುಗಳಿಂದ ಮಣಿಸಿ ಫೈನಲ್ಗೇರಿತು.
undefined
ಭಾರತಕ್ಕಿದು ಎರಡನೇ ಫೈನಲ್: ಕಿರಿಯ ಮಹಿಳೆಯರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭಾರತ ತಂಡವು ಎರಡನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಈ ಮೊದಲು 2012ರಲ್ಲಿ ಭಾರತ ಕಿರಿಯರ ಮಹಿಳಾ ಹಾಕಿ ತಂಡವು ಪ್ರತಿಷ್ಠಿತ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು.
ಪ್ರೊ ಲೀಗ್ ಹಾಕಿ: ನೆದರ್‌ಲೆಂಡ್ಸ್ ವಿರುದ್ದ ಭಾರತಕ್ಕೆ ಸೋಲು
ಐಂಡ್‌ಹೊವೆನ್: ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ, ನೆದರ್‌ಲೆಂಡ್ಸ್ ವಿರುದ್ದ ಸತತ ಎರಡನೇ ಸೋಲು ಅನುಭವಿಸಿದೆ. ಬುಧವಾರ ಮೊದಲ ಮುಖಾಮುಖಿಯಲ್ಲಿ 1-4 ಗೋಲುಗಳಿಂದ ಸೋತಿದ್ದ ಭಾರತ, ಶನಿವಾರ 2-3 ಗೋಲುಗಳಿಂದ ಪರಾಭವಗೊಂಡಿತು.
ಹಾಲಿ ಚಾಂಪಿಯನ್ ನೆದರ್‌ಲೆಂಡ್ಸ್ ತಂಡವು ಆರಂಭದಿಂದಲೇ ಆಕ್ರಮಣಕಾರಿ ಆಟವಾಡಲು ಮುಂದಾಯಿತು. ಹೀಗಾಗಿ 6ನೇ ನಿಮಿಷದಲ್ಲೇ ಡುಕೊ ತೆಲ್ಗೆನ್ಕ್ಯಾಂಪ್ ಗೋಲು ಬಾರಿಸಿದರು. ಇದಾದ ಕೆಲ ಸಮಯದಲ್ಲಿ ಅಂದರೆ 17ನಿಮಿಷದಲ್ಲಿ ಭಾರತದ ಸಂಜಯ್ ಆಕರ್ಷಕ ಗೋಲು ಬಾರಿಸುವ 1-1 ಸಮಬಲ ಸಾಧಿಸುವಂತೆ ಮಾಡಿದರು. ಇದಾದ ಬಳಿಕ ನೆದರ್‌ಲೆಂಡ್ಸ್‌ನ ಬೋರಿಸ್ ಬುಕರ್ದೆತ್(40) ಹಾಗೂ ತೆಜೆಪ್ ಹುಯಿನ್‌ಮೇಕರ್ಸ್(45) ಕೇವಲ 5 ನಿಮಿಷಗಳ ಅಂತರದಲ್ಲಿ ಎರಡು ಗೋಲು ಬಾರಿಸಿದರು. ಇನ್ನು 45ನೇ ನಿಮಿಷದಲ್ಲಿ ಗುರ್ಜಾಂತ್ ಸಿಂಗ್ ಗೋಲು ಬಾರಿಸಿದರು. ಇದಾದ ಬಳಿಕ ಭಾರತ ಸಾಕಷ್ಟು ಪೈಪೋಟಿ ನೀಡಿತಾದರೂ, ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ. ಭಾರತ ಎದುರು ವಿಶ್ವದ ನಂ.1 ಹಾಕಿ ತಂಡವಾದ ನೆದರ್‌ಲೆಂಡ್ಸ್ ತಂಡವು ಸತತ ಎರಡನೇ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಯಿತು.
ರೆಸ್ಲರ್ಗಳ ಆರೋಪ ನಿಜ, ಬ್ರಿಜ್‌ರ ಅಸಭ್ಯ ವರ್ತನೆಯನ್ನು ಕಣ್ಣಾರೆ ಕಂಡಿದ್ದೇನೆ ಎಂದ ಅಂತಾರಾಷ್ಟ್ರೀಯ ರೆಫ್ರಿ!
ಇದರ ಹೊರತಾಗಿಯೂ ಸದ್ಯ ಭಾರತ 15 ಪಂದ್ಯಗಳಲ್ಲಿ 27 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಭಾರತ ಭಾನುವಾರ ಅರ್ಜೆಂಟೀನಾ ವಿರುದ್ದ ಆಡಲಿದೆ.
ಪ್ಯಾರಿಸ್ ಡೈಮಂಡ್ ಲೀಗ್: ಶ್ರೀಶಂಕರ್‌ಗೆ 3ನೇ ಸ್ಥಾನ
ಪ್ಯಾರಿಸ್: ಭಾರತದ ತಾರಾ ಲಾಂಗ್ಜಂಪ್ ಪಟು ಮುರಳಿ ಶ್ರೀಶಂಕರ್ ಪ್ರತಿಷ್ಠಿತ ಪ್ಯಾರಿಸ್ ಡೈಮಂಡ್ ಲೀಗ್ನಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಡೈಮಂಡ್ ಲೀಗ್ನಲ್ಲಿ ಅಗ್ರ 3ರಲ್ಲಿ ಸ್ಥಾನ ಪಡೆದ ಭಾರತದ 3ನೇ ಅಥ್ಲೀಟ್ ಎನಿಸಿಕೊಂಡರು. ಈ ಮೊದಲು ಜಾವೆಲಿನ್ನಲ್ಲಿ ನೀರಜ್ ಚೋಪ್ರಾ, ಡಿಸ್ಕಸ್ ಎಸೆತದಲ್ಲಿ ವಿಕಾಸ್ ಗೌಡ ಈ ಸಾಧನೆ ಮಾಡಿದ್ದರು.
ಶುಕ್ರವಾರ ರಾತ್ರಿ ನಡೆದ ಕೂಟದಲ್ಲಿ 24 ವರ್ಷದ ಶ್ರೀಶಂಕರ್ ತಮ್ಮ 3ನೇ ಪ್ರಯತ್ನದಲ್ಲಿ 8.09 ಮೀ. ದೂರಕ್ಕೆ ಜಿಗಿದು 3ನೇ ಸ್ಥಾನಿಯಾದರು. ಶ್ರೀಶಂಕರ್ ಮುಂಬರುವ ವಿಶ್ವ ಚಾಂಪಿಯನ್ಶಿಪ್ಗೆ ಇನ್ನಷ್ಟೇ ಅರ್ಹತೆ ಪಡೆಯಬೇಕಿದೆ. ವಿಶ್ವ ಚಾಂಪಿಯನ್‌ಶಿಪ್‌ನ ಅರ್ಹತಾ ಗುರಿಯನ್ನು 8.25 ಮೀ.ಗೆ ನಿಗದಿಪಡಿಸಲಾಗಿದೆ.