ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತಕ್ಕೆ ಆತಿಥೇಯ ನೆದರ್‌ಲೆಂಡ್ಸ್ ಸವಾಲು
ಮೊದಲ ಮುಖಾಮುಖಿಯಲ್ಲಿ ಭಾರತ 1-4 ಗೋಲುಗಳಿಂದ ಸೋಲನುಭವಿಸಿತ್ತು
ಸೋಲಿನ ಹೊರತಾಗಿಯೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ
ಐಂಡ್ಹೊವೆನ್(ನೆದರ್ಲೆಂಡ್್ಸ): ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ತಂಡಕ್ಕೆ ಶನಿವಾರ ಮತ್ತೆ ನೆದರ್ಲೆಂಡ್್ಸ ಸವಾಲು ಎದುರಾಗಲಿದೆ. ಹಾಲಿ ಚಾಂಪಿಯನ್ ನೆದರ್ಲೆಂಡ್್ಸ ವಿರುದ್ಧ ಬುಧವಾರದ ಮೊದಲ ಮುಖಾಮುಖಿಯಲ್ಲಿ ಭಾರತ 1-4 ಗೋಲುಗಳಿಂದ ಸೋಲನುಭವಿಸಿತ್ತು.
ಇದರ ಹೊರತಾಗಿಯೂ ಸದ್ಯ ಭಾರತ 14 ಪಂದ್ಯಗಳಲ್ಲಿ 27 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಡಚ್ ಪಡೆ ವಿರುದ್ಧ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಅಗ್ರಸ್ಥಾನ ಭದ್ರಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಈ ಬಾರಿ ಟೂರ್ನಿಯಲ್ಲಿ ನೆದರ್ಲೆಂಡ್್ಸ ಕೇವಲ 5 ಪಂದ್ಯಗಳನ್ನಾಡಿದ್ದು, 8 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ.
undefined
ಮಹಿಳಾ ಹಾಕಿ: ಇಂದು ಭಾರತ-ಜಪಾನ್ ಸೆಮೀಸ್
ಕಾಕಮಿಗಹರಾ(ಜಪಾನ್): 8ನೇ ಆವೃತ್ತಿಯ ಕಿರಿಯ ಮಹಿಳೆಯರ ಏಷ್ಯಾಕಪ್ ಹಾಕಿ ಟೂರ್ನಿಯ ಮೊದಲ ಸೆಮಿಫೈನಲ್ನಲ್ಲಿ ಭಾರತ ತಂಡ ಜಪಾನ್ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಭಾರತ ಟೂರ್ನಿಯ ಇತಿಹಾಸದಲ್ಲಿ 2ನೇ ಬಾರಿ ಫೈನಲ್ಗೇರುವುದರ ಜೊತೆಗೆ, ವರ್ಷಾಂತ್ಯದಲ್ಲಿ ಚಿಲಿಯಲ್ಲಿ ನಡೆಯಲಿರುವ ಎಫ್‌ಐಎಚ್ ಕಿರಿಯರ ಮಹಿಳಾ ವಿಶ್ವಕಪ್ಗೆ ಅರ್ಹತೆ ಪಡೆಯಲಿದೆ.
ರೆಸ್ಲರ್ಗಳ ಆರೋಪ ನಿಜ, ಬ್ರಿಜ್‌ರ ಅಸಭ್ಯ ವರ್ತನೆಯನ್ನು ಕಣ್ಣಾರೆ ಕಂಡಿದ್ದೇನೆ ಎಂದ ಅಂತಾರಾಷ್ಟ್ರೀಯ ರೆಫ್ರಿ!
ಭಾರತ ಈ ಬಾರಿ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದ್ದು, 3 ಜಯ, 1 ಡ್ರಾದೊಂದಿಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿತ್ತು. ಅತ್ತ ಜಪಾನ್ 4 ಪಂದ್ಯದಲ್ಲಿ 9 ಅಂಕದೊಂದಿಗೆ ‘ಬಿ’ ಗುಂಪಿನಲ್ಲಿ 2ನೇ ಸ್ಥಾನಿಯಾಗಿ ಉಪಾಂತ್ಯ ತಲುಪಿದೆ. ಶನಿವಾರದ ಮತ್ತೊಂದು ಸೆಮೀಸ್ನಲ್ಲಿ ಚೀನಾ-ದ.ಕೊರಿಯಾ ಸೆಣಸಾಡಲಿವೆ.
ಪಂದ್ಯ: ರಾತ್ರಿ 9.10ಕ್ಕೆ
ಫುಟ್ಬಾಲ್: ಮಂಗೋಲಿಯಾ ವಿರುದ್ಧ ಭಾರತಕ್ಕೆ 2-0 ಜಯ
ಭುವನೇಶ್ವರ: ಮುಂಬರುವ ಸ್ಯಾಫ್ ಚಾಂಪಿಯನ್ಶಿಪ್ನ ನಡೆಯುತ್ತಿರುವ 3ನೇ ಆವೃತ್ತಿಯ ಇಂಟರ್ ಕಾಂಟಿನೆಂಟಲ್ ಫುಟ್ಬಾಲ್ ಟೂರ್ನಿಯಲ್ಲಿ ಆತಿಥೇಯ ಭಾರತ ಶುಭಾರಂಭ ಮಾಡಿದೆ. ಶುಕ್ರವಾರ ಮಂಗೋಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ 2-0 ಗೆಲುವು ದಾಖಲಿಸಿತು.
ಪಂದ್ಯದ 2ನೇ ನಿಮಿಷದಲ್ಲೇ ಸಹಲ್ ಅಬ್ದುಲ್ ಸಮದ್ ಬಾರಿಸಿದ ಗೋಲಿನಿಂದಾಗಿ ಭಾರತ ಮುನ್ನಡೆ ಸಾಧಿಸಿತು. ಲಾಲಿಯನ್ಜುವಾಲಾ ಚಾಂಗ್ಟೆ14ನೇ ನಿಮಿಷದಲ್ಲಿ ಹೊಡೆದ ಆಕರ್ಷಕ ಗೋಲಿನ ಬಳಿಕ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದ ಭಾರತ ಗೆಲುವನ್ನು ತನ್ನತ್ತ ಒಲಿಸಿಕೊಂಡಿತು. ಭಾರತ ತನ್ನ 2ನೇ ಪಂದ್ಯದಲ್ಲಿ ಸೋಮವಾರ ವಾನವಾಟು ವಿರುದ್ಧ ಸೆಣಸಾಡಲಿದ್ದು, ಲೆಬನಾನ್ ವಿರುದ್ಧದ ಕೊನೆ ಪಂದ್ಯ ಜೂ.15ಕ್ಕೆ ನಿಗದಿಯಾಗಿದೆ. 4 ತಂಡಗಳ ಟೂರ್ನಿಯಲ್ಲಿ ಅಗ್ರ 2 ತಂಡಗಳು ಫೈನಲ್ ಪ್ರವೇಶಿಸಲಿವೆ.
ಕಿರಿಯರ ಶೂಟಿಂಗ್ ವಿಶ್ವಕಪ್: 15 ಪದಕ ಗೆದ್ದ ಭಾರತೀಯರು
ಸಹ್‌್ಲ(ಜರ್ಮನಿ): ಐಎಸ್ಎಸ್ಎಫ್ ಜೂನಿಯರ್ ಶೂಟಿಂಗ್ ವಿಶ್ವಕಪ್ನಲ್ಲಿ ಭಾರತ 15 ಪದಕಗಳೊಂದಿಗೆ ಅಗ್ರಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿದೆ. ಭಾರತ ಕೂಟದಲ್ಲಿ 6 ಚಿನ್ನ, 6 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿತು. ಕೊನೆ ದಿನವಾದ ಗುರುವಾರ ಪುರುಷರ 25 ಮೀ. ರಾರಯಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಸಮೀರ್, ರಾಜ್ಕನ್ವಾರ್ ಸಿಂಗ್ ಹಾಗೂ ಜತಿನ್ ಜೋಡಿ ಬೆಳ್ಳಿ ಪಡೆಯಿತು. ಕೊರಿಯಾ 12 ಪದಕಗಳೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದರೆ, ಅಮೆರಿಕ 9 ಪದಕ ಗೆದ್ದು 3ನೇ ಸ್ಥಾನಿಯಾಯಿತು.
ಕಿರಿಯರ ಬ್ಯಾಡ್ಮಿಂಟನ್: ರಾಜ್ಯದ ನಾಲ್ವರು ಆಯ್ಕೆ
ನವದೆಹಲಿ: ಜು.7ರಿಂದ 16ರ ವರೆಗೂ ಇಂಡೋನೇಷ್ಯಾದಲ್ಲಿ ನಡೆಯಲಿರುವ ಕಿರಿಯರ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ 20 ಸದಸ್ಯರ ಭಾರತ ತಂಡ ಪ್ರಕಟಗೊಂಡಿದ್ದು, ಕರ್ನಾಟಕದ ನಾಲ್ವರು ಶಟ್ಲರ್‌ಗಳು ಆಯ್ಕೆಯಾಗಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗಕ್ಕೆ ಆಯುಷ್ ಶೆಟ್ಟಿ, ಪುರುಷರ ಡಬಲ್ಸ್‌ಗೆ ನಿಕೋಲಸ್ ನೇಥನ್ ರಾಜ್ ಹಾಗೂ ತುಷಾರ್ ಸುವೀರ್, ಮಹಿಳಾ ಡಬಲ್ಸ್‌ಗೆ ಕಾರ್ಣಿಕಾ ಶ್ರೀ ಆಯ್ಕೆಯಾಗಿದ್ದಾರೆ.