ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಇಟಲಿ ಮಹಿಳಾ ಹಾಕಿ ತಂಡ!

By Suvarna News  |  First Published Jan 15, 2024, 6:45 PM IST

ಒಲಿಂಪಿಕ್ ಕ್ವಾಲಿಫೈಯರ್ ಪಂದ್ಯ ಆರಂಭಕ್ಕೂ ಮೊದಲು ಇಟಲಿ ಮಹಿಳಾ ಹಾಕಿ ತಂಡ ರಾಂಚಿ ಜಗನ್ನಾಥನ ದರ್ಶನ ಪಡೆದಿದೆ. ಉತ್ತಮ ಪ್ರದರ್ಶನದ ಮೂಲಕ ಒಲಿಂಪಿಕ್‌ಗೆ ಅರ್ಹತೆ ಪಡೆಯಲು ಸಂಪೂರ್ಣ ತಂಡ ಜಗನ್ನಾಥನ ದರ್ಶನ ಪಡೆದಿದೆ.


ರಾಂಚಿ(ಜ.15) ಹಾಕಿ ಒಲಿಂಪಿಕ್ಸ್ ಕ್ವಾಲಿಫೈಯರ್ ಟೂರ್ನಿ ಆರಂಭಗೊಂಡಿದೆ. ಭಾರತ ಆತಿಥ್ಯವಹಿಸಿರುವ ಈ ಟೂರ್ನಿಗೆ ಅಮೆರಿಕ, ಜಪಾನ್, ಜೆಕ್ ಗಣರಾಜ್ಯ ಸೇರಿ 7 ವಿವಿಧ ತಂಡಗಳು ಆಗಮಿಸಿದೆ. ಇದೀಗ ಇಟಲಿ ಮಹಿಳಾ ತಂಡ ಮಹತ್ವದ ಪಂದ್ಯಕ್ಕೂ ಮುನ್ನ ರಾಂಚಿಯ ಜಗನ್ನಾಥನ ದರ್ಶನ ಪಡೆದಿದೆ. ಇಟಲಿ ಮಹಿಲಾ ತಂಡದ ಸಂಪೂರ್ಣ ಅಟಗಾರ್ತಿಯರು ಹಾಗೂ ಸಹಾಯಕ ಸಿಬ್ಬಂದಿ ಜಗನ್ನಾಥನ ದರ್ಶನ ಪಡೆದಿದ್ದಾರೆ. ಸಾಂಪ್ರಾದಾಯಿಕ ಪೂಜೆ ಸಲ್ಲಿಸಿದ ಇಟಲಿ ತಂಡ ಉತ್ತಮ ಪ್ರದರ್ಶನಕ್ಕಾಗಿ ಪ್ರಾರ್ಥಿಸಿದೆ. ಇಟಲಿ ಮಹಿಳಾ ತಂಡದ ಜಗನ್ನಾಥನ ದರ್ಶನ ವಿಡಿಯೋ ವೈರಲ್ ಆಗಿದೆ.

ಮಹಿಳಾ ತಂಡದ ಆಟಗಾರ್ತಿಯರೂ ಹಾಗೂ ಸಹಾಯಕ ಸಿಬ್ಬಂದಿಗಳು ಜಗನ್ನಾಥ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಅರ್ಚಕರು ಹೇಳಿದ ಮಂತ್ರಗಳನ್ನು ಪುನರುಚ್ಚರಿಸಿ ತಂಡದ ಯಶಸ್ಸಿಗೆ ಪ್ರಾರ್ಥಿಸಿದ್ದಾರೆ. ಇಟಲಿ ತಂಡ ಜಗನ್ನಾಥನ ದರ್ಶನ, ಪೂಜೆ ಕುರಿತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Latest Videos

undefined

ವಿಶ್ವ ಹಾಕಿ ವಾರ್ಷಿಕ ಪ್ರಶಸ್ತಿ ಪಡೆದ ಸವಿತಾ ಪೂನಿಯ, ಹಾರ್ದಿಕ್ ಸಿಂಗ್

ವಿಶ್ವ ಮಹಿಳಾ ಹಾಕಿಯಲ್ಲಿ 19ನೇ ಸ್ಥಾನದಲ್ಲಿರುವ ಇಟಲಿ ಈ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯು ವಿಶ್ವಾಸದಲ್ಲಿದೆ. ಆದರೆ ಅನುಭವಿ ಆಟಗಾರರ ಕೊರತೆಯಲ್ಲಿರುವ ಇಟಲಿ ಇದುವರೆಗೂ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಇಟಲಿ ಮಹಿಳಾ ಹಾಕಿ ತಂಡದ ನಾಯಕಿ ಫೆಡ್ರಿಕಾ ಕಾರ್ತಾ 57 ಪಂದ್ಯಗಳನ್ನಾಡಿದ್ದಾರೆ. ಕೆಲ ತಿಂಗಳಿನಿಂದ ಒಲಿಂಪಿಕ್ಸ್ ಕ್ವಾಲಿಫೈಯರ್ ಪಂದ್ಯಕ್ಕಾಗಿ ಅಭ್ಯಾಸ ಮಾಡಿದ್ದೇವೆ. ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಇಟಲಿ ತಂಡದ ನಾಯಕಿ ಹೇಳಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Hockey India (@hockeyindia)

 

ಟೂರ್ನಿಯಲ್ಲಿ ಭಾರತ ಸೇರಿದಂತೆ 8 ತಂಡಗಳು ಪಾಲ್ಗೊಂಡಿದೆ. ಅಗ್ರ-3 ತಂಡಗಳು ಒಲಿಂಪಿಕ್ಸ್‌ ಟಿಕೆಟ್‌ ಪಡೆದುಕೊಳ್ಳಲಿದೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 6ನೇ ಸ್ಥಾನದಲ್ಲಿರುವ ಭಾರತ ‘ಬಿ’ ಗುಂಪಿನಲ್ಲಿದ್ದು, ಜ.14ರಂದು ನ್ಯೂಜಿಲೆಂಡ್‌, ಜ.16ರಂದು ಇಟಲಿ ವಿರುದ್ಧ ಸೆಣಸಾಡಲಿವೆ. ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಜ.18ಕ್ಕೆ ಸೆಮೀಸ್‌, ಜ.19ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ. 

 

ಟೆನಿಸ್ ತಾರೆ ಕರ್ಮನ್ ಕೈಹಿಡಿದ ಹಾಕಿ ಆಟಗಾರ ಗುರ್ಜಂತ್ ಸಿಂಗ್

ಭಾರತ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ದ ಮುಗ್ಗರಿಸಿತ್ತು. ವಿಶ್ವ ರ್‍ಯಾಂಕಿಂಗ್‌ನಲ್ಲಿ 24ನೇ ಸ್ಥಾನದಲ್ಲಿರುವ ಅಮೆರಿಕದ ವಿರುದ್ಧ ವಿಶ್ವ ನಂ.6 ಭಾರತ ಪಂದ್ಯದುದ್ದಕ್ಕು ಪ್ರಾಬಲ್ಯ ಸಾಧಿಸಿದ್ದಲ್ಲದೇ, 7 ಬಾರಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡಿತು. ಆದರೆ ಒಂದೂ ಗೋಲು ಬಾರಿಸಲು ಅಮೆರಿಕ ರಕ್ಷಣಾಪಡೆ ಅವಕಾಶ ನೀಡಲಿಲ್ಲ. ಈ ಸೋಲು ತಂಡದ ಒಲಿಂಪಿಕ್ಸ್‌ ಅರ್ಹತೆಯ ಹಾದಿಯನ್ನು ಕಠಿಣಗೊಳಿಸಿದೆ. 
 

click me!