ಭಾರತ ಮಹಿಳಾ ಹಾಕಿ ತಂಡವು ಅರ್ಜೆಂಟೀನಾ ವಿರುದ್ದ ಕೊನೆಯ ಪಂದ್ಯದಲ್ಲಿ 1-1ರಲ್ಲಿ ಡ್ರಾ ಸಾಧಿಸುವ ಮೂಲಕ ತನ್ನ ಅಭಿಯಾನ ಮುಗಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬ್ಯುನಸ್ ಐರಿಸ್(ಫೆ.02): ಭಾರತ ಮಹಿಳಾ ಹಾಕಿ ತಂಡ, ಅರ್ಜೆಂಟೀನಾ ಪ್ರವಾಸದಲ್ಲಿನ ಕೊನೆಯ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಿದೆ. ಇಲ್ಲಿ ನಡೆದ ಪಂದ್ಯದಲ್ಲಿ ವಿಶ್ವ ನಂ.2 ಅರ್ಜೆಂಟೀನಾ ವಿರುದ್ಧ ಭಾರತ 1-1 ಗೋಲುಗಳಿಂದ ಡ್ರಾ ಮಾಡಿಕೊಂಡಿದೆ.
ಪಂದ್ಯದ 35ನೇ ನಿಮಿಷದಲ್ಲಿ ಭಾರತ ತಂಡದ ನಾಯಕಿ ರಾಣಿ ರಾಂಪಾಲ್ ಗೋಲು ದಾಖಲಿಸಿದರು. ಇನ್ನು ಅರ್ಜೆಂಟೀನಾ ಪರ ಎಮಿಲಾ ಪೋರ್ಚರಿಯೋ ಗೋಲು ಬಾರಿಸುವ ಮೂಲಕ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು.
Rani’s deflection, Argentina’s Penalty Stroke, Savita’s defending and more details from last night’s encounter 👉 https://t.co/PxGtE9Po1e
— Hockey India (@TheHockeyIndia)FT: 🇮🇳 1 - 1 🇦🇷
It has been rumbling in Buenos Aires but our Eves managed to steal the thunder with their impressive game tonight! 💪
Congratulations on ending the Tour on a sweet note. 🏑 pic.twitter.com/8672FKS2m4
ಹಾಕಿ: ಚಿಲಿ ಹಿರಿಯರ ತಂಡದ ಎದುರು ಭಾರತ ಕಿರಿಯರ ತಂಡ ದಿಗ್ವಿಜಯ
ಶನಿವಾರ ನಡೆದ 3ನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಮೊದಲೆರಡು ಪಂದ್ಯವನ್ನು 1-2 ಹಾಗೂ 2-3 ರಿಂದ ಸೋಲುಂಡಿತ್ತು. ಇದಕ್ಕೂ ಮುನ್ನ ಅರ್ಜೆಂಟೀನಾ ಜೂನಿಯರ್ ತಂಡದ ಎದುರು 2-2, 1-1 ರಿಂದ ಸಮಬಲ ಸಾಧಿಸಿತ್ತು.