ಭಾರತ ಮಹಿಳಾ ಹಾಕಿ ತಂಡಗಳಿಗೆ ಮಿಶ್ರಫಲ ಎದುರಾಗಿದೆ. ಕಿರಿಯರ ತಂಡ ಚಿಲಿ ವಿರುದ್ದ ದಿಗ್ವಿಜಯ ಸಾಧಿಸಿದ್ದರೆ, ಅರ್ಜೆಂಟೀನಾ ‘ಬಿ’ ತಂಡದ ಎದುರು ಭಾರತ ಮಹಿಳಾ ತಂಡ ಸೋಲಿನ ಕಹಿಯುಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಸ್ಯಾಂಟಿಯಾಗೋ(ಚಿಲಿ): ಭಾರತ ಕಿರಿಯ ಮಹಿಳಾ ಹಾಕಿ ತಂಡ ಚಿಲಿ ಪ್ರವಾಸವನ್ನು ಅಜೇಯವಾಗಿ ಮುಕ್ತಾಯಗೊಳಿಸಿದೆ. ಪಂದ್ಯಾವಳಿಯ 6ನೇ ಪಂದ್ಯದಲ್ಲಿ ಭಾರತ ತಂಡ ಚಿಲಿ ಹಿರಿಯರ ತಂಡವನ್ನು 2-1 ಗೋಲುಗಳಿಂದ ಸೋಲಿಸಿತು. ಪ್ರವಾಸದಲ್ಲಿ ಭಾರತ 5 ಗೆಲುವು, 1 ಡ್ರಾ ಸಾಧಿಸಿತು.
ಭಾರತ ಕಿರಿಯರ ಮಹಿಳಾ ತಂಡ ಈ ಹಿಂದಿನ ಪಂದ್ಯದಲ್ಲಿ ಚಿಲಿ ವಿರುದ್ದ 2-0 ಅಂತರದ ಗೆಲುವನ್ನು ದಾಖಲಿಸಿತ್ತು. ಇದೀಗ ಪ್ರವಾಸದ ಕೊನೆಯ ಪಂದ್ಯದಲ್ಲೂ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸೋಲಿಲ್ಲದೇ ಜೂನಿಯರ್ ಮಹಿಳಾ ಹಾಕಿ ತಂಡ ಪ್ರವಾಸವನ್ನು ಸ್ಮರಣೀಯವಾಗಿಸಿಕೊಂಡಿದೆ.
ಒಂದು ವರ್ಷಗಳ ಬಳಿಕ ಹಾಕಿ ಟೂರ್ನಿ; ಅರ್ಜಂಟೀನಾ ಪ್ರವಾಸಕ್ಕೆ ಸಜ್ಜಾದ ಭಾರತ ಮಹಿಳಾ ತಂಡ!
FT: 🇮🇳 2-1 🇨🇱
A fantastic end to a brilliant tour! 🎉
WHAT. A. TEAM. 🔥 pic.twitter.com/D8B2P7xCd1
ಹಾಕಿ: ಅರ್ಜೆಂಟೀನಾ ವಿರುದ್ಧ ಭಾರತಕ್ಕೆ ಸೋಲು
ಬ್ಯೂನಸ್ ಐರಿಸ್: ಭಾರತ ಮಹಿಳಾ ಹಾಕಿ ತಂಡ ಅರ್ಜೆಂಟೀನಾ ಪ್ರವಾಸದಲ್ಲಿ ಸತತ 2ನೇ ಸೋಲು ಕಂಡಿದೆ. ಅರ್ಜೆಂಟೀನಾ ‘ಬಿ’ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಭಾರತ 2-3 ಗೋಲುಗಳಿಂದ ಸೋಲು ಅನುಭವಿಸಿತು. ರಾಣಿ ರಾಂಪಾಲ್ ನೇತೃತ್ವದ ತಂಡ ಮುಂದಿನ 4 ಪಂದ್ಯಗಳಲ್ಲಿ ವಿಶ್ವ ನಂ.2 ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.