ಈ ವರ್ಷ ಆಸ್ಟ್ರೇಲಿಯನ್ ಓಪನ್‌ನ 4ನೇ ಸುತ್ತಿನಲ್ಲಿ ಟಿಟ್ಸಿಪಾಸ್ ವಿರುದ್ಧ ಅಚ್ಚರಿಯ ಸೋಲು ಕಂಡಿದ್ದ ಫೆಡರರ್, ಆ ಸೋಲಿಗೆ ಸೇಡು ತೀರಿಸಿಕೊಂಡಿದ್ದಲ್ಲದೆ ಗೆಲುವನ್ನು ಅವಿಸ್ಮರಣೀಯ ಗೊಳಿಸಿಕೊಂಡರು.
ದುಬೈ(ಮಾ.03): ಟೆನಿಸ್ ಮಾಂತ್ರಿಕ, ಸ್ಪಿಜರ್‌ಲೆಂಡ್‌ನ ರೋಜರ್ ಫೆಡರರ್ ತಮ್ಮ ವೃತ್ತಿಬದುಕಿನ 100ನೇ ಪ್ರಶಸ್ತಿ ಜಯಿಸಿದ್ದಾರೆ.
ಶನಿವಾರ ಇಲ್ಲಿ ನಡೆದ ದುಬೈ ಓಪನ್ ಫೈನಲ್'ನಲ್ಲಿ ಗ್ರೀಸ್‌ನ ಯುವ ಆಟಗಾರ ಸ್ಟೆಫಾನೋ ಟಿಟ್ಸಿಪಾಸ್ ವಿರುದ್ಧ 6-4, 6-4 ಸೆಟ್‌ಗಳಲ್ಲಿ ಜಯಿಸಿದ ಫೆಡರರ್, ಪ್ರಶಸ್ತಿಗಳ ಶತಕ ಬಾರಿಸಿದರು. ಈ ಮೂಲಕ 100 ಪ್ರಶಸ್ತಿ ಮೈಲಿಗಲ್ಲು ತಲುಪಿದ ವಿಶ್ವದ 2ನೇ ಟೆನಿಸಿಗ ಎನ್ನುವ ದಾಖಲೆಯನ್ನು ರೋಜರ್ ಬರೆದರು. ಅಮೆರಿಕದ ದಿಗ್ಗಜ ಜಿಮ್ಮಿ ಕಾನ್ಸರ್ 109 ಪ್ರಶಸ್ತಿಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
Welcome to the “ Triple Digit” tournament victory club — I’ve been a bit lonely- glad to have the company !!!
— Jimmy Connors (@JimmyConnors)Happy to join! 😄 https://t.co/wTvZZIhHCa
— Roger Federer (@rogerfederer)ಈ ವರ್ಷ ಆಸ್ಟ್ರೇಲಿಯನ್ ಓಪನ್‌ನ 4ನೇ ಸುತ್ತಿನಲ್ಲಿ ಟಿಟ್ಸಿಪಾಸ್ ವಿರುದ್ಧ ಅಚ್ಚರಿಯ ಸೋಲು ಕಂಡಿದ್ದ ಫೆಡರರ್, ಆ ಸೋಲಿಗೆ ಸೇಡು ತೀರಿಸಿಕೊಂಡಿದ್ದಲ್ಲದೆ ಗೆಲುವನ್ನು ಅವಿಸ್ಮರಣೀಯ ಗೊಳಿಸಿಕೊಂಡರು. 1998ರಲ್ಲಿ ವೃತ್ತಿಪರ ಟೆನಿಸಿಗನಾದ ಫೆಡರರ್, 2001ರಲ್ಲಿ ಮಿಲಾನ್ ಒಳಾಂಗಣ ಟೂರ್ನಿ ಗೆಲ್ಲುವ ಮೂಲಕ ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟಿದ್ದರು. ಬಳಿಕ 2003ರಲ್ಲಿ ವಿಂಬಲ್ಡನ್ ಗೆಲ್ಲುವ ಮೂಲಕ ಫೆಡರರ್ ಮೊದಲ ಬಾರಿಗೆ ಗ್ರ್ಯಾಂಡ್‌ಸ್ಲಾಂ ಚಾಂಪಿಯನ್ ಆಗಿದ್ದರು.