Kodava Hockey Festival: ಬೊಟ್ಟೋಳಂಡಕ್ಕೆ ಭರ್ಜರಿ ಜಯ

By Kannadaprabha News  |  First Published Mar 24, 2023, 8:45 AM IST

ಜನರಲ್‌ ಕೆ.ಎಸ್‌. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆ
ಅಲ್ಲುಮಡ, ಬೊಟ್ಟೋಳಂಡ ಸೇರಿದಂತೆ ವಿವಿಧ ತಂಡಗಳು ಮುಂದಿನ ಸುತ್ತು ಪ್ರವೇಶ
ಬೊಟ್ಟೋಳಂಡ ತಂಡವು ಮಂದನೆರವಂಡ ತಂಡದ ವಿರುದ್ಧ 6-0 ಅಂತರದ ಭರ್ಜರಿ ಗೆಲುವು


- ದುಗ್ಗಳ ಸದಾನಂದ, ಕನ್ನಡಪ್ರಭ

ನಾಪೋಕ್ಲು(ಮಾ.24): ಇಲ್ಲಿಗೆ ಸಮೀಪದ ಚೆರಿಯ ಪರಂಬುವಿನ ಜನರಲ್‌ ಕೆ.ಎಸ್‌. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಗುರುವಾರದ ಪಂದ್ಯಗಳಲ್ಲಿ ಮಂಡೇಟಿರ, ಅಳಮೇಂಗಡ, ಚೆಯ್ಯಂಡ, ಅಜ್ಜಮಾಡ, ಬೊಳ್ಳಚೆಟ್ಟೀರ, ಅಲ್ಲುಮಡ, ಬೊಟ್ಟೋಳಂಡ ಸೇರಿದಂತೆ ವಿವಿಧ ತಂಡಗಳು ಮುಂದಿನ ಸುತ್ತು ಪ್ರವೇಶಿಸಿದವು.

Latest Videos

undefined

ಗುರುವಾರದ ಪಂದ್ಯಗಳಲ್ಲಿ ಬೊಟ್ಟೋಳಂಡ ತಂಡವು ಮಂದನೆರವಂಡ ತಂಡದ ವಿರುದ್ಧ 6-0 ಅಂತರದ ಭರ್ಜರಿ ಗೆಲುವು ಸಾಧಿಸಿದರೆ ಮಂಡೇಟಿರ ತಂಡವು ನಡಿಕೇರಿಯಂಡ ತಂಡದ ವಿರುದ್ಧ 5-0 ಅಂತರದ ಗೆಲುವು ಸಾಧಿಸಿತು. ಆಳಮೇಂಗಡ ತಂಡವು ಕುಂಡ್ರಂಡ ತಂಡದ ವಿರುದ್ಧ, ಚೆಯ್ಯಂಡ ತಂಡವು ಬೊಟ್ಟಂಗಡ ತಂಡದ ವಿರುದ್ಧ ಹಾಗೂ ಅಜ್ಜಮಾಡ ತಂಡವು ಬೊಳ್ಳುತಂಡ ತಂಡದ ವಿರುದ್ಧ ಗೆಲುವು ಸಾಧಿಸಿತು. ಚೆಯ್ಯಂಡ ತಂಡವು ಬೊಟ್ಟಂಗಡ ತಂಡದ ವಿರುದ್ಧ ಸೋಲನ್ನು ಅನುಭವಿಸಿದರೆ, ಕೊಟ್ರಮಾಡ ತಂಡವು ಅಲ್ಲುಮಡ ತಂಡದ ವಿರುದ್ಧ ಸೋಲೊಪ್ಪಿಕೊಂಡಿತು.

ಮೈದಾನ ಎರಡರಲ್ಲಿ ಮಾಳೆಯಂಡ ಮತ್ತು ಬಾರಿಯಂಡ ತಂಡಗಳ ನಡುವೆ ಸೆಣೆಸಾಟ ನಡೆಯಿತು. ಭಾರಿಯಂಡ ತಂಡ ಎರಡು ಗೋಲು ಗಳಿಸಿದರೆ, ಮಾಳೆಯಂಡ ತಂಡಕ್ಕೆ ಯಾವುದೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಮಾಚಂಗಡ ತಂಡವು ನಾಯಕಂಡ ತಂಡದ ವಿರುದ್ಧ 2-1 ಅಂತರದ ಗೆಲುವು ಸಾಧಿಸಿತು. ದಾಸಂಡ ತಂಡವು ಬಡ್ಡಿರ ತಂಡದ ವಿರುದ್ಧ ಸೋಲನ್ನು ಅನುಭವಿಸಿತು. ಕುಮ್ಮಂಡ ಮತ್ತು ಚಂಗುಲಂಡ ತಂಡಗಳ ನಡುವಿನ ಪಂದ್ಯದಲ್ಲಿ ಕುಮ್ಮಂಡ ತಂಡ ನಾಲ್ಕು ಗೋಲು ಗಳಿಸಿದರೆ ಚಂಗುಲಂಡ ತಂಡ ಯಾವುದೇ ಗೋಲು ದಾಖಲಿಸದೆ ಸೋಲು ಅನುಭವಿಸಿತು. ಅಚ್ಚಪಂಡ ಮತ್ತು ಮುದ್ದಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಅಚ್ಚಪಂಡ 3-2 ಅಂತರದಿಂದ ಗೆಲುವು ಸಾಧಿಸಿತು. ಚೌಕ ಮತ್ತು ಅನರ್‌ ಖಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೌಕಿದ ತಂಡ ಜಯ ಸಾಧಿಸಿತು. ಕನ್ನಂಡ ಮತ್ತು ಅಪ್ಪಾರಂಡ ತಂಡಗಳ ನಡುವಿನ ಪಂದ್ಯದಲ್ಲಿ ಕನ್ನಂಡ ತಂಡ 4-0 ಅಂತರದ ಭರ್ಜರಿ ಜಯ ಸಾಧಿಸಿತು.

ಮಹಿಳಾ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಶಿಪ್‌: ಲವ್ಲೀನಾ ಸೇರಿದಂತೆ ಭಾರ​ತದ ನಾಲ್ವರು ಫೈನ​ಲ್‌​ಗೆ

ಮೈದಾನ ಮೂರರಲ್ಲಿ ನಡೆದ ಅಪ್ಪಚ್ಚಿರ ಮತ್ತು ಪಟ್ಟಚೆರುವಂಡ ತಂಡಗಳ ನಡುವಿನ ಪಂದ್ಯದಲ್ಲಿ ಅಪ್ಪಚ್ಚಿರ ತಂಡಕ್ಕೆ 3-0 ಅಂತರದ ಗೆಲುವು ಲಭಿಸಿತು. ಮೇಕತಂಡ ಮತ್ತು ಕುಂಡ್ಯೋಳಂಡ ತಂಡಗಳ ನಡುವಿನ ಪಂದ್ಯದಲ್ಲಿ ಕುಂಡ್ಯೋಳಂಡ ಮುಂದಿನ ಸುತ್ತು ಪ್ರವೇಶಿಸಿತು. ಕೋಡಿಮಣಿಯಂಡ ತಂಡ ಮತ್ತಂಡ ತಂಡದ ವಿರುದ್ಧ ಒಂದು ಗೋಲಿನ ಅಂತರದಿಂದ ಸೋಲನ್ನು ಅನುಭವಿಸಿತು. ಚೇಮಿರ ಮತ್ತು ಕರವಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕರವಟ್ಟಿನ ತಂಡಕ್ಕೆ 4-0 ಅಂತರದ ಗೆಲುವು ದಾಖಲಿಸಿತು. ಕಾಳೆಂಗಡ ಮತ್ತು ನೆಲ್ಲಿರ ತಂಡಗಳ ನಡುವಿನ ಪಂದ್ಯದಲ್ಲಿ ಕಾಳೆಂಗಡ ಮುಂದಿನ ಸುತ್ತು ಪ್ರವೇಶಿಸಿತು. ಅದೇಂಗಡ ಮತ್ತು ಚಂಗೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅದೆಂಗಡ 4-3 ಅಂತರದಿಂದ ಮುನ್ನಡೆ ಸಾಧಿಸಿತು.

* ಇಂದಿನ ಪಂದ್ಯಗಳು

ಮೈದಾನ 1

8.30ಕ್ಕೆ ತಾತಂಡ- ಮುಕ್ಕಾಟಿರ( ಕುಂಬಳದಾಳು)

9:30ಕ್ಕೆ ಕೇಟೋಳಿರ-ಕೊಂಗಂಡ

10:30ಕ್ಕೆ ಚೌರಿರ ( ಹೊದವಾಡ)-ಮಾದೆಯಂಡ

11:30ಕ್ಕೆಕಡೇಮಾಡ-ಮೂಕೊಂಡ

12.30 ಕ್ಕೆ ಕೊಕ್ಕಂಡ-ಬಚ್ಚಂಗಡ

1:30ಕ್ಕೆ ಅಲ್ತಂಡ-ನಾಪನೆರವಂಡ

2.30 ಕ್ಕೆ ಸುಳ್ಳಿಮಾಡ- ಪೊನ್ನಚೆಟ್ಟಿರ

ಮೈದಾನ 2

8.30 ಕ್ಕೆ ಪಾಲೆಯಡ- ತೆನ್ನಿರ

9:30ಕ್ಕೆ ಅಪ್ಪದೇರಂಡ-ಚೊಟ್ಟೇರ

10:30ಕ್ಕೆ ಪೆಮ್ಮಂಡ-ಬೊಳ್ಳೆರ

11:30ಕ್ಕೆ ಕೇಚಮಾಡ-ಇಟ್ಟೀರ

12:30ಕ್ಕೆ ನಾಟೋಳಂಡ-ಮಲ್ಲಮಾಡ

1:30 ಕ್ಕೆ ಕಾಣತಂಡ-ಮಂಡೇಡ

2:30ಕ್ಕೆ ಮಂಡಿರ (ನೆಲಜಿ)- ಅಲ್ಲಂಡ

ಮೈದಾನ 3

8:30ಕ್ಕೆ ಮಾಲೆಟಿರ( ಕೆದ ಮುಳ್ಳೂರು)- ಮುಕ್ಕಾಟಿರ ಪುಲಿಕೋಟು

9:30 ಪಾಲಚಂಡ-ಕೋಡಿರ

10.30ಕ್ಕೆಮೂಕಳೆರ- ಕಾಯಪಾಂಡ

11:30ಕ್ಕೆ ಅಜ್ಜಿಕುಟ್ಟಿರ- ಬಲ್ಲಚಂಡ

12:30ಕ್ಕೆ ಪುಲ್ಲೇರ- ಕಂಬೆಯಂಡ

1.30 ಕ್ಕೆ ಉದಿಯಂಡ-ಕರ್ತಮಾಡ (ಶೆಟ್ಟಿಗೇರಿ)

2.30ಕ್ಕೆ ಮುಕ್ಕಾಟಿರ (ಹರಿಹರ)- ಮೂರ್ಕೊಂಡ
 

click me!