BREAKING: ಇತಿಹಾಸ ರಚಿಸಿದ ಮಹಿಳಾ ಹಾಕಿ ತಂಡ, ಚೀನಾ ಬಗ್ಗುಬಡಿದು 44 ವರ್ಷಗಳ ಬಳಿಕ ಏಷ್ಯನ್‌ ಗೇಮ್ಸ್‌ನಲ್ಲಿ ಸ್ವರ್ಣ, ಒಲಿಂಪಿಕ್ಸ್‌ಗೆ ನೇರ ಅರ್ಹತೆ

Published : Oct 02, 2026, 06:16 PM IST
Womens Hockey Team

ಸಾರಾಂಶ

ಏಷ್ಯನ್ ಗೇಮ್ಸ್ 2026ರ ಮಹಿಳಾ ಹಾಕಿ ಫೈನಲ್‌ನಲ್ಲಿ ಚೀನಾ ವಿರುದ್ಧ ಭಾರತ 1-0 ಅಂತರದ ಐತಿಹಾಸಿಕ ಜಯ ಸಾಧಿಸಿದೆ. ಲಾಲ್‌ರೆಮ್‌ಸಿಯಾಮಿ ಅವರ ನಿರ್ಣಾಯಕ ಗೋಲು ಮತ್ತು ಸವಿತಾ ಪುನಿಯಾ ಅವರ ಅದ್ಭುತ ಪ್ರದರ್ಶನದಿಂದ 44 ವರ್ಷಗಳ ಬಳಿಕ ಭಾರತಕ್ಕೆ ಚಿನ್ನದ ಪದಕ ಒಲಿದಿದೆ.

ಟೋಕಿಯೋ (ಅ.2): ಭಾರತೀಯ ಮಹಿಳಾ ಹಾಕಿ ತಂಡವು ನೂತನ ಇತಿಹಾಸ ನಿರ್ಮಿಸಿದೆ. ಶುಕ್ರವಾರ (ಅಕ್ಟೋಬರ್ 2) ನಡೆದ 'ಏಷ್ಯನ್ ಗೇಮ್ಸ್ 2026'ರ ಮಹಿಳಾ ಹಾಕಿ ವಿಭಾಗದ ರೋಚಕ ಫೈನಲ್ ಪಂದ್ಯದಲ್ಲಿ ಪ್ರಬಲ ಚೀನಾ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ಭಾರತೀಯ ಪಡೆ, ಬರೋಬ್ಬರಿ 44 ವರ್ಷಗಳ ನಂತರ ಐತಿಹಾಸಿಕ ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿದೆ. ಈ ಸ್ಮರಣೀಯ ಗೆಲುವಿನೊಂದಿಗೆ ಭಾರತೀಯ ಮಹಿಳಾ ಹಾಕಿಯಲ್ಲಿ ನಾಲ್ಕು ದಶಕಗಳ ಸುದೀರ್ಘ ಕಾಯುವಿಕೆ ಕೊನೆಗೊಂಡಂತಾಗಿದೆ.

ಲಾಲ್‌ರೆಮ್‌ಸಿಯಾಮಿ ಸಿಡಿಸಿದ ನಿರ್ಣಾಯಕ ಗೋಲು, ಸವಿತಾ ಪುನಿಯಾ ಗೋಡೆ!

ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿಯೇ ಪೂರ್ಣ ಪ್ರಾಬಲ್ಯ ಮೆರೆದ ಭಾರತದ ಪರ ಲಾಲ್‌ರೆಮ್‌ಸಿಯಾಮಿ ಹ್ಮಾರ್‌ಜೋತೆ (Lalremsiami Hmarzote) ಪಂದ್ಯದ ಏಕೈಕ ಹಾಗೂ ನಿರ್ಣಾಯಕ ಗೋಲು ಸಿಡಿಸಿ ತಂಡಕ್ಕೆ 1-0 ಮುನ್ನಡೆ ತಂದಿತ್ತರು.

ಇದಾದ ಬಳಿಕ ಎರಡನೇ ಕ್ವಾರ್ಟರ್‌ನಲ್ಲಿ ಚೀನಾ ತಂಡವು ಕಂಬ್ಯಾಕ್ ಮಾಡಲು ತೀವ್ರ ಯತ್ನ ನಡೆಸಿ ಪೆನಾಲ್ಟಿ ಸ್ಟ್ರೋಕ್ (Penalty Stroke) ಅವಕಾಶ ಪಡೆಯಿತು. ಆದರೆ ಭಾರತದ ಹಿರಿಯ ಕೀಪರ್ ಹಾಗೂ ಅನುಭವಿ ಆಟಗಾರ್ತಿ ಸವಿತಾ ಪುನಿಯಾ (Savita Punia) ಸಾಹಸಿಕವಾಗಿ ಈ ಪೆನಾಲ್ಟಿ ಸ್ಟ್ರೋಕ್ ಅನ್ನು ತಡೆದು, ಚೀನಾ ಸಮಬಲ ಸಾಧಿಸದಂತೆ ತಡೆದರು. ಪಂದ್ಯದ ಕೊನೆಯವರೆಗೂ ಸವಿತಾ ಪುನಿಯಾ ಸಾರಥ್ಯದ ಭಾರತೀಯ ಡಿಫೆನ್ಸ್ ವಿಭಾಗವು ಚೀನಾದ ಸತತ ದಾಳಿಗಳನ್ನು ಧೂಳೀಪಟ ಮಾಡಿ ಜಯದ ನಗೆಬೀರಿತು.

2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ!

ಏಷ್ಯನ್ ಗೇಮ್ಸ್ 2026ರಲ್ಲಿ ಈ ಐತಿಹಾಸಿಕ ಚಿನ್ನದ ಪದಕ ಜಯಿಸಿದ ಹಿನ್ನೆಲೆಯಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು 2028ರಲ್ಲಿ ನಡೆಯಲಿರುವ 'ಲಾಸ್ ಏಂಜಲೀಸ್ ಒಲಿಂಪಿಕ್ಸ್'ಗೆ (Los Angeles Olympics 2028) ನೇರವಾಗಿ ಅರ್ಹತೆ ಗಿಟ್ಟಿಸಿಕೊಂಡಿದೆ.

44 ವರ್ಷಗಳ ಸುದೀರ್ಘ ಕಾಯುವಿಕೆಗೆ ಮುಕ್ತಿ

ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಭಾರತೀಯ ಮಹಿಳಾ ಹಾಕಿ ತಂಡವು ಚಿನ್ನದ ಪದಕ ಗೆದ್ದಿರುವುದು ಇದು ಎರಡನೇ ಬಾರಿಯಾಗಿದೆ. ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಹಾಕಿ ವಿಭಾಗವನ್ನು ಸೇರ್ಪಡೆಗೊಳಿಸಿದ 1982ರ ಚೊಚ್ಚಲ ಆವೃತ್ತಿಯಲ್ಲೇ ಭಾರತ ಚಿನ್ನದ ಪದಕ ಜಯಿಸಿತ್ತು.

ಆ ನಂತರ ಭಾರತ ತಂಡವು ಎರಡು ಬಾರಿ ಫೈನಲ್ ತಲುಪಿದರೂ ಬಂಗಾರ ಗೆಲ್ಲಲು ಸಾಧ್ಯವಾಗಿರಲಿಲ್ಲ. 1998ರಲ್ಲಿ ದಕ್ಷಿಣ ಕೊರಿಯಾ ಹಾಗೂ 2018ರಲ್ಲಿ ಜಪಾನ್ ವಿರುದ್ಧ ಸೋತು ರನ್ನರ್ ಅಪ್ ಹಂತಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ 44 ವರ್ಷಗಳ ಸುದೀರ್ಘ ಸುದೀರ್ಘ ಅವಧಿಯ ನಂತರ ಭಾರತೀಯ ವನಿತೆಯರು ಮತ್ತೆ ಬಂಗಾರದ ಕಿರೀಟ ಧಾರಣೆ ಮಾಡಿ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದು ಕುಟುಂಬ, ಒಂದು ಅಕಾಡೆಮಿಯಿಂದ ಹಾಕಿ ವಿಶ್ವಕಪ್‌ನಲ್ಲಿ ಐವರು ಕಣಕ್ಕೆ! ಭಾರತ ಪರ ವಿಶ್ವಕಪ್ ಆಡಿದ ಮೊದಲ ತಾಯಿ-ಮಗ ಜೋಡಿ
ಹಾಕಿ ವಿಶ್ವಕಪ್‌ 2026: 1975ರ ಬಳಿಕ ಮತ್ತೊಂದು ವಿಶ್ವಕಪ್‌ ಮೇಲೆ ಭಾರತದ ಕಣ್ಣು; ಭಾರತ-ಪಾಕ್‌ ಪಂದ್ಯ ಯಾವಾಗ?