
ಲುಸ್ಸಾನೆ(ಮೇ.22): ಭಾರತದ ತಾರಾ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್, ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಅಥ್ಲೀಟ್‌ಗಳ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. 2017ರಲ್ಲೂ ಅವರು ಈ ಸಮಿತಿಯ ಸದಸ್ಯರಾಗಿದ್ದರು. ಭಾರತ ಪರ ಶ್ರೀಜೇಶ್ 200ಕ್ಕೂ ಅಧಿಕ ಹಾಕಿ ಪಂದ್ಯಗಳನ್ನಾಡಿದ್ದಾರೆ.
ಈ ಸಮಿತಿ ಎಫ್‌ಐಎಚ್ ಹಾಗೂ ಹಾಕಿ ಆಟಗಾರರ ನಡುವಿನ ಸೇತುವೆಯಾಗಿ ಕೆಲಸ ಮಾಡಲಿದೆ. ಆಟದಲ್ಲಿ ಆಗಬೇಕಿರುವ ಬದಲಾವಣೆ, ಟೂರ್ನಿಗಳ ಆಯೋಜನೆ, ಆಟಗಾರರಿಗೆ ಬೇಕಿರುವ ಸೌಲಭ್ಯ ಸೇರಿದಂತೆ ವಿವಿಧ ವಿಚಾರಗಳಲ್ಲಿ ಎಫ್‌ಐಎಚ್ ನಿರ್ಧಾರ ಕೈಗೊಳ್ಳುವ ಮುನ್ನ ಆಟಗಾರರ ಅನಿಸಿಕೆಗಳನ್ನು ಸಂಗ್ರಹಿಸಲು ಈ ಸಮಿತಿಯ ನೆರವು ಪಡೆಯಲಿದೆ.
ಎಫ್‌ಐಎಚ್ ಅಥ್ಲೀಟ್ ಸಮಿತಿಯಲ್ಲಿ ನಾನು 2017ರಿಂದಲೂ ಸಕ್ರಿಯ ಸದಸ್ಯನಾಗಿದ್ದೇನೆ. ಇದು ನನಗೆ ದೊಡ್ಡ ಗೌರವವಾಗಿದೆ. ಕಳೆದ 4 ವರ್ಷಗಳಲ್ಲಿ ನಾನು ಕೇವಲ ಆಟಗಾರನಾಗಿ ಬೆಳೆದಿದ್ದು ಮಾತ್ರವಲ್ಲ, ಎಫ್‌ಐಎಚ್ ಅಥ್ಲೀಟ್ ಸಮಿತಿ ನೀಡಿದ ಸಹಕಾರದಿಂದಾಗಿ ನಮ್ಮ ಸಹ ಆಟಗಾರರ ಕ್ರೀಡೆಯ ಕುರಿತಾದ ಅಭಿಪ್ರಾಯ, ತಿಳುವಳಿಕೆ ಮುಂತಾದವುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಪಿ.ಆರ್. ಶ್ರೀಜೇಶ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡದ ಪ್ರೊ ಲೀಗ್ ಹಾಕಿ ಪಂದ್ಯಗಳು ಮುಂದೂಡಿಕೆ
ಏಷ್ಯಾದಲ್ಲಿ ಸಾಮಾನ್ಯವಾಗಿ ನಡೆಯುವ ಏಷ್ಯನ್ ಗೇಮ್ಸ್, ಏಷ್ಯನ್ ಚಾಂಪಿಯನ್ಸ್ ಟ್ರೋಫಿ, ದ ಸುಲ್ತಾನ್ ಅಜ್ಲಾನ್ ಶಾ ಟೂರ್ನಿಗಳಲ್ಲಿ ಪಾಲ್ಗೊಂಡ ಈ ಭಾಗದ ಆಟಗಾರರ ಜತೆ ಸಮಲೋಚನೆ ನಡೆಸಲು ಸಾಧ್ಯವಾಗಿದೆ. ಇದರಿಂದ ಆಟಗಾರರು ಕ್ರೀಡೆಯ ಮೇಲಿನ ಕಳಕಳಿ, ಸವಾಲು ಹಾಗೂ ಸೌಲಭ್ಯಗಳ ಕುರಿತು ಚರ್ಚಿಸಲು ಅವಕಾಶ ಸಿಕ್ಕಿದೆ. ಹಾಗೆಯೇ ಇದೇ ವಿಚಾರವನ್ನು ಎಫ್‌ಐಎಚ್ ಅಥ್ಲೀಟ್ ಸಮಿತಿಯನ್ನು ಅಭಿಪ್ರಾಯ ಹಂಚಿಕೊಳ್ಳಲು ಸಾಧ್ಯವಾಗಿದೆ ಎಂದು ಶ್ರೀಜೇಶ್ ತಿಳಿಸಿದ್ದಾರೆ.
ಎಫ್‌ಐಎಚ್ ಅಥ್ಲೀಟ್ ಕಮಿಟಿಗೆ ಪಿ. ಆರ್. ಶ್ರೀಜೇಶ್ ಮರು ಆಯ್ಕೆಯಾಗಿದ್ದಕ್ಕೆ ಹಾಕಿ ಇಂಡಿಯಾ ಅಭಿನಂದನೆಗಳನ್ನು ಸಲ್ಲಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.