ಹಾಕಿ ಟೀಂ ಇಂಡಿಯಾದ ನಾಯಕ ಸೇರಿ ಐವರಿಗೆ ಕೊರೋ​ನಾ ಕನ್ಫರ್ಮ್!

Published : Aug 08, 2020, 09:07 AM IST
ಹಾಕಿ ಟೀಂ ಇಂಡಿಯಾದ ನಾಯಕ ಸೇರಿ ಐವರಿಗೆ ಕೊರೋ​ನಾ ಕನ್ಫರ್ಮ್!

ಸಾರಾಂಶ

ಭಾರತ ಹಾಕಿ ತಂಡದ ನಾಯಕ ಸೇರಿದಂತೆ ಐವರಿಗೆ ಕೊರೋನಾ ಸೋಂಕು ದೃಢ ಪಟ್ಟಿದೆ. ಇದೀಗ ಅವರನ್ನೆಲ್ಲ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ನವ​ದೆ​ಹ​ಲಿ(ಆ.08): ಭಾರತ ಪುರು​ಷರ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ಸೇರಿ​ದಂತೆ ಒಟ್ಟು 5 ಆಟ​ಗಾ​ರ​ರಿಗೆ ಕೊರೋನಾ ಸೋಂಕು ತಗು​ಲಿ​ರು​ವುದು ದೃಢವಾಗಿದೆ. 

ಬೆಂಗ​ಳೂ​ರಿನ ಭಾರತೀಯ ಕ್ರೀಡಾ ಪ್ರಾಧಿ​ಕಾರ(ಸಾಯ್‌)ದಲ್ಲಿ ಅಭ್ಯಾಸ ಶಿಬಿರಕ್ಕೆ ಹಾಜ​ರಾದ ಆಟ​ಗಾ​ರರನ್ನು ಕೊರೋನಾ ಪರೀಕ್ಷೆಗೆ ಒಳ​ಪ​ಡಿ​ಸ​ಲಾ​ಗಿತ್ತು. ಆ ಪೈಕಿ ಮನ್‌ಪ್ರೀತ್‌, ಡಿಫೆಂಡರ್‌ಗಳಾದ ಸುರೇಂದರ್‌ ಕುಮಾರ್‌, ಜಸ್ಕ​ರಣ್‌ ಸಿಂಗ್‌, ಗೋಲ್ ಕೀಪರ್ ಕೃಷನ್ ಪಾಠಕ್‌ ಹಾಗೂ ಡ್ರ್ಯಾಗ್‌ ಫ್ಲಿಕ್ಕರ್‌ ವರುಣ್‌ ಕುಮಾರ್‌ಗೆ ಸೋಂಕು ತಗು​ಲಿ​ರು​ವುದು ಖಚಿತವಾಗಿದೆ ಎಂದು ಶುಕ್ರ​ವಾರ ಸಾಯ್‌ ತಿಳಿಸಿದೆ. 

ಭಾರತ ಹಾಕಿ ಆಟಗಾರ್ತಿಯಿಂದ ಈಗ ಗದ್ದೆ ಕೆಲಸ!

ರ‍್ಯಾಪಿಡ್ ಟೆಸ್ಟ್ ವೇಳೆ ಈ ಎಲ್ಲಾ ಐದು ಆಟಗಾರರ ವರದಿ ನೆಗೆಟಿವ್ ಬಂದಿತ್ತು. ಆದಾಗಿಯೂ ಮನ್‌ಪ್ರೀತ್ ಹಾಗೂ ಸುರೇಂದರ್ ಅವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಬಳಿಕ ಗುರುವಾರ RT-PCR ಟೆಸ್ಟ್ ಮಾಡಲಾಗಿದೆ. ಆಗ ಈ 5 ಆಟಗಾರರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ.

 
ಬೆಂಗ​ಳೂ​ರಿಗೆ ಆಗ​ಮಿ​ಸುವ ವೇಳೆ ಅವ​ರಿಗೆ ಸೋಂಕು ತಗು​ಲಿ​ರ​ಬ​ಹುದು ಎಂದು ಸಾಯ್‌ ಅಧಿ​ಕಾ​ರಿ​ಯೊ​ಬ್ಬ​ರು ತಿಳಿ​ಸಿ​ದ್ದಾರೆ. ಆಟ​ಗಾ​ರ​ರನ್ನು ಸಾಯ್‌ ಕೇಂದ್ರದಲ್ಲೇ ಕ್ವಾರಂಟೈನ್‌ ಮಾಡ​ಲಾ​ಗಿದ್ದು, ಅವರ ಆರೋ​ಗ್ಯದ ಮೇಲೆ ನಿಗಾ ವಹಿ​ಸ​ಲಾ​ಗಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಾಕಿ ತಂಡದ ಮಾಜಿ ನಾಯಕ ಎಂಎಂ ಸೋಮಯ್ಯ ಅವರ ಬೆಂಗಳೂರಿನ ಮನೆಗೆ ಕನ್ನ: ಒಲಿಂಪಿಕ್ಸ್‌ ಪದಕ ದೋಚಿದ ಕಳ್ಳರು
ಹಾಕಿ ದಂತಕಥೆ ಎಂ.ಎಂ.ಸೋಮಯ್ಯ ಬೆಂಗಳೂರು ಮನೆಗೆ ಕನ್ನ, 1980ರ ಒಲಿಂಪಿಕ್ಸ್ ಚಿನ್ನದ ಪದಕವೇ ಕಳವು!