Breaking: ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ಚಾಂಪಿಯನ್‌

By Santosh NaikFirst Published Aug 12, 2023, 10:29 PM IST
Highlights

ಭಾರತ ತಂಡ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಚಾಂಪಿಯನ್‌ ಆಗಿದೆ. ಚೆನ್ನೈನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಮಲೇಷ್ಯಾವನ್ನು ಮಣಿಸಿ ಚಾಂಪಿಯನ್‌ ಆಯಿತು.
 

ಚೆನ್ನೈ (ಆ.12): ಪ್ರತಿಷ್ಠಿತ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ಚಾಂಪಿಯನ್‌ ಆಗಿದೆ. ಶನಿವಾರ ಚೆನ್ನೈನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಮಲೇಷ್ಯಾವನ್ನು ಮಣಿಸಿ ಚಾಂಪಿಯನ್‌ ಆಯಿತು. ಫೈನಲ್‌ ಪಂದ್ಯದಲ್ಲಿ ಭಾರತ ತಂಡ 4-3 ಗೋಲುಗಳಿಂದ ಮಲೇಷ್ಯಾ ತಂಡವನ್ನು ಸೋಲಿಸಿತು.ಚೆನ್ನೈನ ಮೇಯರ್ ರಾಧಾಕೃಷ್ಣನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಮಲೇಷ್ಯಾವನ್ನು 4-3 ಅಂತರದಿಂದ ಸೋಲಿಸಿತು. ಒಂದು ಹಂತದಲ್ಲಿ ಭಾರತ ತಂಡ ಪಂದ್ಯದಲ್ಲಿ 1-3 ಹಿನ್ನಡೆ ಕಂಡಿತ್ತು. ಆದರೆ, ಅಮೋಘವಾಗಿ ತಿರುಗೇಟು ನೀಡುವ ಮೂಲಕ ಚಾಂಪಿಯನ್‌ ಪಟ್ಟ ಅಲಂಕರಿಸಿದೆ.ಭಾರತದ ಪರವಾಗಿ ಜುಗ್ರಾಜ್‌ ಸಿಂಗ್‌ 9ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಸಿಡಿಸಿದರೆ, 45ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಪೆನಾಲ್ಟಿ ಸ್ಟ್ರೋಕ್‌ ಮೂಲಕ ಗೋಲು ಬಾರಿಸಿದರು. ಗುರ್ಜಂತ್‌ ಸಿಂಗ್‌ (45) ಹಾಗೂ ಆಕಾಶ್‌ದೀಪ್‌ ಸಿಂಗ್ (56) ಭಾರತದ ಪರವಾಗಿ ಗೋಲು ಬಾರಿಸಿದರು. ಮೂರನೇ ಕ್ವಾರ್ಟರ್‌ ಮುಕ್ತಾಯದ ಸಮಯದಲ್ಲಿ ಭಾರತ ಬಾರಿಸಿದ ಎರಡು ಗೋಲುಗಳು ಪಂದ್ಯದ ದಿಕ್ಕನ್ನು ಬದಲಿಸಿತು.ಇದು ಭಾರತ ತಂಡದ ನಾಲ್ಕನೇ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಪ್ರಶಸ್ತಿಯಾಗಿದೆ. 

ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ ಜಪಾನ್‌ ಅನ್ನು 5-0 ಅಂತರದಿಂದ ಸೋಲಿಸಿದ್ದರೆ, ಮಲೇಷ್ಯಾ ತಂಡ 6-2 ಗೋಲುಗಳಿಂದ ದಕ್ಷಿಣ ಕೊರಿಯಾ ತಂಡವನ್ನು ಸೋಲಿಸಿತ್ತು. ರೌಂಡ್‌ ರಾಬಿನ್‌ ಹಂತದಲ್ಲಿ ಭಾರತ ತಂಡ ಮಲೇಷ್ಯಾ ವಿರುದ್ಧ 5-0 ಅಂತರದ ಗೆಲುವು ಕಂಡಿತ್ತು. ಫೈನಲ್‌ ಪಂದ್ಯದಲ್ಲಿ ಹಾಫ್‌ ಟೈಮ್‌ ವೇಳೆ ಭಾರತ 1-3ರ ಹಿನ್ನಡೆಯಲ್ಲಿತ್ತು. ಆ ಬಳಿಕ ಕೇವಲ 11 ನಿಮಿಷದ ಅಂತರದಲ್ಲಿ ಮೂರು ಗೋಲು ಸಿಡಿಸುವ ಮೂಲಕ ಭಾರತ ತಿರುಗೇಟು ನೀಡಿದ್ದಲ್ಲದೆ ಚಾಂಪಿಯನ್‌ ಆಗುವಲ್ಲಿ ಯಶಸ್ವಿಯಾಯಿತು.

ಫೈನಲ್‌ ಪಂದ್ಯದಲ್ಲಿ ಮಲೇಷ್ಯಾ ತನ್ನ ಆಕ್ರಮಣಕಾರಿ ಬ್ರ್ಯಾಂಡ್‌ನ ಹಾಕಿ ಪ್ರದರ್ಶನ ಮಾಡಿದರೆ, ಭಾರತ ತಂಡ ಈ ಆಟವನ್ನು ಆಡಲು ವಿಫಲವಾಯಿತು. ನಿಧಾನಗತಿಯ ಆರಂಭದ ಹೊರತಾಗಿಯೂ, ಒಂಬತ್ತನೇ ನಿಮಿಷದಲ್ಲಿ ಮಲೇಷ್ಯಾದ ಗೋಲಿ ಬಲಕ್ಕೆ ಜುಗ್ರಾಜ್‌ ಸಿಂಗ್‌ ಪೆನಾಲ್ಟಿ ಕಾರ್ನರ್‌ ಅನ್ನು ಯಶಸ್ವಿಯಾಗಿ ಪರಿವರ್ತಿಸಿದ ನಂತರ ಭಾರತವು ಆರಂಭಿಕ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಗಿತ್ತು.

Asian Champions Trophy 2023: ಜಪಾನ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ..!

ಭಾರತ ಮುನ್ನಡೆ ಪಡೆದುಕೊಂಡ ಬೆನ್ನಲ್ಲಿಯೇ ಮಲೇಷ್ಯಾ ಇನ್ನಷ್ಟು ಆಕ್ರಮಣಕಾರಿಯಾಗಿ ದಾಳಿ ನಡೆಸಿತು. ಇದರ ಪರಿಣಾಮವಾಗಿ 14ನೇ ನಿಮಿಷದಲ್ಲಿ ಅಬು ಕಮಲ್‌ ಅಜಾರಿ, ಅಜೌನ್‌ ಹಸನ್‌ ಬಲಭಾಗದಿಂದ ನೀಡಿದ ಪಾಸ್‌ಅನ್ನು ಪಡೆದು ಸಮಬಲದ ಗೋಲು ಬಾರಿಸಿದ್ದರು. ಮೊದಲ ಕ್ವಾರ್ಟರ್‌ನಲ್ಲಿಯೇ ಭಾರತಕ್ಕೆ ಮುನ್ನಡೆಗೇರುವ ಅವಕಾಶ ಇತ್ತಾದರೂ, ಈ ವೇಳೆ ಸಿಕ್ಕ ಸತತ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಭಾರತ ಹಾಳು ಮಾಡಿಕೊಂಡಿತು.

ವಿರಾಟ್ ಕೊಹ್ಲಿ ಬಳಿಯಿರುವ ಟಾಪ್ 10 ಕಾಸ್ಟ್ಲಿ ವಾಚ್‌ಗಳಿವು..! ಒಂದು ವಾಚ್‌ ಬೆಲೆ 100 ಕುಟುಂಬಗಳ ವರ್ಷದ ಆದಾಯ..!

click me!