ಪ್ರೊ ಲೀಗ್‌ ಹಾಕಿ: ನೆದರ್‌ಲ್ಯಾಂಡ್ ಎದುರು ಭಾರತ ಜಯಭೇರಿ

Published : Jan 19, 2020, 01:34 PM IST
ಪ್ರೊ ಲೀಗ್‌ ಹಾಕಿ: ನೆದರ್‌ಲ್ಯಾಂಡ್ ಎದುರು ಭಾರತ ಜಯಭೇರಿ

ಸಾರಾಂಶ

ಎಫ್‌ಐಎಚ್‌ ಪ್ರೊ ಲೀಗ್‌ ಟೂರ್ನಿಯಲ್ಲಿ ಭಾರತ ಹಾಕಿ ತಂಡ ಭರ್ಜರಿ ಶುಭಾರಂಭ ಮಾಡಿದೆ. ಬಲಿಷ್ಠ ನೆದರ್‌ಲ್ಯಾಂಡ್ ಎದುರು ಭಾರತ 5-2 ಅಂತರದಲ್ಲಿ ಗೆಲುವು ದಾಖಲಿಸಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

ಭುವನೇಶ್ವರ್‌(ಜ.19): ಭಾರತ ಹಾಕಿ ತಂಡ, ಶನಿವಾರದಿಂದ ಇಲ್ಲಿ ಆರಂಭವಾಗಿರುವ ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಭರ್ಜರಿ ಶುಭಾರಂಭ ಮಾಡಿದೆ.

ಒಲಿಂಪಿಕ್‌ ಪೂರ್ವಭಾವಿ ಅಭ್ಯಾಸಕ್ಕಾಗಿ ನಡೆಯುತ್ತಿರುವ ಟೂರ್ನಿಯಲ್ಲಿ ಮನ್‌ಪ್ರೀತ್‌ ಪಡೆ, ವಿಶ್ವ ನಂ.3 ನೆದರ್‌ಲೆಂಡ್‌ ತಂಡವನ್ನು ಬಗ್ಗು ಬಡಿದಿದೆ. ಮೊದಲ ಪಂದ್ಯದಲ್ಲಿ ಭಾರತ, ನೆದರ್‌ಲೆಂಡ್‌ ವಿರುದ್ಧ 5-2 ಗೋಲುಗಳ ಅಂತರದಲ್ಲಿ ಜಯಭೇರಿ ಬಾರಿಸಿದೆ.

ಕಿವೀಸ್‌ ಪ್ರವಾಸ: ಭಾರತ ಮಹಿಳಾ ಹಾಕಿ ತಂಡ ಪ್ರಕಟ

ಭಾರತದ ಪರ ರುಪೀಂದರ್‌ ಸಿಂಗ್‌ (12, 46ನೇ ನಿ.), ಗುರ್ಜಂತ್‌ ಸಿಂಗ್‌ (1ನೇ ನಿ.), ಮನ್‌ದೀಪ್‌ ಸಿಂಗ್‌ (34ನೇ ನಿ.), ಲಲಿತ್‌ ಉಪಾಧ್ಯಾಯ (36ನೇ ನಿ.) ಗೋಲುಗಳಿಸಿದರು. ನೆದರ್‌ಲೆಂಡ್‌ ಪರ ಜಾನ್ಸನ್‌, ಜೆರೊನ್‌ ಗೋಲು ಬಾರಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಾಕಿ ವಿಶ್ವಕಪ್‌ 2026: 1975ರ ಬಳಿಕ ಮತ್ತೊಂದು ವಿಶ್ವಕಪ್‌ ಮೇಲೆ ಭಾರತದ ಕಣ್ಣು; ಭಾರತ-ಪಾಕ್‌ ಪಂದ್ಯ ಯಾವಾಗ?
Hockey: ಆರೆಂಜ್ ಜರ್ಸಿ ಧರಿಸಿದ್ದರ ಹಿಂದಿನ ಅಸಲಿ ಗುಟ್ಟು ಕೊನೆಗೂ ರಟ್ಟು! ಟೀಮ್ ಇಂಡಿಯಾ ಕ್ಯಾಪ್ಟನ್ ಬಿಚ್ಚಿಟ್ಟ ಸತ್ಯ ಇಲ್ಲಿದೆ!