2013ರಿಂದ 2017ರ ವರೆಗೆ ಪುರುಷರ ಎಚ್‌ಐಎಲ್ ನಡೆದಿತ್ತಾದರೂ, ಬಳಿಕ ಆರ್ಥಿಕ ಕಾರಣಗಳಿಂದಾಗಿ ಸ್ಥಗಿತಗೊಂಡಿತ್ತು. ಈ ವರ್ಷ ಮತ್ತೆ ಹೊಸದಾಗಿ ಈ ಟೂರ್ನಿ ಆಯೋಜನೆಗೆ ಸಿದ್ದತೆ ಶುರುವಾಗಿದೆ.
ನವದೆಹಲಿ: 2017ರಲ್ಲಿ ಸ್ಥಗಿತಗೊಂಡಿದ್ದ ಪುರುಷರ ಹಾಕಿ ಇಂಡಿಯಾ ಲೀಗ್ (ಎಚ್ಐಎಲ್) ಬರೋಬ್ಬರಿ 7 ವರ್ಷಗಳ ಬಳಿಕ ಮತ್ತೆ ಆಯೋಜನೆಗೊಳ್ಳಲಿದೆ. ಮಹಿಳೆಯರಿಗೂ ಚೊಚ್ಚಲ ಲೀಗ್ ಆಯೋಜಿಸಲು ಹಾಕಿ ಇಂಡಿಯಾ ನಿರ್ಧರಿಸಿದೆ. ಡಿ.28ರಿಂದ 2025ರ ಫೆ.1ರ ವರೆಗೆ ನಡೆಯಲಿದೆ. ಪುರುಷರ ಲೀಗ್ ಎಲ್ಲಾ ಪಂದ್ಯಗಳಿಗೆ ಒಡಿಶಾದ ರೂರ್ಕೆಲಾ ಆತಿಥ್ಯ
2013ರಿಂದ 2017ರ ವರೆಗೆ ಪುರುಷರ ಎಚ್‌ಐಎಲ್ ನಡೆದಿತ್ತಾದರೂ, ಬಳಿಕ ಆರ್ಥಿಕ ಕಾರಣಗಳಿಂದಾಗಿ ಸ್ಥಗಿತಗೊಂಡಿತ್ತು. ಈ ವರ್ಷ ಮತ್ತೆ ಲೀಗ್ ನಡೆಯಲಿದೆ. ಚೆನ್ನೈ ಹೈದರಾಬಾದ್ ಸೇರಿ ಒಟ್ಟು 8 ತಂಡಗಳು ವಹಿಸಲಿದೆ. ಇನ್ನು, ಮಹಿಳಾ ಲೀಗ್ ಡಿ.28ರಿಂದ ಜ.26ರ ವರೆಗೆ ಆಯೋಜನೆಗೊಳ್ಳಲಿದೆ. ಟೂರ್ನಿ ಯಲ್ಲಿ 6 ಮಹಿಳಾ ತಂಡಗಳು ಪಾಲ್ಗೊಳ್ಳಲಿದ್ದು, ಜಾರ್ಖಂಡ್‌ನ ರಾಂಚಿಯಲ್ಲಿ ಪಂದ್ಯ ಗಳು ನಡೆಯಲಿವೆ. ಎರಡೂ ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆ ಅ.13ರಿಂದ 15ರ ವರೆಗೆ ನಡೆಯಲಿದೆ.
Back with a bang! Let the games begin!🔥🏑 https://t.co/Ak2PLqFfvn
— Hockey India (@TheHockeyIndia)undefined
ವಿಶ್ವ ಕಿರಿಯರ ಶೂಟಿಂಗ್: ಭಾರತಕ್ಕೆ ಮತ್ತೊಂದು ಚಿನ್ನ
ಲಿಮಾ(ಪೆರು): ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮತ್ತೊಂದು ಚಿನ್ನದ ಪದಕ ಗೆದ್ದಿದೆ. ಇದರೊಂದಿಗೆ ಚಿನ್ನದ ಗಳಿಕೆ 11ಕ್ಕೆ ಹೆಚ್ಚಳವಾಗಿದೆ. ಒಟ್ಟಾರೆ ಭಾರತ 16 ಪದಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಶುಕ್ರವಾರ ಪುರುಷರ 25 ಮೀ. ರಾಪಿಡ್ ಫೈರ್ ಪಿಸ್ತೂಲ್ ತಂಡ ವಿಭಾಗದಲ್ಲಿ ಮುಕೇಶ್ ನೆಲವಲ್ಲಿ, ರಾಜ್‌ವದರ್ಧನ್ ಪಾಟೀಲ್ ಹಾಗೂ ಹರ್ಷಿಮ ಸಿಂಗ್ ಚಿನ್ನ ತಮ್ಮದಾಗಿಸಿಕೊಂಡರು. ಇದು ಮುಕೇಶ್ ಕೂಟದಲ್ಲಿ ಗೆದ್ದ 4ನೇ ಚಿನ್ನದ ಪದಕ. ಕೂಟ ಅ.7ರಂದು ಮುಕ್ತಾಯಗೊಳ್ಳಲಿದೆ.
ಭಾರತ-ಕಿವೀಸ್ ಬೆಂಗಳೂರು ಟೆಸ್ಟ್ ಟಿಕೆಟ್ ಸೇಲ್ ಶುರು; ಕನಿಷ್ಠ ಟಿಕೆಟ್ ಬೆಲೆ ಎಷ್ಟು? ಎಲ್ಲಿ ಟಿಕೆಟ್ ಖರೀದಿಸೋದು?
ಅ.12ಕ್ಕೆ ವಿಯೆಟ್ನಾಂ ವಿರುದ್ಧ ಭಾರತಕ್ಕೆ ಫುಟ್ಬಾಲ್ ಪಂದ್ಯ
ನವದೆಹಲಿ: ಭಾರತ ಫುಟ್ಬಾಲ್ ತಂಡ ಅ.12ರಂದು ವಿಯೆಟ್ನಾಂ ವಿರುದ್ಧ ಸ್ನೇಹಾರ್ಥ ಪಂದ್ಯ ಆಡಲಿದೆ. ಪಂದ್ಯಕ್ಕೆ ವಿಯೆಟ್ನಾಂನ ಥೀನ್ ಟ್ರುವೊಂಗ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ ಎಂದು ಭಾರತ ಫುಟ್ಬಾಲ್ ಸಂಸ್ಥೆ ಮಾಹಿತಿ ನೀಡಿದೆ.
ಈ ಮೊದಲು ಭಾರತ, ಲೆಬನಾನ್ ಹಾಗೂ ವಿಯೆಟ್ನಾಂ ನಡುವೆ ಸ್ನೇಹಾರ್ಥ ತ್ರಿಕೋನ ಫುಟ್ಬಾಲ್ ಟೂರ್ನಿ ಅಕ್ಟೋಬರ್ 07ರಿಂದ ಅಕ್ಟೋಬರ್ 15ರ ವರೆಗೆ ನಿಗದಿಯಾಗಿತ್ತು. ಆದರೆ ಲೆಬನಾನ್ ಟೂರ್ನಿಯಿಂದ ಹಿಂದೆ ಸರಿದ ಕಾರಣ, ಭಾರತ ತಂಡ ವಿಯೆಟ್ನಾಂ ವಿರುದ್ಧ ಏಕೈಕ ಪಂದ್ಯವಾಡಲಿದೆ. ಅ.5ರಂದು ಕೋಲ್ಕತಾದಲ್ಲಿ ಭಾರತ ತಂಡದ ಆಟಗಾರರು ಒಟ್ಟು ಸೇರಲಿದ್ದು, ಅ.7ರಂದು ವಿಯೆಟ್ನಾಂ ಪ್ರಯಾಣಿಸಲಿದ್ದಾರೆ.
ಇರಾನಿ ಕಪ್: ಶೇಷ ಭಾರತ ವಿರುದ್ದ ಮುಂಬೈಗೆ ಮುನ್ನಡೆ; ರೋಚಕಘಟ್ಟದತ್ತ ಕೊನೆಯ ದಿನದಾಟ
ಬೆಂಗಳೂರು ಮ್ಯಾರಥಾನ್ ನಾಳೆ: 30000 ಮಂದಿ ಭಾಗಿ
ಬೆಂಗಳೂರು: ಬೆಂಗಳೂರು ಮ್ಯಾರಥಾನ್ ಭಾನುವಾರ ನಡೆಯಲಿದ್ದು, 30 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ. 41.195 ಕಿ.ಮೀ. ಫುಲ್ ಮ್ಯಾರಥಾನ್, 21.1 ಕಿ.ಮೀ. ಹಾಫ್ ಮ್ಯಾರಥಾನ್, 10ಕೆ ಓಟ ಹಾಗೂ 5ಕೆ ಹೋಪ್ ರನ್ ಸ್ಪರ್ಧೆಗಳು ನಡೆಯಲಿವೆ.
ಕಂಠೀರವ ಕ್ರೀಡಾಂಗಣದಲ್ಲಿ ಓಟ ಆರಂಭಗೊಳ್ಳಲಿದ್ದು, ನಗರದ ಪ್ರಮುಖ ಸ್ಥಳಗಳಾದ ಎಂ.ಜಿ.ರಸ್ತೆ, ವಿಧಾನಸೌಧ, ಕಬ್ಬನ್ ಪಾರ್ಕ್ ಮೂಲಕ ಸಂಚರಿಸಲಿದೆ. ಉದ್ಘಾಟನಾ ಸಮಾರಂಭದಲ್ಲಿ ಗೃಹ ಸಚಿವ ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಪದ್ಮಶ್ರೀ ಪುಲ್ಲೇಲ ಗೋಪಿಚಂದ್, ಅಂಜು ಬಾಬಿ ಜಾರ್ಜ್ ಸೇರಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.