ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ಹಾಕಿ ತಂಡ ಭರ್ಜರಿ ಪ್ರದರ್ಶನ ತೋರುವ ಮೂಲಕ ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನಾ ವಿರುದ್ದ ಭರ್ಜರಿ ಗೆಲುವು ದಾಖಲಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬ್ಯೂನಸ್ ಐರಿಸ್(ಏ.12): 2020-21ರ ಎಫ್‌ಐಎಚ್ ಪ್ರೊ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ಭಾರತ ಉತ್ತಮ ಪ್ರದರ್ಶನ ಮುಂದುವರಿಸಿದೆ. ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ ಭಾರತ 3-0 ಗೋಲುಗಳ ಗೆಲುವು ಸಾಧಿಸಿ ಪ್ರಾಬಲ್ಯ ಮೆರೆದಿದೆ.
FT: 🇦🇷 0 - 3 🇮🇳
With a comfortable win, has claimed victory over Olympic Champions, Team Argentina! 😍
Congratulations, . Thank you for hosting us, . 💙 pic.twitter.com/OuHtE1EzUA
ಇನ್ನು ಭಾನುವಾರ(ಏ.11) ಮುಂಜಾನೆ ಅರ್ಜೆಂಟೀನಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತ, ಪೆನಾಲ್ಟಿಶೂಟೌಟ್‌ನಲ್ಲಿ 3-2 ಗೋಲುಗಳ ಗೆಲುವು ಸಾಧಿಸಿತು. ಪಂದ್ಯ ಮುಕ್ತಾಯಗೊಳ್ಳಲು ಕೇವಲ 6 ಸೆಕೆಂಡ್ ಬಾಕಿ ಇದ್ದಾಗ ಗೋಲು ಬಾರಿಸಿದ ಹರ್ಮನ್‌ಪ್ರೀತ್ ಸಿಂಗ್, ಪಂದ್ಯ 2-2ರಲ್ಲಿ ಡ್ರಾ ಆಗಲು ಕಾರಣರಾದರು.
ಹಾಕಿ: ಅಜೇಯವಾಗಿ ಯೂರೋಪ್ ಪ್ರವಾಸ ಮುಗಿಸಿದ ಭಾರತ
ಫಲಿತಾಂಶಕ್ಕಾಗಿ ಪೆನಾಲ್ಟಿಕಾರ್ನರ್ ಮೊರೆ ಹೋಗಲಾಯಿತು. 5 ಯತ್ನಗಳಲ್ಲಿ ಭಾರತ 3 ಗೋಲು ಬಾರಿಸಿದರೆ, ಭಾರತದ ಗೋಲ್ ಕೀಪರ್ ಶ್ರೀಜೇಶ್‌ರನ್ನು ವಂಚಿಸಿ ಅರ್ಜೆಂಟೀನಾ ಕೇವಲ 2 ಬಾರಿ ಗೋಲು ಪೆಟ್ಟಿಗೆಗೆ ಚೆಂಡನ್ನು ಕಳುಹಿಸಲು ಯಶಸ್ವಿಯಾಯಿತು.
📸 ¡Postales del primer cruce entre 🦁🇦🇷 y 🇮🇳 en el primer cruce por la ! pic.twitter.com/AoW15EmobX
— ARG Field Hockey (@ArgFieldHockey)