ಇಂದಿನಿಂದ ಕಿರಿಯರ ಹಾಕಿ ವಿಶ್ವಕಪ್ ಟೂರ್ನಿ: ಭಾರತಕ್ಕೆ ದಕ್ಷಿಣ ಕೊರಿಯಾ ಎದುರಾಳಿ

By Kannadaprabha News  |  First Published Dec 5, 2023, 11:16 AM IST

ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳುತ್ತಿದ್ದು, ಭಾರತ ತಂಡ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಕೊರಿಯಾ ಬಳಿಕ ಭಾರತಕ್ಕೆ ಡಿ.7ರಂದು ಸ್ಪೇನ್, ಡಿ.9ರಂದು ಕೆನಡಾ ಎದುರಾಗಲಿವೆ. ಭಾರತ ತಂಡದ ಗೋಲ್ ಕೀಪರ್ ಆಗಿ ಕರ್ನಾಟಕದ ಮೋಹಿತ್ ಎಚ್.ಎಸ್.ಕಾರ್ಯನಿರ್ವಹಿಸಲಿದ್ದಾರೆ.


ಕೌಲಾಲಂಪುರ(ಡಿ.05): ಎರಡು ಬಾರಿ ಚಾಂಪಿಯನ್ ಭಾರತ ಮಂಗಳವಾರ ಇಲ್ಲಿ ಆರಂಭಗೊಳ್ಳಲಿರುವ ಎಫ್‌ಐಎಚ್ ಕಿರಿಯ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಕೊರಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. 2001 ಹಾಗೂ 2016ರಲ್ಲಿ ಚಾಂಪಿಯನ್ ಆಗಿದ್ದ ಭಾರತ, 1997ರಲ್ಲಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. 2 ವರ್ಷಗಳ ಹಿಂದೆ ಭುವನೇಶ್ವರದಲ್ಲಿ ನಡೆದಿದ್ದ ಕಳೆದ ಆವೃತ್ತಿಯಲ್ಲಿ ಭಾರತ 4ನೇ ಸ್ಥಾನ ಪಡೆದಿತ್ತು. ಈ ಬಾರಿ ತಂಡ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳುತ್ತಿದ್ದು, ಭಾರತ ತಂಡ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಕೊರಿಯಾ ಬಳಿಕ ಭಾರತಕ್ಕೆ ಡಿ.7ರಂದು ಸ್ಪೇನ್, ಡಿ.9ರಂದು ಕೆನಡಾ ಎದುರಾಗಲಿವೆ. ಭಾರತ ತಂಡದ ಗೋಲ್ ಕೀಪರ್ ಆಗಿ ಕರ್ನಾಟಕದ ಮೋಹಿತ್ ಎಚ್.ಎಸ್.ಕಾರ್ಯನಿರ್ವಹಿಸಲಿದ್ದಾರೆ. ರಾಜ್ಯದ ಪೂವಣ್ಣ ಸಿ.ಬಿ. ಸಹ ತಂಡದಲ್ಲಿದ್ದಾರೆ. ವಿಶ್ವಕಪ್‌ಗೆ ತೆರಳುವ ಮುನ್ನ ಭಾರತ ತಂಡ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಕೇಂದ್ರದಲ್ಲಿ ಒಂದು ತಿಂಗಳ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿತ್ತು. 

Latest Videos

undefined

ಡಿಸೆಂಬರ್ 06ರಿಂದ ಬೆಂಗ್ಳೂರಲ್ಲಿ ಕ್ಲಬ್‌ ವಾಲಿಬಾಲ್‌ ವಿಶ್ವಕಪ್‌

‘ಎ’ ಗುಂಪಿನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ, ಆಸ್ಟ್ರೇಲಿಯಾ, ಚಿಲಿ ಹಾಗೂ ಮಲೇಷ್ಯಾ, ‘ಬಿ’ ಗುಂಪಿನಲ್ಲಿ ಈಜಿಪ್ಟ್, ಫ್ರಾನ್ಸ್, ಜರ್ಮನಿ ಹಾಗೂ ದ.ಆಫ್ರಿಕಾ. ‘ಡಿ’ ಗುಂಪಿನಲ್ಲಿ ಬೆಲ್ಜಿಯಂ, ನೆದರ್ಲೆಂಡ್ಸ್, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳಿವೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆವ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ. ಕ್ವಾರ್ಟರ್, ಸೆಮಿಫೈನಲ್ ಹಾಗೂ ಫೈನಲ್ ಕ್ರಮವಾಗಿ ಡಿ.12, 14 ಹಾಗೂ 16ರಂದು ನಡೆಯಲಿವೆ.

ಭಾರತ  ಕೊರಿಯಾ ಪಂದ್ಯ: ಮ. 3.30ಕ್ಕೆ,
ಪ್ರಸಾರ: ಜಿಯೋ ಸಿನಿಮಾ, ಸ್ಪೋರ್ಟ್ಸ್ 18

ಪಿಸ್ತೂಲ್‌ನ ಸಿಲಿಂಡರ್‌ ಸ್ಫೋಟ: ಕೈಬೆರಳು ಕಳೆದುಕೊಂಡ ಶೂಟರ್‌!

ನವದೆಹಲಿ: ಅಭ್ಯಾಸದ ವೇಳೆ ಏರ್‌ ಪಿಸ್ತೂಲ್‌ನ ಸಿಲಿಂಡರ್‌ಗೆ ಸಂಕುಚಿತ ಗಾಳಿ(ಕಂಪ್ರೆಸ್ಡ್‌ ಏರ್‌) ತುಂಬಿಸುವಾಗ, ಸಿಲಿಂಡರ್‌ ಸ್ಫೋಟಗೊಂಡು ರಾಷ್ಟ್ರೀಯ ಶೂಟರ್‌ ಒಬ್ಬರ ಎಡಗೈ ಹೆಬ್ಬೆರಳು ಕಡಿತಗೊಂಡ ಘಟನೆ ಇಲ್ಲಿನ ಕರ್ಣಿ ಸಿಂಗ್‌ ರೇಂಜ್‌ನಲ್ಲಿ ಕಳೆದ ಶನಿವಾರ ನಡೆದಿದೆ. ಉತ್ತರ ಪ್ರದೇಶ ಮೂಲದ, ಭಾರತೀಯ ವಾಯು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪುಷ್ಪೇಂದರ್‌ ಕುಮಾರ್‌ ಬೆರಳು ಕಳೆದುಕೊಂಡ ಶೂಟರ್‌. ಸೇನಾ ಆಸ್ಪತ್ರೆಯಲ್ಲಿ ಪುಷ್ಪೇಂದರ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ರಾಷ್ಟ್ರೀಯ ಕೋಚ್‌ ಒಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Pro Kabaddi League: ಬೆಂಗಳೂರು ಬುಲ್ಸ್‌ಗೆ ಸತತ 2ನೇ ಸೋಲು!

ವಿಶ್ವ ಕಿರಿಯರ ಬಾಕ್ಸಿಂಗ್: 9 ಭಾರತೀಯರು ಫೈನಲ್‌ಗೆ

ನವದೆಹಲಿ: ಅರ್ಮೇನಿಯಾದ ಯೆರೆವಾನ್‌ನಲ್ಲಿ ನಡೆಯುತ್ತಿರುವ ವಿಶ್ವ ಕಿರಿಯರ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾರತದ 9 ಬಾಕ್ಸರ್‌ಗಳು ಚಿನ್ನದ ಪದಕಕ್ಕಾಗಿ ಸೆಣಸಾಡಲಿದ್ದಾರೆ. ಪಾಯಲ್ (48 ಕೆ.ಜಿ.), ನಿಶಾ (52ಕೆ.ಜಿ.), ವಿನಿ (57 ಕೆ.ಜಿ.), ಸೃಷ್ಟಿ (63 ಕೆ.ಜಿ.), ಆಕಾಂಕ್ಷಾ (70 ಕೆ.ಜಿ.), ಮೇಘಾ (80 ಕೆ.ಜಿ.), ಜತಿನ್ (54 ಕೆ.ಜಿ.), ಸಾಹಿಲ್ (75 ಕೆ.ಜಿ.) ಹೇಮಂತ್ (80+ ಕೆ.ಜಿ.) ಫೈನಲ್‌ನಲ್ಲಿ ಆಡಲಿದ್ದಾರೆ. ಅಮಿಷಾ, ಪ್ರಾಚಿ, ಹಾರ್ದಿಕ್ ಬೆಳ್ಳಿಯೊಂದಿಗೆ ಅಭಿಯಾನ ಅಂತ್ಯಗೊಳಿಸಿದ್ದಾರೆ.
 

click me!