ಪ್ರತಿಷ್ಠಿತ ಆಜ್ಲಾನ್ ಶಾ ಕಪ್ ಹಾಕಿಗೆ ಕೊರೊನಾ ವೈರಸ್ ಹೊಡೆತ!

By Suvarna NewsFirst Published Mar 2, 2020, 9:19 PM IST
Highlights

ಕೊರೊನಾ ವೈರಸ್ ಇದೀಗ ಪ್ರತಿ ಕ್ಷೇತ್ರಕ್ಕೂ ಹೊಡೆತ ನೀಡುತ್ತಿದೆ. ಈಗಾಗಲೇ ಏಷ್ಯಾ ಕ್ರಿಕೆಟ್ ಆಯೋಜನೆ ಸಭೆ ಕೊರೊನಾ ವೈರಸ್‌ನಿಂದ ರದ್ದಾಗಿದೆ. ಇದರ ಬೆನ್ನಲ್ಲೇ ಪ್ರತಿಷ್ಠಿತ ಅಜ್ಲಾನ್ ಶಾ ಹಾಕಿ ಟೂರ್ನಿಗೂ ಹೊಡೆತ ನೀಡಿದೆ.

ಮಲೇಷಿಯಾ(ಮಾ.02): ಕೊರೊನಾ ವೈರಸ್ ಹೊಡೆತಕ್ಕೆ ಸಿಲುಕಿದ ಪಟ್ಟಿಯಲ್ಲಿ ಇದೀಗ ಪ್ರತಿಷ್ಠಿತ ಆಜ್ಲಾನ್ ಶಾ ಹಾಕಿ ಕಪ್ ಟೂರ್ನಮೆಂಟ್ ಕೂಡ ಸೇರಿಕೊಂಡಿದೆ. ಎಪ್ರಿಲ್ 11 ರಿಂದ 18ರ ವರೆಗೆ ಮಲೇಷಿಯಾದಲ್ಲಿ ಆಯೋಜನೆಯಾಗಿದ್ದ ಟೂರ್ನಿ ಇದೀಗ ಕೊರೊನಾ ವೈರಸ್‌ನಿಂದ ಮುಂದೂಡಲಾಗಿದೆ.

"

ಇದನ್ನೂ ಓದಿ: ಕೊರೋನಾ ಭೀತಿ: ಭಾರತ ಹಾಕಿ ತಂಡದ ಚೀನಾ ಪ್ರವಾಸ ರದ್ದು!

ಕೊರೊನಾ ವೈರಸ್ ಭೀತಿ ಹಾಗೂ  ಹಾಕಿ ಪಟುಗಳ ಸುರಕ್ಷತೆ ದೃಷ್ಟಿಯಿಂದ ಅಜ್ಲಾನ್ ಶಾ ಹಾಕಿ ಕಪ್ ಟೂರ್ನಿಯನ್ನು ಮುಂದೂಡಲಾಗಿದೆ. ಸೆಪ್ಟೆಂಬರ್ 24ರಿಂದ ಅಕ್ಟೋಬರ್ 3ರ ವರೆಗೆ ಅಜ್ಲಾನ್ ಶಾ ಹಾಕಿ ಕಪ್ ನಡೆಯಲಿದೆ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ರಾಣಿ ರಾಂಪಾಲ್‌ಗೆ ಒಲಿದ ವಿಶ್ವ ಗೇಮ್ಸ್‌ ಪ್ರಶಸ್ತಿ

ಪ್ರತಿ ವರ್ಷ ಅಜ್ಲಾನ್ ಶಾ ಹಾಕಿ ಟೂರ್ನಿಯಲ್ಲಿ ಭಾರತ ಪಾಲ್ಗೊಳ್ಳುತ್ತಿತ್ತು. ಆದರೆ ಎಪ್ರಿಲ್ ತಿಂಗಳಲ್ಲಿ ಭಾರತ ಪ್ರೋ ಲೀಗ್ ಹಾಕಿ ಟೂರ್ನಿ ಆಯೋಜಿಸುತ್ತಿರುವ ಈ ಬಾರಿ ಆಜ್ಲಾನ್ ಶಾ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಭಾರತೀಯ ಹಾಕಿ ಫೆಡರೇಶನ್ ಹೇಳಿತ್ತು. ಇದೀಗ ವೇಳಾಪಟ್ಟಿ ಬದಲಾವಣೆಯಿಂದ ಟೂರ್ನಿಯಲ್ಲಿ ಭಾರತ ಪಾಲ್ಗೊಳ್ಳುವ ಸಾಧ್ಯತೆ ಇದೆ.

click me!