Haveri News: ಇದು ರಸ್ತೆಯಲ್ಲ, ಯಮಲೋಕದ ಹೆದ್ದಾರಿ, ಶಪಿಸುತ್ತ ಸಂಚರಿಸಿ!

By Kannadaprabha News  |  First Published Dec 23, 2022, 10:50 AM IST

 ಕೊಡಿಯಾಲ ಹೊಸಪೇಟೆ ಗ್ರಾಮದ ಮಧ್ಯದಲ್ಲಿ ಹಾಯ್ದು ಹೋಗಿರುವ ಬಿರೂರು-ಸಮ್ಮಸಗಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಕುಂಠಿತಗೊಂಡಿರುವುದನ್ನು ಖಂಡಿಸಿ ಇಲ್ಲಿನ ನಿವಾಸಿಗಳು ಧನ್ಯೋಸ್ಮೀ ಭರತಭೂಮಿ ತಂಡದ ನೇತೃತ್ವದಲ್ಲಿ ‘ಇದು ರಸ್ತೆ ಅಲ್ಲ, ಯಮಲೋಕದ ಹೆದ್ದಾರಿ, ಇಲ್ಲಿ ಯಮರಾಜನಿದ್ದಾನೆ’ ಎಂಬ ಫ್ಲೆಕ್ಸ್‌ ಹಿಡಿದು ವಿನೂತನವಾಗಿ ಪ್ರತಿಭಟಿಸಿದರು.


ರಾಣಿಬೆನ್ನೂರು (ಡಿ.23) : ತಾಲೂಕಿನ ಕೊಡಿಯಾಲ ಹೊಸಪೇಟೆ ಗ್ರಾಮದ ಮಧ್ಯದಲ್ಲಿ ಹಾಯ್ದು ಹೋಗಿರುವ ಬಿರೂರು-ಸಮ್ಮಸಗಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಕುಂಠಿತಗೊಂಡಿರುವುದನ್ನು ಖಂಡಿಸಿ ಇಲ್ಲಿನ ನಿವಾಸಿಗಳು ಧನ್ಯೋಸ್ಮೀ ಭರತಭೂಮಿ ತಂಡದ ನೇತೃತ್ವದಲ್ಲಿ ‘ಇದು ರಸ್ತೆ ಅಲ್ಲ, ಯಮಲೋಕದ ಹೆದ್ದಾರಿ, ಇಲ್ಲಿ ಯಮರಾಜನಿದ್ದಾನೆ’ ಎಂಬ ಫ್ಲೆಕ್ಸ್‌ ಹಿಡಿದು ವಿನೂತನವಾಗಿ ಪ್ರತಿಭಟಿಸಿದರು.

ಈ ಸಮಯದಲ್ಲಿ ಸಂಘಟನೆಯ ಗೌರವ ಅಧ್ಯಕ್ಷ ಡಾ. ಜಿ.ಜೆ. ಮೆಹಂದಳೆ ಮಾತನಾಡಿ, ಸರ್ಕಾರದ ಮೂಲಭೂತ ಸೌಕರ್ಯಗಳಲ್ಲಿ ರಸ್ತೆಯು ಪ್ರಮುಖವಾಗಿರುತ್ತದೆ. ಕೊಡಿಯಾಲ ಹೊಸಪೇಟೆಯಿಂದ ಹರಿಹರವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಕಾಮಗಾರಿ ಕಳೆದ ಮೂರು ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿದೆ. 

Latest Videos

undefined

CM Bommai: ನಾಡಿನ ಅಭಿವೃದ್ಧಿ ಜೊತೆಗೆ ಸ್ವಕ್ಷೇತ್ರದ ಅಭಿವೃದ್ಧಿ: ಹಾವೇರಿಯನ್ನು ಹೈಟೆಕ್‌ ಜಿಲ್ಲೆ ಮಾಡಲು ಬೊಮ್ಮಾಯಿ ಪಣ

ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ದ್ವಿ ಚಕ್ರ, ತ್ರಿಚಕ್ರ ಮತ್ತಿತರ ವಾಹನಗಳ ಚಾಲಕರು ಒಂದಿಲ್ಲೊಂದು ಅಪಘಾತದಲ್ಲಿ ಸಿಲುಕಿಕೊಳ್ಳುತ್ತಿರುವುದು ಒಂದೆಡೆಯಾದರೆ, ರಸ್ತೆಯಿಂದ ಹೊರ ಹೊಮ್ಮುವ ಧೂಳಿನಿಂದ ಸಾರ್ವಜನಿಕರು, ರೋಗಿಗಳು ಶ್ವಾಸಕೋಶಗಳ ಸಂಬಂಧಿಸಿದ ರೋಗಗಳನ್ನು ಅನುಭವಿಸುವಂತಾಗಿದೆ. ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ತೆರಳುವವರು ಸಾಯುವಂತಾದರೆ, ರೋಗವಿಲ್ಲದವರು ರೋಗಕ್ಕೆ ಬಲಿಯಾಗುವಂಥ ಧೂಳು ಈ ರಸ್ತೆಯಲ್ಲಿ ಮನೆ ಮಾಡಿದೆ. ಈ ರಸ್ತೆಯ ಅಕ್ಕಪಕ್ಕದಲ್ಲಿರುವ ವಾಗೀಶನಗರ, ಹೊಸ ನಲವಾಗಲ ಗ್ರಾಮಗಳ ನಿವಾಸಿಗಳ ಮನೆಗಳು ಸಂಪೂರ್ಣ ಧೂಳುಮಯವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯಲ್ಲಿ ಸಂಚರಿಸುವ ಶಾಲಾ ಮಕ್ಕಳು, ಮಹಿಳೆಯರು, ವಯೋವೃದ್ಧರು ನಿತ್ಯ ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಸರ್ಕಾರದ ಮೂಲಭೂತ ಸೌಕರ್ಯಗಳಲ್ಲಿ ರಸ್ತೆಯು ಪ್ರಮುಖವಾಗಿರುತ್ತದೆ. ಕೊಡಿಯಾಲ ಹೊಸಪೇಟೆಯಿಂದ ಹರಿಹರವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಕಾಮಗಾರಿಯು ಕಳೆದ ಮೂರು ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿದೆ ಎಂದು ದೂರಿದರು.

ಹದಗೆಟ್ಟ ರಸ್ತೆಗಳು: 'ದುರ್ಗಾದೇವಿ' ವೇಷ ತೊಟ್ಟು ಬಾಲಕಿ ವಿಭಿನ್ನ ಅಭಿಯಾನ

ಸಂಘಟನೆಯ ಜಿಲ್ಲಾಧ್ಯಕ್ಷ ಚರಣ ಅಂಗಡಿ, ಸದಸ್ಯರಾದ ವಿಜಯ ಉದಗಟ್ಟಿ, ಹರೀಶ ಆರ್‌.ಆರ್‌., ಬಸವರಾಜ ಕರೂರ, ಮಹೇಶ ಗೋಣೆಪ್ಪನವರ, ಕಿರಣ, ಶಂಭು ಅಂಕಲಕೋಟೆ, ರಾಜಶೇಖರ, ವಿಶ್ವನಾಥ, ಉಮೇಶ, ಮಂಜುನಾಥ, ಹೋವಳೆ, ವಾಗೀಶನಗರದ ನಿವಾಸಿಗಳಾದ ಡಾ. ಜ್ಯೋತಿ ಮಹಾಂತೇಶ, ಉಮಾ ಅಣಬಿ, ಮೀರಾ ಸತೀಶ, ಪವನ ವೆರ್ಣೇಕರ ಇದ್ದರು

click me!