Haveri: ಹೆಗ್ಗೇರಿ ಕೆರೆಯಲ್ಲಿ ಹೈಟೆಕ್‌ ಗಾಜಿನ ಮನೆ ನಿರ್ಮಾಣದ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ

By Sathish Kumar KH  |  First Published Dec 1, 2022, 7:18 PM IST

* ಹಾವೇರಿ ನಗರದ ಹೊರ ಹೊಲಯಲ್ಲಿ ಗಾಜಿನ ಮನೆ ನಿರ್ಮಾಣದ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ
* ಕೆರೆ ಸಂರಕ್ಷಣೆ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆಯದೆ ಯೋಜನೆ ಆರಂಭ
* ಟೆಂಡರ್ ಮಾಡುವಾಗಲೂ ಎಚ್ಚೆತ್ತುಕೊಳ್ಳದ ನಗರಸಭೆ ಅಧಿಕಾರಿಗಳು
* ಸಾರ್ವಜನಿಕ ತೆರಿಗೆ ಹಣ ಖರ್ಚಿನಲ್ಲಿ ಭಾರಿ ಎಡವಟ್ಟು


ವರದಿ- ಪವನ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್

ಹಾವೇರಿ (ಡಿ.1) : ಕಾಮಗಾರಿಗಳ ಹೆಸರಲ್ಲಿ ಸಾರ್ವಜನಿಕರ ತೆರಿಗೆ ಹಣ ಲೂಟಿ ಹೊಡೆಯೋ ಪ್ಲ್ಯಾನ್ ಆಗಾಗ ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ಘನಂಧಾರಿ‌  ಕಾಮಗಾರಿ ಮಾಡಿ ಕೋಟ್ಯಾಂತರ ರೂಪಾಯಿ ಹಣ ಲೂಟಿ ಹೊಡೆದಿದ್ದಾರೆ. ಹಾವೇರಿ ಯಲ್ಲಿ ಗ್ಲಾಸ್ ಗೌಸ್ ಮಾಡೋ ನೆಪದಲ್ಲಿ ಕೋಟಿ ಕೋಟಿ ದುಡ್ಡು ನೀರು ಪಾಲು ಮಾಡಲಾಗಿದೆ.

Latest Videos

undefined

ಹಾವೇರಿ ನಗರದ ಹೊರವಲಯದಲ್ಲಿರುವ ಹೆಗ್ಗೇರಿ ಕೆರೆಯಲ್ಲಿ 'ಗಾಜಿನ ಮನೆ' ಮಾಡುವುದಾಗಿ ಹೇಳಿ ಘನಂಧಾರಿ ಕೆಲಸ ಮಾಡಿದ್ದಾರೆ. ಯೋಜನೆಗೆ ಇದುವರೆಗೆ ವ್ಯಯಿಸಿದ್ದ ಬರೋಬ್ಬರಿ 2.60 ಕೋಟಿ ರೂಪಾಯಿ ನೀರು ಪಾಲಾಗಿದೆ. ಪುಣೆ-ಬೆಂಗಳೂರು ಹೆದ್ದಾರಿಗೆ ಹೊಂದಿಕೊಂಡಿರುವ ಹೆಗ್ಗೇರಿ ಕೆರೆ ಜಿಲ್ಲೆಯ ಅತಿ ದೊಡ್ಡ ಕೆರೆ. ಈ ಕೆರೆಯನ್ನು ಪ್ರವಾಸಿ ತಾಣವಾಗಿ ಮಾಡಲಾಗುತ್ತದೆ. ಇದರಿಂದ ಹಾವೇರಿ ಕೂಡಾ ಒಂದು ಪ್ರವಾಸಿ ತಾಣ ಆಗುತ್ತದೆ ಎಂದುಕೊಂಡಿದ್ದ ಜನರಿಗೆ ಈಗ ನಿರಾಸೆಯಾಗಿದೆ. ಅಂದರೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಗ್ಲಾಸ್ ಹೌಸ್ ಯೋಜನೆಗೆ ತಡೆಯೊಡ್ಡಿದೆ. 

ಕರಾವಳಿ ಹೊರಗಡೆ ದೈವಾರಾಧನೆ: ಸಿಡಿದೆದ್ದ ಮಂಗಳೂರು ಜನ

ಯೋಜನೆ ಪ್ರಸ್ತಾವನೆ ತಿರಸ್ಕಾರ: ಹೆಗ್ಗೇರಿ ಕೆರೆಯಲ್ಲಿ ಗ್ಲಾಸ್‌ ಹೌಸ್‌ ಹಾಗೂ ಹೈಟೆಕ್‌ ಪಾರ್ಕ್‌ ನಿರ್ಮಿಸೋಕೆ 'ನಿರಾಕ್ಷೇಪಣಾ ಪತ್ರ' ನೀಡುವಂತೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಜಿಲ್ಲಾ ನಗರಾಭಿವೃದ್ಧಿ ಕೋಶ 2021ರಲ್ಲಿಯೇ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಕೆರೆ ಅಂಗಳದಲ್ಲಿ ಯಾವುದೇ ಶಾಶ್ವತ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಅವಕಾಶ ಇಲ್ಲ. ಹೀಗಾಗಿ ಗಾಜಿನ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ  ಪ್ರಸ್ತಾವನೆಯನ್ನು ನಿರಾಕರಿಸಿದ್ದಾರೆ.

ನಾಲ್ಕು ವರ್ಷದಲ್ಲಿ ಶೇ.20 ಕಾಮಗಾರಿ: 2017- 18ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾವೇರಿ ಜಿಲ್ಲೆಗೆ 50 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿದ್ದರು. ಅದರಲ್ಲಿ 5 ಕೋಟಿ ರೂ. ಗಾಜಿನ ಮನೆ ಮತ್ತು ಇತರ ಕಾಮಗಾರಿಗಳಿಗೆ ಮೀಸಲಿಡಲಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ಸಹಯೋಗದಲ್ಲಿ ಟೆಂಡರ್‌ ಕರೆದು, ಬೆಂಗಳೂರಿನ ನಿಖಿತಾ ಬಿಲ್ಡ್‌ಟೆಕ್‌ ಕಂಪನಿಗೆ ಕಾಮಗಾರಿಯ ಹೊಣೆ ನೀಡಲಾಗಿತ್ತು. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು.ಆದರೆ  4 ವರ್ಷ ಕಳೆದರೂ ಶೇ.20 ಕಾಮಗಾರಿ ಪೂರ್ಣಗೊಂಡಿಲ್ಲ. ಈ ಯೋಜನೆಯ 5.40 ಕೋಟಿ ರೂ. ಅನುದಾನದಲ್ಲಿ ಈವರೆಗೆ 60 ಲಕ್ಷ ರೂ. ವೆಚ್ಚದ ಕೆಲಸ ಮಾಡಲಾಗಿದೆ. ಇದರ ಜತೆಗೆ ನಗರೋತ್ಥಾನ ಯೋಜನೆಯಡಿ 3 ಕೋಟಿ ವೆಚ್ಚದಲ್ಲಿ ರಿಟೇನಿಂಗ್‌ ವಾಲ್‌ ಮತ್ತು ರಸ್ತೆ ಕಾಮಗಾರಿಗೆ ಹಣ ಮೀಸಲಿಡಲಾಗಿತ್ತು. ಇದರಲ್ಲಿ 2 ಕೋಟಿ ರೂ. ಹಣವನ್ನು ಕಾಮಗಾರಿಗೆ ವಿನಿಯೋಗಿಸಲಾಗಿದೆ. ಇನ್ನೂ 1 ಕೋಟಿ ಕಾಮಗಾರಿ ಬಾಕಿ ಉಳಿದಿದೆ. ಆದರೆ ಬೇಕಾಬಿಟ್ಟಿ ದೊಡ್ಡು ಖರ್ಚು ಮಾಡಿ ಕಾಮಗಾರಿ ಮಾಡಲಾಗಿದೆ.

ಇಂದಿನಿಂದ ಹಾವೇರಿ ಸಾಹಿತ್ಯ ಸಮ್ಮೇಳನದ ರಥಯಾತ್ರೆ ಆರಂಭ

ಪ್ರಾಧಿಕಾರದ ಒಪ್ಪಿಗೆ ಪತ್ರವಿಲ್ಲದೆ ಟೆಂಡರ್: ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳಿಗೆ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಒಪ್ಪಿಗೆ ಸಿಗಲ್ಲ ಎಂಬ ಕನಿಷ್ಟ ಜ್ಞಾನವೂ ಇರಲಿಲ್ಲವಾ? ಎಂಬ ಚರ್ಚೆ ಆರಂಭವಾಗಿದೆ. ಹೆಗ್ಗೇರಿ ಕೆರೆಯಲ್ಲಿ ಈ ಯೋಜನೆ ಕೈಗೊಂಡಾಗ ಹಲವಾರು ವರ್ಷಗಳಿಂದ ಕೆರೆ ನೀರಿಲ್ಲದೆ ಬತ್ತಿ ಹೋಗಿತ್ತು. 2009ರಲ್ಲಿ ತುಂಬಿದ್ದ ಕೆರೆಯು ದಶಕದ ನಂತರ ಅಂದರೆ 2019ರಲ್ಲಿ ಅತಿವೃಷ್ಟಿಯಿಂದ ಕೋಡಿ ಬಿದ್ದಿತು. ಕೆರೆ ತುಂಬುವುದಿಲ್ಲ ಎಂದು ನಿರೀಕ್ಷಿಸಿದ್ದ ಗುತ್ತಿಗೆದಾರರಿಗೆ ದೊಡ್ಡ ಸವಾಲು ಎದುರಾಗಿ ಕಾಮಗಾರಿ ಸ್ಥಗಿತಗೊಂಡಿದೆ.

click me!