ಮೋದಿ ಮಹತ್ವಾಕಾಂಕ್ಷಿ ಯೋಜನೆ ಜನ್‌ಧನ್ ಯೋಜನೆ ಹಾಗೂ ಫಸಲ್ ಬಿಮಾ ಯೋಜನೆಗಳು ಜನ ಸಾಮಾನ್ಯರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಸಫಲ| ಹಾವೇರಿ ಜಿಲ್ಲೆಯಲ್ಲೇ 2 ಲಕ್ಷ ಜನರು ಖಾತೆ ತೆರೆದಿದ್ದಾರೆ ಎಂದ ಸಂಸದ ಶಿವಕುಮಾರ ಉದಾಸಿ| ಚೆನ್ನಾಪುರ ಗ್ರಾಮದಲ್ಲಿ 1.15 ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ|
ಹಾನಗಲ್ಲ(ಅ.18): ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಜನ್‌ಧನ್ ಯೋಜನೆ ಹಾಗೂ ಫಸಲ್ ಬಿಮಾ ಯೋಜನೆಗಳು ಜನ ಸಾಮಾನ್ಯರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಸಫಲವಾಗಿದ್ದು, ಹಾವೇರಿ ಜಿಲ್ಲೆಯಲ್ಲೇ 2 ಲಕ್ಷ ಜನರು ಖಾತೆ ತೆರೆದಿದ್ದಾರೆ ಎಂದು ಸಂಸದ ಶಿವಕುಮಾರ ಉದಾಸಿ ಅವರು ತಿಳಿಸಿದ್ದಾರೆ.
ತಾಲೂಕಿನ ಚೆನ್ನಾಪುರ ಗ್ರಾಮದಲ್ಲಿ 1.15 ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈಗ ದೇಶದಲ್ಲಿ ಜನ್‌ಧನ್ ಯೋಜನೆಯಡಿ 33 ಕೋಟಿ ಜನ ಖಾತೆ ತೆರೆದಿದ್ದಾರೆ. ಹೀಗಾಗಿ ಬ್ಯಾಂಕುಗಳ ಸಂಖ್ಯೆಗಳು ಹೆಚ್ಚಾಗ ಬೇಕಾಗಿದೆ ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕುಗಳು ಆರಂಭವಾಗಬೇಕು. ರೈತರಿಗೆ ಇನ್ನು ಮುಂದೆ ಅವರ ಕೃಷಿ ಭೂಮಿಯ ಫಸಲನ್ನು ಸೆಟ್‌ಲೈಟ್ ಮೂಲಕ ಸರ್ವೆ ಮಾಡಲಾಗುತ್ತದೆ. ಯಾವುದೇ ದಾಖಲೆಗಳು ತಪ್ಪಾಗಿ ನಮೂದಿಸಿದಲ್ಲಿ ಅದಕ್ಕೆ ದಂಡ ತೆರಬೇಕಾಗುತ್ತದೆ. ಸರ್ಕಾರ ರೈತರಿಗೆ ಅನ್ಯಾಯವಾಗದಂತೆ ನಿಯಮಗಳನ್ನು ರೂಪಿಸುತ್ತದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಾನಗಲ್ಲ ತಾಲೂಕನ್ನು ಪೂರ್ಣ ಪ್ರಮಾಣದ ನೀರಾವರಿ ಸೌಲಭ್ಯದ ತಾಲೂಕನ್ನಾಗಿಸುವ ಪ್ರಯತ್ನ ನಡೆದಿದೆ. ಶೀಘ್ರ ಬಾಳಂಬೀಡ ಹಾಗೂ ಶಿರಗೋಡ ಏತ ನೀರಾವರಿ ಯೋಜನೆಗಳ ಕಾಮಗಾರಿ ಆರಂಭಗೊಳ್ಳಲಿದೆ. ನರೇಗಲ್, ಹುಲಗಡ್ಡಿ ಏತ ನೀರಾವರಿ ಯೋಜನೆ ಹಾಗೂ ನರೇಗಲ್ಲ ಕೆರೆಗೆ ನೀರು ತುಂಬಿಸುವ ಯೋಜನೆ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರ ಮಂಜೂರಾತಿ ದೊರೆಯಲಿದೆ. ಹಾನಗಲ್ಲ ತಾಲೂಕಿನ ಮಾವು ಬೆಳೆವಿಮೆಗೆ 33 ಕೋಟಿ ಮಂಜೂರಾಗಿದೆ. ಉಳಿದ ಬೆಳೆಗಳಿಗೆ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 386 ಕೋಟಿ ಮಂಜೂರಾಗಿದೆ ಎಂದು ಹೇಳಿದ್ದಾರೆ.
ಜಿಪಂ ಮಾಜಿ ಸದಸ್ಯ ರಾಜಣ್ಣ ಪಟ್ಟಣದ, ಗಣ್ಯರಾದ ಜಿ.ಎಸ್. ದೇಶಪಾಂಡೆ, ಸಿದ್ದನಗೌಡ ಪಾಟೀಲ, ಕಲ್ಯಾಣಕುಮಾರ ಶೆಟ್ಟರ, ಚಂದ್ರಣ್ಣ ಹರಿಜನ, ಚಂದ್ರು ಉಗ್ರಣ್ಣನವರ, ನಾಗಪ್ಪ ಪಿಳ್ಳಿಕಟ್ಟಿ, ಗಿರೀಶಗೌಡ ಪಾಟೀಲ, ಶಿವಲಿಂಗಪ್ಪ ತಲ್ಲೂರ, ಕಸ್ತೂರವ್ವ ವಡ್ಡರ, ಬಸವರಾಜ ಹುಳ್ಳಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಗೌರವ್ವ ಸೇತಸನದಿ, ಕಳಸೂರ, ರಾಜಣ್ಣ ಗೌಳಿ, ಬಿ.ಆರ್. ಪಾಟೀಲ ಮೊದಲಾದವರು ಇದ್ದರು.
ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಹಾನಗಲ್ಲ ತಾಲೂಕಿನ ಶ್ಯಾಡಗುಪ್ಪಿ ಗ್ರಾಮದಲ್ಲಿ ಗುರುವಾರ 31 ಲಕ್ಷ ವೆಚ್ಚದಲ್ಲಿ ಸರ್ಕಾರಿ ಪ್ರೌಢಶಾಲೆಯ ಹೆಚ್ಚುವರಿ 2 ಕೊಠಡಿ ನಿರ್ಮಾಣ, ಮಾವಕೊಪ್ಪ ಗ್ರಾಮದಲ್ಲಿ 12 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ ಭವನ ನಿರ್ಮಾಣ, ಶಿರಗೋಡ ಗ್ರಾಮದಲ್ಲಿ 50 ಲಕ್ಷ ವೆಚ್ಚದಲ್ಲಿ ಮೌಲಾನಾ ಆಜಾದ ಮಾದರಿ ಶಾಲೆ ಕಟ್ಟಡ ಕಾಮಗಾರಿ, ಕ್ಯಾಸನೂರ ಗ್ರಾಮದಲ್ಲಿ . 10 ಲಕ್ಷ ವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ. ಚನ್ನಾಪುರ ಗ್ರಾಮದಲ್ಲಿ 115 ಲಕ್ಷ ವೆಚ್ಚದಲ್ಲಿ ಚನ್ನಾಪುರ- ಕಾಲ್ವೆಯಲ್ಲಾಪುರ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಚಾಲನೆ, ಚಿಕ್ಕಾಂಶಿ ಹೊಸೂರು ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ, 5 ಲಕ್ಷ ವೆಚ್ಚದಲ್ಲಿ ರೈತ ತರಬೇತಿ ಕೇಂದ್ರ ಕಟ್ಟಡ, ಶಿರಗೋಡ ಗ್ರಾಮದಲ್ಲಿ 8 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟಿಸಿದರು.