ಹಾವೇರಿ: ಆರೋಗ್ಯ ಕಾರ್ಡ್‌ ನೋಂದಣಿ ಅವಧಿ ವಿಸ್ತರಣೆ

By Web Desk  |  First Published Oct 18, 2019, 8:05 AM IST

ಮಣಿಪಾಲ್‌ ಆರೋಗ್ಯ ಕಾರ್ಡ್‌ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳುವ ಅವಧಿಯನ್ನು ಅ. 31ರ ವರೆಗೆ ವಿಸ್ತರಣೆ| ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ಕೈಗೆಟುಕುವ ದರದಲ್ಲಿ ದೊರಕಲಿ ಎಂಬ ಉದ್ದೇಶದಿಂದ ಮಣಿಪಾಲ್‌ ಆರೊಗ್ಯ ಕಾರ್ಡ್‌ ಯೋಜನೆ ರೂಪಿಸಿದೆ| ಈ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡವರಿಗೆ ಆರೊಗ್ಯ ಸೇವೆಗಳಲ್ಲಿ ರಿಯಾಯಿತಿ ಸಿಗಲಿದೆ| 


ಹಾವೇರಿ(ಅ.18): ಮಣಿಪಾಲ್‌ ಆರೋಗ್ಯ ಕಾರ್ಡ್‌ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳುವ ಅವಧಿಯನ್ನು ಅ. 31ರ ವರೆಗೆ ವಿಸ್ತರಿಸಲಾಗಿದೆ ಎಂದು ಮಣಿಪಾಲ್‌ ಕಸ್ತೂರಿ ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ಕೈಗೆಟುಕುವ ದರದಲ್ಲಿ ದೊರಕಲಿ ಎಂಬ ಉದ್ದೇಶದಿಂದ ಮಣಿಪಾಲ್‌ ಆರೊಗ್ಯ ಕಾರ್ಡ್‌ ಯೋಜನೆ ರೂಪಿಸಿದೆ. ಈ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡವರಿಗೆ ಆರೊಗ್ಯ ಸೇವೆಗಳಲ್ಲಿ ರಿಯಾಯಿತಿ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಣಿಪಾಲ್‌, ಉಡುಪಿ, ಕಾರ್ಕಳ, ಮಂಗಳೂರು ಹಾಗೂ ಗೋವಾದ ಮಣಿಪಾಲ ಸಮೂಹ ಆಸ್ಪತ್ರಗಳಲ್ಲಿ ಸೌಲಭ್ಯ ಪಡೆಯಬಹುದಾಗಿದೆ. ವೈದ್ಯರ ಸಮಾಲೋಚನೆಗೆ ಶೇ. 50, ಪ್ರಯೋಗಾಲಯ ಪರೀಕ್ಷೆಗೆ ಶೇ. 30, ಸಿಟಿ, ಎಂಆರ್‌ಐ ಅಲ್ಟ್ರಾಸೌಂಡ್‌ ಶೇ. 20, ಹೊರರೋಗಿ ವಿಧಾನಗಳಲ್ಲಿ ಶೇ. 20, ಔಷಧಾಲಯಗಳಲ್ಲಿ ಶೇ. 12 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. ಆಸಕ್ತರು ಹೆಸರು ನೋಂದಾಯಿಸಿಕೊಳ್ಳಲು ನಗರದ ಸೈಂಟ್‌ ಮಿಲಾಗ್ರೇಸ್‌ ಸೌಹಾರ್ದ ಸಂಸ್ಥೆ (ಮೊ: 6364908876) ಸಂಪರ್ಕಿಸಲು ತಿಳಿಸಿದ್ದಾರೆ.
 

click me!