ಹಿರೇಕೇರೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪ್ರಭಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಪಕ್ಷದಲ್ಲಿದ್ದ ಮಾಜಿ ಶಾಸಕ ಯು.ಬಿ. ಬಣಕಾರ್ ಅವರನ್ನು ಸೆಳೆದುಕೊಂಡಿದೆ. ಆದರೆ, ಇದಕ್ಕೆ ತಿರುಗೇಟು ನೀಡಿರುವ ಬಿಸಿ. ಪಾಟೀಲ್, ಪಕ್ಷದಲ್ಲಿ ಎಲ್ಲ ಅಧಿಕಾರವನ್ನೂ ಅನುಭವಿಸಿ ಬೇರೊಂದು ಪಕ್ಷಕ್ಕೆ ಹೋಗಿದ್ದಾರೆ. ಜನರು ಅಭಿವೃದ್ಧಿ ಕಾರ್ಯಗಳನ್ನು ನೋಡಿ ಗೆಲ್ಲಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು (ನ.18) : ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಕಾಂಗ್ರೆಸ್ ಪಕ್ಷದಿಂದ ಹಿರೇಕೇರೂರು ಕ್ಷೇತ್ರದಿಂದ ಸ್ಪರ್ಧೆಗಿಳಿಸಲು ಬಿಜೆಪಿ ಪಕ್ಷದಲ್ಲಿದ್ದ ಮಾಜಿ ಶಾಸಕ ಯು.ಬಿ. ಬಣಕಾರ್ ಅವರನ್ನು ಸೆಳೆದುಕೊಂಡಿದೆ. ಆದರೆ, ಇದಕ್ಕೆ ತಿರುಗೇಟು ನೀಡಿರುವ ಬಿಸಿ. ಪಾಟೀಲ್, ಪಕ್ಷದಲ್ಲಿ ಎಲ್ಲ ಅಧಿಕಾರವನ್ನೂ ಅನುಭವಿಸಿ ಬೇರೊಂದು ಪಕ್ಷಕ್ಕೆ ಹೋಗಿದ್ದಾರೆ. ಜನರು ಅಭಿವೃದ್ಧಿ ಕಾರ್ಯಗಳನ್ನು ನೋಡಿ ಗೆಲ್ಲಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿಯೇ ಕಾಂಗ್ರೆಸ್ (Congress) ಹೆಚ್ಚಿನ ಸ್ಥಾನ ಗೆಲ್ಲುವ ಗುರಿಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹಿರೇಕೇರೂರು (Hiorekeruru) ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ (B.C. Patil) ವಿರುದ್ಧ ಕಾಂಗ್ರೆಸ್‌ನಿಂದ ಪ್ರಭಲ ಸ್ಪರ್ಧಿಯನ್ನು ಕಣಕ್ಕಿಳಿಸಲು ಮುಂದಾಗಿದೆ. ಈಗಾಗಲೇ ಹಲವು ದಿನಗಳಿಂದ ಕಾಂಗ್ರೆಸ್‌ನಿಂದ ಅಭ್ಯರ್ಥಿ ಹುಡುಕಾಟ ನಡೆಸಲಾಗುತ್ತಿದ್ದು, ಮೂಲ ಕಾಂಗ್ರೆಸ್ಸಿಗರಲ್ಲಿ ಪ್ರಭಲ ಅಭ್ಯರ್ಥಿ ಲಭ್ಯವಾಗಿಲ್ಲ. ಹೀಗಾಗಿ, ಬಿಜೆಪಿಯಲ್ಲಿದ್ದ ಯು.ಬಿ. ಬಣಕಾರ್ (Banakar) ಅವರನ್ನೇ ಕಾಂಗ್ರೆಸ್ ಸೆಳೆದುಕೊಂಡಿದೆ. ನ.21 ರಂದು ಅಧಿಕೃತವಾಗಿ ಬಣಕಾರ್ ಕಾಂಗ್ರೆಸ್ ಸೇರ್ಪಡೆ ಆಗುವ ಸಾಧ್ಯತೆಯಿದೆ.
undefined
ಸಚಿವ ಬಿ.ಸಿ. ಪಾಟೀಲ್ ಕಿರುಕುಳಕ್ಕೆ ಬಿಜೆಪಿ ಬಿಡುವ ನಿರ್ಧಾರ; ರಾಜೀನಾಮೆಗೆ ಮಾಜಿ ಶಾಸಕ ಯು.ಬಿ. ಬಣಕಾರ ಸ್ಪಷ್ಟನೆ
ಬಿಜೆಪಿ ತೊರೆದ ಬಣಕಾರಗೆ ಬಿ.ಸಿ.ಪಾಟೀಲ್ ತಿರುಗೇಟು: ಮಾಜಿ ಶಾಸಕ ಯು.ಬಿ. ಬಣಕಾರ್ ಅವರು ಯಾವ ಪಕ್ಷ (Party) ಸೇರಿದ್ದಾರೆ ಅಂತ ಗೊತ್ತಿಲ್ಲ. ಅವರು ಕಾಂಗ್ರೆಸ್ ಸೇರಿದಮೇಲೆ ನನ್ನ ಎದುರಾಳಿ ಆಗಿ ಸ್ಪರ್ಧಿಸಬಹುದು. ಬಣಕಾರ್ ಅವರನ್ನು ನಾನು ಹೊಸದಾಗಿ ಎದುರಿಸುತ್ತಿಲ್ಲ. ಈಗಾಗಲೇ ಮೂರು ಸಲ (Three time) ಅವರ ವಿರುದ್ಧ ಕುಸ್ತಿ (Wrestling) ಒಗದಿದ್ದೇನೆ. ಅವರನ್ನು ಮೂರು ಸಲ ಸೋಲಿಸಿದ್ದೇನೆ. ಅವರು ಏನು ಅಭಿವೃದ್ಧಿ ಮಾಡಿದಾರೆ ಎಂದು ಜನರ ಮುಂದೆ ಹೇಳಲಿ. ನಾನೇನು ಅಭಿವೃದ್ಧಿ ಮಾಡಿದೀನಿ ಅಂತ ನಾನು ಹೇಳುತ್ತೇನೆ. ನಾನು ಅಭಿವೃದ್ಧಿ ಮಾಡಿದ ಕಾರ್ಯಗಳ ಬಗ್ಗೆ ಪುಸ್ತಕ ಪ್ರಿಂಟ್ (Book) ಮಾಡಿ ಕೊಡುತ್ತೇನೆ. ಯಾರು ಬೇಕು ಅಂತ ಜನ ತೀರ್ಮಾನ ಮಾಡುತ್ತಾರೆ ಎಂದು ಸಚಿವ ಬಿ.ಸಿ. ಪಾಟೀಲ್ ಯು.ಬಿ. ಬಣಕಾರ್‍ಗೆ ತಿರುಗೇಟು ನೀಡಿದ್ದಾರೆ.
ನಾವು ಅನರ್ಹರಾದಾಗ ಹಾಲು ಕುಡಿದರು: ಈ ಹಿಂದಿನ ಚುನಾವಣೆ 2018 ರಲ್ಲಿ ನಾನು ಗೆದ್ದಿದ್ದರಿಂದ 2023ರತನಕ ಅವರು ಮನೆಯಲ್ಲಿ ಇರಬೇಕಿತ್ತು. ನಾನು ರಾಜೀನಾಮೆ ಕೊಡುತ್ತಿದ್ದಂತೆ ಬಣಕಾರ್ ಉಗ್ರಾಣ ನಿಗಮದ (Warehousing Corporation) ಅಧ್ಯಕ್ಷರಾದರು. ನಾವು 6 ತಿಂಗಳು ವನವಾಸ ಅನುಭವಿಸಿದೆವು. ನಾವು ಅನರ್ಹರಾದಾಗ ಇವರ ರಾಜಕೀಯ ಜೀವನ ಮುಗಿಯಿತು ಎಂದು ಬಹಳಷ್ಟು ಜನ ಹಾಲು ಕುಡಿದರು. 2023 ರತನಕ ನಾನು ಎಲೆಕ್ಷನ್ ಗೆ ನಿಲ್ಲಲು ಬರುತ್ತಿರಲಿಲ್ಲ. ನನಗಿಂತಲೂ ಮುಂಚೆ ಬಣಕಾರ್ 6 ತಿಂಗಳು ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ. ಸರ್ಕಾರಿ ಬಂಗಲೆ, ಕಾರು ಎಲ್ಲಾ ಅನುಭವಿಸಿದ್ದಾರೆ. ಎಲ್ಲಾ ಪ್ರೋಟೋಕಾಲ್ ನಲ್ಲಿ ಅವರು ಜೊತೆಗೆ ಇದ್ದರು. ಹೀಗಾಗಿ, ಎಲ್ಲ ಅಭಿವೃದ್ಧಿ ಕಾಮಗಾರಿಗಳ (Banishment) ಕಲ್ಲುಗಳಲ್ಲಿ ಅವರ ಹೆಸರನ್ನು ಹಾಕಿದ್ದೇವೆ ಎಂದರು.
ಬಿಜೆಪಿಗೆ ಹಿರೇಕೆರೂರು ಮಾಜಿ ಶಾಸಕ ಯು.ಬಿ.ಬಣಕಾರ ಗುಡ್‌ಬೈ : ಕಾಂಗ್ರೆಸ್‌ನತ್ತ ಹೆಜ್ಜೆ..?
ಕಿರುಕುಳ ಕೊಟ್ಟಿಲ್ಲ: ಮಾಜಿ ಶಾಸಕ ಬಣಕಾರ್ ಅವರಿಗೆ ನಾನು ಯಾವುದೇ ಕಿರುಕುಳ (Harassment) ಕೊಟ್ಟಿಲ್ಲ. ಯಾವ ರೀತಿ ಕಿರುಕುಳ ಕೊಟ್ಟೆ ಅಂತ ಹೇಳಲಿ. ನನಗೆ ಕ್ಯಾಬಿನೆಟ್ ದರ್ಜೆ ಸಚಿವ ( Cavinet Minister) ಸ್ಥಾನ ಸಿಕ್ಕಿದ್ದು ಅವರಿಗೆ ಕಿರುಕುಳ ಆಯ್ತಾ? ಎನ್ನುವುದು ಗೊತ್ತಿಲ್ಲ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರಿಂದ ಜನ ನನ್ನನ್ನು ಇಷ್ಟಪಟ್ಟಿದ್ದಾರೆ. ಆದ್ದರಿಂದಲೇ ಮೂರ್ನಾಲ್ಕು ಸಲ ಗೆಲ್ಲಿಸಿದ್ದಾರೆ. ಈ ಸಲವೂ ಖಂಡಿತವಾಗಿ ಜನರು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ (Faith) ಇದೆ. ನಮ್ಮ ಪಕ್ಷದ ಭೀಷ್ಮ ಹಾಗೂ ಪಿತಾಮಹ ಎನಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (Yadiyurappa) ಅವರ ಬೆಂಬಲ ನನಗೆ ಇದ್ದೇ ಇರುತ್ತದೆ. ಮೊನ್ನೆ ಶಿಕಾರಿಪುರಕ್ಕೆ (Shikaripura) ಹೋಗಿ ಯಡಿಯೂರಪ್ಪನವರನ್ನ ಭೇಟಿ ಮಾಡಿ ಬಂದಿದ್ದೇನೆ ಎಂದು ಮಾಹಿತಿ ನೀಡಿದರು.
ಶಾಶ್ವತ ಮಿತ್ರರು ಇಲ್ಲ: ಮಾಜಿ ಶಾಸಕ ಯು.ಬಿ. ಬಣಕಾರ್ ಯಡಿಯೂರಪ್ಪ ಅವರಿಗೆ ತುಂಬಾ ಆಪ್ತರು ಎಂಬ ಮಾತಿದೆ. ಆದರೆ, ರಾಜಕಾರಣದಲ್ಲಿ ಯಾರೊಬ್ಬರೂ ಯಾರಿಗೆ ಶಾಶ್ವತವಾಗಿ ಶತ್ರುಗಳು (Enimy) ಅಥವಾ ಮಿತ್ರರು (Friends) ಆಗಿರಲು ಸಾಧ್ಯವಿಲ್ಲ. ಆದರೆ, ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾಹಿತಿಗಾಗಿ ಯಡಿಯೂರಪ್ಪ ಅವರು ಬಣಕಾರ್ ಅವರಿಗೆ ಕರೆ (Call) ಮಾಡಿದಾಗ ತೆಗೆದಿಲ್ಲವಂತೆ. ಮತ್ತೊಮ್ಮೆ ಕರೆ ಮಾಡಿದರೆ ಕಾಲ್ ಕಟ್ ಮಾಡಿ ಸ್ವಿಚ್ ಆಫ್ (Switch opff) ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ನನಗೆ ಯಡಿಯೂರಪ್ಪ ಅವರು ಚುನಾವಣೆಯಲ್ಲಿ ಕಷ್ಟ ಪಡಬೇಕು ಎಂದು ಕಿವಿಮಾತು ಹೇಳಿದ್ದಾರೆ ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.