ನೆಲೆ ಕಳೆದುಕೊಂಡು ತ್ರಿಶಂಕು ಸ್ಥಿತಿಯಲ್ಲಿ ಹಾವೇರಿಯ ನಲವಾಗಲು ಗ್ರಾಮಸ್ಥರು!

By Suvarna News  |  First Published Apr 7, 2022, 4:02 PM IST

ಹರಿಹರ ಪಾಲಿ ಪೈಬರ್ ಕಾರ್ಖಾನೆಗೆ ಭೂಮಿ ಕೊಟ್ಟು ತಮ್ಮ ನೆಲೆಯನ್ನು ಕಳೆದುಕೊಂಡ ಹಾವೇರಿ ಗಡಿಭಾಗದ ನಲವಾಗಲು ಗ್ರಾಮ ಇನ್ನು ಸ್ಥಳಾಂತರವಾಗದೇ ತ್ರಿಶಂಕು ಸ್ಥಿತಿಯಲ್ಲಿದೆ.


ವರದಿ: ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್ 

ಹಾವೇರಿ(ಎ.7): ದಾವಣಗೆರೆ - ಹಾವೇರಿ ಗಡಿಭಾಗದ ನಲವಾಗಲು ಗ್ರಾಮಕ್ಕೆ (Nalawagal Village ) 47 ವರ್ಷ ಕಳೆದ್ರು ಇನ್ನು ಸ್ವತಂತ್ರ ಸಿಕ್ಕಿಲ್ಲ. ಹರಿಹರ ಪಾಲಿ ಪೈಬರ್ ಕಾರ್ಖಾನೆಗೆ (Harihar Polyfibers factory) ಭೂಮಿ ಕೊಟ್ಟು ತಮ್ಮ ನೆಲೆಯನ್ನು ಕಳೆದುಕೊಂಡ ಗ್ರಾಮ ಇನ್ನು ಸ್ಥಳಾಂತರವಾಗದೇ ತ್ರಿಶಂಕು ಸ್ಥಿತಿಯಲ್ಲಿದೆ.  ಪರಿಸರ ಮಾಲಿನ್ಯದ ಕಾರಣ 1993 ರಲ್ಲಿ ನಲವಾಗಲು ಗ್ರಾಮ ಸ್ಥಳಾಂತರಕ್ಕೆ 47 ವರ್ಷಗಳ ಹಿಂದೆ ಒಪ್ಪಂದವಾಯಿತು. ಕೋಡಿಯಾಲ ಹೊಸಪೇಟೆ ಬಳಿ ಹೊಸ ನಲುವಾಗಲಿನಲ್ಲಿ 432  ಮನೆ ನಿರ್ಮಿಸಿ ಸ್ಥಳಾಂತರಕ್ಕೆ 34 ಎಕರೆ ಜಮೀನು ಗುರುತಿಸಲಾಯಿತು.

Tap to resize

Latest Videos

undefined

ಎ ಬಿ ಸಿ ಡಿ ಒಟ್ಟು ನಾಲ್ಕು ಹಂತಗಳಲ್ಲಿ ಸೈಟ್ ಹಂಚಿಕೆ ಮಾಡಿ ಸ್ಥಳಾಂತರಕ್ಕೆ ಸರ್ಕಾರ ಸೂಚಿಸಲಾಯಿತು. ಆರಂಭದಲ್ಲಿ  ಹರಿಹರ ಪಾಲಿ ಪೈಬರ್ ಕಾರ್ಖಾನೆಯಿಂದ 2.61 ಕೋಟಿ ಯನ್ನು ಸ್ಥಳಾಂತರಕ್ಕೆ ನೀಡಬೇಕೆಂದು ನಿರ್ಧಾರವಾಗಿತ್ತು.  ಅದು ವಿಳಂಭವಾದ ಕಾರಣ 2017 ರಲ್ಲಿ ಹೈಕೋರ್ಟ್ ಪುನರ್ವಸತಿಗೆ ಕಂಪನಿ  10 ಕೋಟಿ  ನೀಡಿ ಸ್ಥಳಾಂತರ ಮಾಡಬೇಕೆಂದು ಸೂಚಿಸಿತು. ಆದ್ರೆ ಯೋಜನೆ ಜಾರಿಗೆ ಸರ್ಕಾರ ಈ ವರೆಗು ಕ್ರಮ ಕೈಗೊಂಡಿಲ್ಲ. 

ಮುಸ್ಲಿಮರು‌ ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ Mandya ದಲ್ಲಿ ಅಭಿಯಾನ

ಹೊಸನೆಲವಾಗಿಲಿಗೆ ಗ್ರಾಮ ಸ್ಥಳಾಂತರವಾಗಬೇಕೆಂದು ರೇಣುಕಾ ಸೇರಿದಂತೆ 35 ನಿವಾಸಿಗಳು ಮತ್ತೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.  ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಅರ್ಜಿದಾರರು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಮನವಿ ಸಲ್ಲಿಸಿದ ದಿನದಿಂದ ಮೂರು ತಿಂಗಳ ಒಳಗೆ ಸರ್ಕಾರ ಅರ್ಜಿದಾರರ ಕುಂದುಕೊರೆತೆ  ಆಲಿಸಿ ಕಾನೂನು ಪ್ರಕಾರ ಪುರ್ನವಸತಿ ಕಲ್ಪಿಸಿ ಎಂದು ಎಂದು ಆದೇಶಿಸಿದೆ.  

ಪರಿಹಾರ ಕಾಣದ 47 ವರ್ಷಗಳ ಗ್ರಾಮ ಸ್ಥಳಾಂತರ ಸಮಸ್ಯೆ: ಹೈಕೋರ್ಟ್ ಆದೇಶಕ್ಕು ಕ್ಯಾರೆ ಎನ್ನದ ರಾಜ್ಯ ಸರ್ಕಾರ  ಇದುವರೆಗು ಯಾವುದೇ ಕ್ರಮ ಕೈಗೊಂಡಿಲ್ಲ. ಕೆಲವರು ಹೊಸ ನಲುವಾಗಿಲು ಗ್ರಾಮದಲ್ಲಿ ತಮ್ಮದೇ ಸ್ವಂತ ಖರ್ಚಿನಲ್ಲಿ ಹೊಸ ಮನೆ ಕಟ್ಟಿಸಿಕೊಂಡು ವಾಸ ಮಾಡುತ್ತಿದ್ದಾರೆ.  292 ಕುಟುಂಬಳಿಗೆ ಇದುವರೆಗು  ಸೂಕ್ತ ನಿವೇಶನ, ಪರಿಹಾರದ ಹಣ , ಮನೆ ನೀಡಿಯೇ ಇಲ್ಲ. 2017 ರಲ್ಲಿ 10 ಕೋಟಿ ಪುನರ್ವಸತಿ ಹಣ  ಯಾವುದಕ್ಕೂ ಸಾಲದಾಗಿದೆ. ನಲವಾಗಲು ಪುನರ್ವಸತಿ ಕೇಂದ್ರದಲ್ಲಿ 34 ಎಕರೆ ಜಮೀನಿದ್ದರು ಪಾರದರ್ಶಕ ಸೈಟ್  ಹಂಚಿಕೆಯಾಗಿಲ್ಲ ಎಂಬ ಅಪಸ್ವರವು ಸ್ಥಳೀಕರಿಗಿದೆ. 

Tamil Nadu ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5 ವೈದ್ಯಕೀಯ ಕೋಟಾ: ಮದ್ರಾಸ್ ಹೈಕೋರ್ಟ್

ಪ್ರಸ್ತುತ ಮಾರುಕಟ್ಟೆದರದಂತೆ ಪುನರ್ವಸತಿ ಕಲ್ಪಿಸಿ: ಈಗಿನ ಮಾರುಕಟ್ಟೆವೆಚ್ಚ ದ ಪ್ರಕಾರ ಪುನರ್ವಸತಿ ಕಲ್ಪಿಸಬೇಕೆಂದ್ರೆ 100 ಕೋಟಿಗೂ ಹೆಚ್ಚು ಹಣಬೇಕೆಂದು ಗ್ರಾಮಸ್ಥರು ಅಭಿಪ್ರಾಯಿಸಿದ್ದಾರೆ. ಸರ್ಕಾರ  ಪ್ರಸ್ತುತ ಮಾರುಕಟ್ಟೆ ದರದಂತೆ ಸರ್ಕಾರ ಸ್ಥಳಾಂತರ ಮಾಡಿದ್ರೆ ಮಾತ್ರ ಸಮಸ್ಯೆ ಪರಿಹಾರವಾಗುತ್ತದೆ. ಅದಕ್ಕಾಗಿ ಪುನರ್ವಸತಿ ಯೋಜನೆಯನ್ನು ಹೊಸದಾಗಿ ಅಂದಾಜಿಸುವ ಅವಶ್ಯಕತೆ ಇದೆ.  ಸಿ ಎಂ ಬಸವರಾಜ್ ಬೊಮ್ಮಾಯಿ ಸ್ಥಳೀಯ ಜಿಲ್ಲೆಯವರಾಗಿದ್ದು  ನಾಲ್ಕುವರೆ ದಶಕಗಳ ಸಮಸ್ಯೆಗೆ  ಪರಿಹಾರ ಸೂಚಿಸಿ  ನಲವಾಗಿಲು ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ಸೂಚಿಸಬೇಕೆಂದು ಮನವಿ ಮಾಡಿದ್ದಾರೆ. 

click me!