ರಟ್ಟೀಹಳ್ಳಿಯ ಹೊಳೆಸಾಲ ದುರ್ಗಾದೇವಿ ಹಾಗೂ ಮಾರಿಕಾಂಬಾ ದೇವಿಯ ಐತಿಹಾಸಿಕ ಜಾತ್ರಾ ಮಹೋತ್ಸವ 2020 ರ ಏ. 7ರಿಂದ ಪ್ರಾರಂಭವಾಗಲಿದೆ| ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವ| ವಾಡಿಕೆಯಂತೆ 2020ರ ಎಪ್ರಿಲ್ ತಿಂಗಳ ಮೊದಲ ವಾರ ಅಂದರೆ 04-04-2020 ರಂದು ವೀರಭದ್ರೇಶ್ವರ ಜಾತ್ರಾ ಮಹೋತ್ಸವ| ನಂತರ 07-04-2020ರ ಮಂಗಳವಾರದಂದು ದೇವಿಯರ ಎಡೆ ತುಂಬುವ ಕಾರ್ಯಕ್ರಮ| ನಂತರ 08-04-2020ರ ಬುಧವಾರ ಚರಗ ಚೆಲ್ಲುವ ಕಾರ್ಯಕ್ರಮ ನಿಗದಿಪಡಿಸಲಾಗಿದೆ|
ರಟ್ಟೀಹಳ್ಳಿ[ಅ.15]: ರಟ್ಟೀಹಳ್ಳಿಯ ಹೊಳೆಸಾಲ ದುರ್ಗಾದೇವಿ ಹಾಗೂ ಮಾರಿಕಾಂಬಾ ದೇವಿಯ ಐತಿಹಾಸಿಕ ಜಾತ್ರಾ ಮಹೋತ್ಸವ ಮುಂಬರುವ ವರ್ಷ ಏ. 7ರಿಂದ ಪ್ರಾರಂಭವಾಗಲಿದೆ ಎಂದು ಜಾತ್ರಾ ಮಹೋತ್ಸವದ ಮುಖಂಡ ಪಿ.ಡಿ. ಬಸನಗೌಡ್ರ ಹೇಳಿದ್ದಾರೆ.
ಶ್ರೀ ಮಾರಿಕಾಂಬಾ ಹಾಗೂ ದುರ್ಗಾದೇವಿ ಪಾದಗಟ್ಟೆಯ ಬಳಿ ಸೋಮವಾರ ಜರುಗಿದ ಪೂರ್ವಬಾವಿ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ವಾಡಿಕೆಯಂತೆ 2020ರ ಎಪ್ರಿಲ್ ತಿಂಗಳ ಮೊದಲ ವಾರ ಅಂದರೆ 04-04-2020 ರಂದು ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಂತರ 07-04-2020ರ ಮಂಗಳವಾರದಂದು ದೇವಿಯರ ಎಡೆ ತುಂಬುವ ಕಾರ್ಯಕ್ರಮ, ನಂತರ 08-04-2020ರ ಬುಧವಾರ ಚರಗ ಚೆಲ್ಲುವ ಕಾರ್ಯಕ್ರಮ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಗರಡಿ ಮನೆ ನಿರ್ಮಿಸಿ:
ಸಭೆಯಲ್ಲಿ ಊರಿನ ಪೈಲ್ವಾನರು ಊರಿನಲ್ಲಿ ಇದ್ದಂತಹ ವೀರಭದ್ರೇಶ್ವರ ದೇವಸ್ಥಾನದ ಬಳಿ ಇದ್ದ ಗರಡಿಮನೆ ಬಿದ್ದು ಹಾಳಾದ ಮೇಲೆ ಅದರ ಪುನರ್ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಕೇವಲ ಭರವಸೆಗಳಿಂದ ದಿನಗಳು ಸಾಗುತ್ತಿವೆ ಆದ್ದರಿಂದ ಈ ಜಾತ್ರೆಯ ಮೊದಲು ಗರಡಿಮನೆ ನಿರ್ಮಾಣಕ್ಕೆ ಸಿದ್ಧತೆ ನಡೆಸಬೇಕು ಎಂದು ಒಕ್ಕೊರಲನಿಂದ ಕೇಳಿದಾಗ ಉಪಸ್ಥಿತರಿದ್ದ ಮುಖಂಡರು ಗರಡಿಮನೆ ನಿರ್ಮಾಣಕ್ಕೆ ರಾಜೀವಗಾಂಧಿ ಸೇವಾ ಕೇಂದ್ರದ ಬಳಿ ಪಂಚಾಯತಿಯ ಜಾಗೆ ಇದ್ದು ಅದರ ನಿರ್ಮಾಣಕ್ಕೆ ಹೆಚ್ಚಿನ ಹಣ ಬೇಕಾಗಿರುವದರಿಂದ ಜಿಪಂ ಸದಸ್ಯರ ಅನುದಾನದ ಮೂಲಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವದಾಗಿ ಗ್ರಾಪಂ ಮಾಜಿ ಅಧ್ಯಕ್ಷ ಸುಬಾಸ್ ಹದಡೇರ ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ವೀರನಗೌಡ ಪ್ಯಾಟಿಗೌಡ್ರ, ಉಜನೆಪ್ಪ ಬಣಕಾರ, ರವಿಯಣ್ಣ ಹರವಿಶೆಟ್ಟರ್, ಮಾಜಿ ಅದ್ಯಕ್ಷ ಎಸ್.ಬಿ. ಪಾಟೀಲ, ಗ್ರಾಪಂ ಉಪಾದ್ಯಕ್ಷ ಗೋಪಾಲ ಮಡಿವಾಳರ, ಶಂಭಣ್ಣ ಗೂಳಪ್ಪನವರ, ವೀರಣ್ಣ ಕಟ್ಟೀಮನಿ, ಮದ್ದಣ್ಣ ಕುಲಕರ್ಣಿ, ಮಾರುತಿ ಜಾಧವ್, ರಾಜು ಪವಾರ, ಮಜಕ್ಕ ಹರಿಜನ, ಹನುಮಂತಪ್ಪ ನಾಯಕ, ಮರಡೆಪ್ಪ ಹೊಳಜೋಗಿ, ಸಂತೋಷ ಬಾಜಿರಾಯರ್, ಶಿವಕುಮಾರ ನಾಯಕ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.