ಹಾವೇರಿ: ಡಬ್ಬಾ ಐಡಿಯಾ ಕೊಟ್ಟು ಕ್ಷಮೆ ಕೋರಿದ ಭಗತ್‌ ಕಾಲೇಜು

By Web DeskFirst Published Oct 20, 2019, 8:34 AM IST
Highlights

ಪರೀಕ್ಷಾ ನಕಲು ತಡೆಯಲು ಕಾಲೇಜು ವಿದ್ಯಾರ್ಥಿಗಳ ತಲೆಗೆ ರಟ್ಟಿನ ಡಬ್ಬಾ ಹಾಕಿದ ಪ್ರಕರಣ| ಭಗತ್‌ ಪಿಯು ಕಾಲೇಜಿನ ಆಡಳಿತ ಮಂಡಳಿ ಕ್ಷಮೆ| ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಪಿಯು ಉಪನಿರ್ದೇಶಕರಿಗೆ ತಪ್ಪೊಪ್ಪಿಗೆ ಪತ್ರ| ಪರೀಕ್ಷೆ ವೇಳೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಮುಖಕ್ಕೆ ರಟ್ಟಿನ ಬಾಕ್ಸ್‌ ಅಳವಡಿಸಿದ್ದು ತಪ್ಪು ಎಂಬ ಅರಿವಾಗಿದೆ| ಈ ರೀತಿ ನಿಯಮ ಬಾಹಿರ ರೀತಿಯಲ್ಲಿ ಪರೀಕ್ಷೆ ಬರೆಸಿದ್ದಕ್ಕೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ತಪ್ಪೊಪ್ಪಿಗೆ ಪತ್ರ ಬರೆದು ಕ್ಷಮೆ|

ಹಾವೇರಿ(ಅ.20): ಪರೀಕ್ಷಾ ನಕಲು ತಡೆಯಲು ಕಾಲೇಜು ವಿದ್ಯಾರ್ಥಿಗಳ ತಲೆಗೆ ರಟ್ಟಿನ ಡಬ್ಬಾ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಭಗತ್‌ ಪಿಯು ಕಾಲೇಜಿನ ಆಡಳಿತ ಮಂಡಳಿ ಕ್ಷಮೆ ಯಾಚಿಸಿದೆ. ಕಾಲೇಜಿನ ಆಡಳಿತಾಧಿಕಾರಿ ಎಂ.ಬಿ. ಸತೀಶ ಶನಿವಾರ ಈ ಕುರಿತು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಪಿಯು ಉಪನಿರ್ದೇಶಕರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅ. 16 ರಿಂದ ಜಿಲ್ಲೆಯಲ್ಲಿ ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆ ಆರಂಭವಾಗಿದೆ. ಅಂದು ರಸಾಯನಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿಷಯದ ಪರೀಕ್ಷೆ ವೇಳೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಮುಖಕ್ಕೆ ರಟ್ಟಿನ ಬಾಕ್ಸ್‌ ಅಳವಡಿಸಿದ್ದು ತಪ್ಪು ಎಂಬ ಅರಿವಾಗಿದೆ. ಈ ರೀತಿ ನಿಯಮ ಬಾಹಿರ ರೀತಿಯಲ್ಲಿ ಪರೀಕ್ಷೆ ಬರೆಸಿದ್ದಕ್ಕೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ತಪ್ಪೊಪ್ಪಿಗೆ ಪತ್ರ ಬರೆದು ಕ್ಷಮೆ ಕೇಳುತ್ತಿದ್ದೇನೆ. ನಮ್ಮ ಕಾಲೇಜಿನ ಮಾನ್ಯತೆಯನ್ನು ರದ್ದು ಮಾಡುವ ಪ್ರಸ್ತಾವನೆಯ ಕಾರಣ ಇನ್ಮುಂದೆ ಈ ರೀತಿ ಯಾವುದೇ ಕಾರಣಕ್ಕೂ ಹೀಗಾಗದಂತೆ ಮುನ್ನೆಚ್ಚರಿಕೆ ವಹಿಸುತ್ತೇನೆ. ನಿಯಮಾನುಸಾರವಾಗಿಯೇ ಪರೀಕ್ಷೆ ನಡೆಸುತ್ತೇವೆ. ನನ್ನಿಂದಾದ ಘೋರ ತಪ್ಪಿಗೆ ಎಲ್ಲರ ಕ್ಷಮೆ ಕೋರುತ್ತೇನೆ ಎಂದು ಆಡಳಿತಾಧಿಕಾರಿ ಸತೀಶ ಪತ್ರ ನೀಡಿದ್ದಾರೆ.

ಮಕ್ಕಳ ತಲೆಗೆ ಡಬ್ಬಾ ಹಾಕಿ ಪರೀಕ್ಷೆ, ವಿಚಿತ್ರ ಐಡಿಯಾಗೆ ಡಿಡಿಪಿಐ ಗರಂ

ಆಡಳಿತಾಧಿಕಾರಿ ತರಾಟೆ:

ವಿದ್ಯಾರ್ಥಿಗಳ ತಲೆಗೆ ರಟ್ಟಿನ ಪೆಟ್ಟಿಗೆ ಹಾಕಿಸಿ ಪರೀಕ್ಷೆ ಬರೆಸಿದ ಘಟನೆ ವ್ಯಾಪಕ ಚರ್ಚೆಗೆ ಕಾರಣವಾದ ಹಿನ್ನೆಲೆಯಲ್ಲಿ ಭಗತ್‌ ಕಾಲೇಜಿನ ಆಡಳಿತಾಧಿಕಾರಿಯನ್ನು ಜಿಲ್ಲಾಧಿಕಾರಿ ಕರೆದು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ.
ನಿಮಗೆ ತೋಚಿದಂತೆ ಪರೀಕ್ಷೆ ಬರೆಸಲು ಯಾವುದೇ ಅಧಿಕಾರವಿಲ್ಲ. ಇದು ಅಮಾನವೀಯವಾಗಿದ್ದು, ವಿದ್ಯಾರ್ಥಿಗಳ ಮಾನಸಿಕ ಸ್ಥೈರ್ಯವನ್ನು ಕುಂದಿಸುವ ರೀತಿಯಲ್ಲಿ ನಡೆದುಕೊಂಡಿದ್ದೀರಿ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಕಾಲೇಜಿನ ಮಾನ್ಯತೆ ರದ್ಧತಿಗೆ ಶಿಫಾರಸು ಮಾಡುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ಪಿಯು ಉಪನಿರ್ದೇಶಕ ಎಸ್‌.ಸಿ. ಪೀರಜಾದೆ ತಿಳಿಸಿದ್ದಾರೆ.
 

click me!