ಮಂಡ್ಯ ಜನರು ಸುಮಲತಾಗೆ ಮತ ನೀಡಿ ಪರಿತಪಿಸುತ್ತಿದ್ದಾರೆ. ರೈತರ ಸಂಕಷ್ಟಕ್ಕೆ ಸಂಸದರು ಸ್ಪಂದಿಸುತ್ತಿಲ್ಲ ಎಂದು ಎಂಎಲ್‌ಸಿ ಶ್ರೀಕಂಠೇಗೌಡ ವಾಗ್ದಾಳಿ ನಡೆಸಿದ್ದಾರೆ.
ಹಾಸನ [ಅ.28]: ರಾಜ್ಯದಲ್ಲಿ ಸರ್ಕಾರ ಅಸ್ತಿರವಾಗಬಾರದು ಎನ್ನುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರ ಬೀಳಿಸಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಎಂಎಲ್ ಸಿ ಶ್ರೀಕಂಠೇಗೌಡ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಹಾಗೂ ಎಂಎಲ್ ಸಿ ಶ್ರೀ ಕಂಠೇಗೌಡ ಪ್ರತೀ ವರ್ಷದಂತೆ ಹಾಸನಾಂಬೆ ದರ್ಶನ ಪಡೆದು, ಆಶೀರ್ವಾದ ಪಡೆದಿದ್ದಾನೆ ಎಂದರು.
undefined
ಇನ್ನು ಅನರ್ಹ ಶಾಸಕರ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ ಅವರು ಸದ್ಯ ಸುಪ್ರೀಂ ಕೊರ್ಟಲ್ಲಿದ್ದು, ನವೆಂಬರ್ 5 ರಂದು ಈ ಸಂಬಂಧ ತೀರ್ಪು ಹೊರಬರಲಿದೆ. ತೀರ್ಪು ಹೊರ ಬಂದ ನಂತರ ಮುಂದಿನ ವಿಚಾರಗಳ ಬಗ್ಗೆ ತೀರ್ಮಾನ ಮಾಡುತ್ತೇವೆ. ಉಪ ಚುನಾವಣೆಯಲ್ಲಿ ನಮ್ಮ ಪಕ್ಷ ಅತ್ಯಂತ ಹೆಚ್ಚು ಸ್ಥಾನಗಳನ್ನು ಪಡೆದು ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಲ್ಲದೇ ಸುಮಲತಾ ವಿರುದ್ಧವೂ ಅಸಮಾಧಾನ ಹೊರಹಾಕಿದ ಶ್ರೀಕಂಠೇಗೌಡ, ಮಂಡ್ಯದ ಜನ ಮತ ನೀಡಿ ಪರಿತಪಿಸುತ್ತಿದ್ದಾರೆ. 15 ತಿಂಗಳು ಕಳೆದರೂ ರೈತರು ಕಬ್ಬು ಮುರಿದಿಲ್ಲ. ಲೋಕಸಭಾ ಸದಸ್ಯರಾಗಿ ಸುಮಲತಾ ರೈತರ ಸಂಕಷ್ಟಕ್ಕೆ ನೆರವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.