
ಹಾಸನ [ಅ.28]: ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನಕ್ಕೆ ಇಂದು ಕಡೆ ದಿನವಾಗಿದ್ದು ಈ ನಿಟ್ಟಿನಲ್ಲಿ ಇಡೀ ದಿನ ದೇವಿ ದರ್ಶನ ನೀಡಲಿದ್ದಾರೆ.
ಮಂಗಳವಾರ ಮಧ್ಯಾಹ್ನ 12.30ಕ್ಕೆ ದೇವಸ್ಥಾನದ ಬಾಗಿಲು ಬಂದ್ ಆಗಲಿದ್ದು, ಅಲ್ಲಿಯವರೆಗೂ ಕೂಡ ಶಾಸ್ತ್ರೋಕ್ತವಾಗಿ ಪೂಜಾ ಕಾರ್ಯಗಳು ನೆರವೇರಲಿವೆ.
ಇಂದೇ ದರ್ಶನಕ್ಕೆ ಕಡೆಯ ದಿನವಾದ ಕಾರಣ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅ.17ರಂದು ಹಾಸನಾಂಬ ದೇವಿಯ ದರ್ಶನ ಆರಂಭವಾಗಿದ್ದು, ಒಟ್ಟು 13 ದಿನಗಳ ಕಾಲ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇನ್ನು ಮಂಗಳವಾರ ದೇವಾಲಯದ ಬಾಗಿಲು ಮುಚ್ಚಿದರೆ ಮುಂದಿನ ವರ್ಷವೇ ಇನ್ನು ದೇವಾಲಯದ ಬಾಗಿಲು ತೆರೆಯಲಾಗುತ್ತದೆ.