‘ಬಿಜೆಪಿ-ಜೆಡಿಎಸ್ ಮೈತ್ರಿ : ದೊಡ್ಡವರ ವಿಚಾರ’

By Web DeskFirst Published Oct 28, 2019, 1:10 PM IST
Highlights

ಡಿಕೆ ಶಿವಕುಮಾರ್ ಸ್ವಾಗತದ ವೇಳೆ ಜೆಡಿಎಸ್ ಬಾವುಟ ಹಿಡಿದ ವಿಚಾರ ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, 

ಹಾಸನ [ಅ.28] : ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಕುಟುಂಬ ಹಾಸನಕ್ಕೆ ತೆರಳಿ ಅಧಿದೇವತೆ ಹಾಸನಾಂಬ ದೇವಿ ದರ್ಶನ ಪಡೆದಿದ್ದಾರೆ. 

ದೇವಿ ದರ್ಶನ ಪಡೆದ ಬಳಿಕ ಮಾತನಾಡಿದ ಮಾಜಿ ಸಚಿವ ಪುಟ್ಟರಾಜು ಡಿ.ಕೆ.ಶಿವಕುಮಾರ್ ಸ್ವಾಗತದ ವೇಳೆ ಜೆಡಿಎಸ್ ಬಾವುಟ ಹಿಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು.

ಹಿಂದೆ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದೆವು. ಆ ಅಭಿಮಾನ ಈಗಲೂ ಇದ್ದು ಈ ನಿಟ್ಟಿನಲ್ಲಿ ಬಾವುಟ ಹಿಡಿದಿರಬಹುದು.  ಇದಕ್ಕೆ ಮೊಸರಲ್ಲಿ ಕಲ್ಲು ಹುಡುಕುವುದು ಬೇಡ ಎಂದು ಮಾಜಿ ಸಚಿವ ಹಾಗೂ ಮೇಲುಕೋಟೆ ಜೆಡಿಎಸ್ ಶಾಸಕ ಪುಟ್ಟರಾಜು ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಮಂಡ್ಯದ ಕೆ.ಆರ್.ಪೇಟೆ ಕ್ಷೇತ್ರಕ್ಕೆ ಶೀಘ್ರವೇ ಉಪ ಚುನಾವಣೆ ನಡೆಯಲಿದ್ದು, ಇದು ಜೆಡಿಎಸ್ ಭದ್ರಕೋಟೆ. ಇಲ್ಲಿ ಯಾರೇ ಅಭ್ಯರ್ಥಿಯಾದರೂ ಕೂಡ ಜೆಡಿಎಸ್ ಗೆಲುವು ಖಚಿತ  ಎಂದು ಭವಿಷ್ಯ ನುಡಿದಿದ್ದಾರೆ. 

HDKಗೆ ಇಬ್ಬರ ಜತೆಗೂ ಅನುಭವ ಇದೆ: ಶೋಭಾ ಕರಂದ್ಲಾಜೆ...

ದೊಡ್ಡವರ ನಿರ್ಧಾರ : ಇನ್ನು ಬಿಜೆಪಿ ಸರ್ಕಾರ ಭವಿಷ್ಯ ನನ್ನ ಕೈಯಲ್ಲಿದೆ, ಬಿಜೆಪಿ ಸರ್ಕಾರ ಬೀಳಿಸಲು ಬಿಡುವುದಿಲ್ಲ ಎನ್ನುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೂ ಪ್ರತಿಕ್ರಿಯಿಸಿದ ಪುಟ್ಟರಾಜು, ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಇದ್ದರೆ ನೆರೆ ಸಂತ್ರಸ್ತರಿಗೆ ಪರಿಗಾರ ಸಗಿಲಿದೆ ಎನ್ನುವ ಕಾರಣದಿಂದ ಹೀಗೆ ಹೇಳಿದ್ದಾರೆ ಎಂದರು. 

ಇನ್ನು ಈ ಹೇಳಿಕೆ ಹಿಂದೆ ಮೈತ್ರಿ ಪ್ರಸ್ತಾಪ ಇರಬಹುದೇ ಎನ್ನುವ ವಿಚಾರಕ್ಕೂ ಉತ್ತರಿಸಿರುವ ಜೆಡಿಎಸ್ ಮುಖಂಡ ಪುಟ್ಟರಾಜು ಮೈತ್ರಿಯ ಬಗ್ಗೆ ದೊಡ್ಡವರು ನಿರ್ಧಾರ ಮಾಡುತ್ತಾರೆ ಎಂದರು. 

click me!