ಎಚ್.ಡಿ.ಕುಮಾರಸ್ವಾಮಿ ಹೇಳಿದ್ದು ಹಾಗಲ್ಲ..! : ಎಚ್ .ಡಿ.ರೇವಣ್ಣ

Published : Nov 01, 2019, 11:46 AM ISTUpdated : Nov 01, 2019, 12:22 PM IST
ಎಚ್.ಡಿ.ಕುಮಾರಸ್ವಾಮಿ ಹೇಳಿದ್ದು ಹಾಗಲ್ಲ..! : ಎಚ್ .ಡಿ.ರೇವಣ್ಣ

ಸಾರಾಂಶ

ಮಾಜಿ ಸಚಿವ ಎಚ್ ಡಿ ರೇವಣ್ಣ ಕರ್ನಾಟಕ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ನಾವು ಸರ್ಕಾರಕ್ಕೆ ಎಂದಿಗೂ ತೊಂದರೆ ಕೊಡುವುದಿಲ್ಲ. ಅದಾಗೆ ಪತನವಾದರೆ ಏನು ಮಾಡಲಾಗದು ಎಂದರು. 

ಹಾಸನ [ನ.01] : ಮಾಜಿ ಸಿಎಂ ಕುಮಾರಸ್ವಾಮಿ 12 ಜಿಲ್ಲೆಗಳಲ್ಲಿ ನೆರೆಯಿಂದ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. 47 ತಾಲೂಕುಗಳಲ್ಲಿ ಬರ ಇದೆ. ಇವರ ಸಂಕಷ್ಟಕ್ಕೆ ಸ್ಪಂದಿಸುವುದು ಸರ್ಕಾರ ಬೀಳಿಸುವುದಕ್ಕಿಂತ ಮುಖ್ಯ. ನೆರೆ ಸಂತ್ರಸ್ತರ ಹಿತದೃಷ್ಟಿಯಿಂದ ಬಿಜೆಪಿ ಸರ್ಕಾರ ಮುಂದುವರಿಯಲಿ ಎಂದು ಹೇಳಿದ್ದಾರೆ ಹೊರತು ಬೇರೇನು ಹೇಳಿಲ್ಲ ಎಂದು ಸಹೋದರನ ಹೇಳಿಕೆಯನ್ನು ರೇವಣ್ಣ ಸಮರ್ಥಿಸಿಕೊಂಡರು.

ತುಮಕೂರು, ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಸೋಲಿಸಿದ್ದು ಯಾರು ಎಂಬುದು ಜನರಿಗೆ ಗೊತ್ತಿದೆ. ಬಿಜೆಪಿ ಸರ್ಕಾರಕ್ಕೆ ತೊಂದರೆ ಕೊಡುವುದಿಲ್ಲ. ಆದರೆ, ತಾನಾಗೇ ಪತನಗೊಂಡರೆ ಏನೂ ಮಾಡಲಾಗುವುದಿಲ್ಲ.

ಕಳೆದ ವಿಧಾನಸಭೆ ಚುನಾವಣೆ ವೇಳೆ ಕೋಮುವಾದಿ ಪಕ್ಷಗಳ ವಿರುದ್ಧ ಜೆಡಿಎಸ್‌ ಹೋರಾಟ ಮಾಡುತ್ತಿದ್ದರೂ ಕಾಂಗ್ರೆಸ್‌ನವರು ಜೆಡಿಎಸ್‌ನ್ನು ಬಿ ಟೀಂ ಎಂದು ಕರೆದರು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಂದಲೂ ಜೆಡಿಎಸ್‌ನ್ನು ಬಿ ಟೀಂ ಎಂದು ಟೀಕಿಸುವಂತೆ ಹೇಳಿ ಕೊಡಲಾಯಿತು. ಆದರೂ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷವನ್ನು ನಾಡಿನ ಜನತೆ ತಿರಸ್ಕರಿಸಿ ಅತಂತ್ರ ವಿಧಾನಸಭೆ ನಿರ್ಮಾಣವಾಯಿತು. ಅಂತಹ ಸಂದರ್ಭದಲ್ಲಿ ಕಾಂಗ್ರೆಸ್‌ನವರೇ ಬಿ ಟೀಂ ತಬ್ಬಿಕೊಳ್ಳುವಂತಹ ಪರಿಸ್ಥಿತಿ ಬಂದಿತು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗೌಡರ ಕುಟುಂಬ ಸರ್ಕಾರವನ್ನು ತೆಗೆಯುವುದರಲ್ಲಿ ನಿಸ್ಸೀಮರು ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ. ದೇವೇಗೌಡರ ನೇತೃತ್ವದಲ್ಲಿ ರಾಜ್ಯದ ಎಷ್ಟುನಾಯಕರು ಬೆಳೆದಿದ್ದಾರೆ ಎಂಬುದು ನಾಡಿನ ಜನರಿಗೆ ಗೊತ್ತಿದೆ. ಜೆಡಿಎಸ್‌ ರಾಜಕೀಯ ನಾಯಕರನ್ನು ತಯಾರಿಸುವ ಕಾರ್ಖಾನೆ ಇದ್ದಂತೆ ಸಾಕಷ್ಟುನಾಯಕರು ಗೌಡರ ಗರಡಿಯಲ್ಲಿ ರಾಜಕೀಯವಾಗಿ ಬೆಳೆದಿದ್ದಾರೆ ಎಂದರು.

PREV
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ