‘ಪುಟ್ಟಣ್ಣ ಜೈಲಿನಲ್ಲಿ ಚಡ್ಡಿ ಹಾಕೊಂಡು ನಿಂತಿದ್ದರು’

By Kannadaprabha NewsFirst Published Nov 1, 2019, 9:00 AM IST
Highlights

ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ, ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ವಿರುದ್ಧ ಅಸಮಾಧಾನ ಹೊರಹಾಕಿದರು. ಅವರು ಪಕ್ಷ ತೊರೆದರೆ ನಮಗೇನು ಶಾಕ್ ಆಗಲ್ಲ ಎಂದರು. 

ಹಾಸನ [ನ.01]: ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಪಕ್ಷ ತೊರೆದರೆ ನಮಗೇನೂ ಶಾಕ್‌ ಆಗೊಲ್ಲ ಎಂದು ಹೇಳಿರುವ ಮಾಜಿ ಸಚಿವ ಎಚ್‌.ಡಿ. ರೇವಣ್ಣ, ಜೈಲಲ್ಲಿ ಚಡ್ಡಿ ಹಾಕಿಕೊಂಡು ನಿಂತಿದ್ದ ವ್ಯಕ್ತಿಯನ್ನು ಎಂಎಲ್ಸಿ ಮಾಡಿ, ಉಪಸಭಾಪತಿ ಮಾಡಲಾಗಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈಲಲ್ಲಿ ಇದ್ದವನಿಗೆ ಮಾಜಿ ಪ್ರಧಾನಿ ದೇವೇಗೌಡರು ರಾಜಕೀಯ ಭವಿಷ್ಯ ನೀಡಿದರು. 

ಪುಟ್ಟಣ್ಣ ಅವರಿಂದ ಜೆಡಿಎಸ್‌ಗೆ ಏನೂ ಆಗಬೇಕಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು. ಅವರು ಗೌರವ ಇದ್ದರೇ, ನೈತಿಕತೆ ಇದೆ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದ ಆಗ್ರಹಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇವೇಳೆ ವಿಧಾನ ಪರಿಷತ್‌ ಸದಸ್ಯರಾದ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಜೆಡಿಎಸ್‌ ಪಕ್ಷದ ಆಸ್ತಿಯಾಗಿದ್ದು, ಸಣ್ಣಪುಟ್ಟ ಸಮಸ್ಯೆ ಇದ್ದರೆ ಅವರ ಜೊತೆಗೆ ಕುಳಿತು ಬಗೆ ಹರಿಸಿಕೊಳ್ಳುತ್ತೇವೆ ಎಂದು ಎಚ್.ಡಿ ರೇವಣ್ಣ ಹೇಳಿದರು.

ಜೆಡಿಎಸ್ ಶಾಸಕರ ಒಗ್ಗೂಡಿಸು ಯತ್ನ ಠುಸ್
"

click me!