ಹಾಸನಾಂಬೆಯ ಹುಂಡಿ ಹಣ ಎಣಿಕೆ ಮಾಡಲಾಗಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ 50 ಸಾವಿರ ರೂಪಾಯಿ ಕಾಣಿಕೆ ಹಣದಲ್ಲಿ ಏರಿಕೆಯಾಗಿದೆ. ಈ ಮೂಲಕ ಹಾಸನಾಂಬೆ A ಗ್ರೇಡ್ ಕಾಯ್ದುಕೊಂಡಿದ್ದಾಳೆ. ಹಾಗಾದ್ರೆ ಈ ವರ್ಷ ದೇವಿ ಹುಂಡಿಗೆ ಬಂದ ಹಣವೆಷ್ಟು..? ಕಳೆದ ವರ್ಷ ಕಾಣಿಕೆ ಎಷ್ಟು ಬಂದಿತ್ತು..? ಎನ್ನುವುದನ್ನು ತಿಳಿಯಲು ಮುಂದೆ ಓದಿ....
ಹಾಸನ, [ಅ.30]: ಹಾಸನದ ಅಧಿದೇವತೆ ಹಾಸನಾಂಬೆಯ ಹುಂಡಿ ಹಣವನ್ನು ಇಂದು [ಬುಧವಾರ] ಎಣಿಕೆ ಮಾಡಲಾಗಿದ್ದು, 13 ದಿನಗಳಲ್ಲಿ ಹಾಸನಾಂಬ ದೇವಿಯ ದರ್ಶನೋತ್ಸವದ ಸಂದರ್ಭದಲ್ಲಿ ಒಟ್ಟಾರೆ 3,06,41,011 ರೂ. [3.6 ಕೋಟಿ] ಹಣ ಸಂಗ್ರಹವಾಗಿದೆ.
'ಗಂಡ ನಾ ಹೇಳಿದಂತೆ ಕೇಳೋ ಹಾಗೆ ಮಾಡು', ಹಾಸನಾಂಬೆಗೆ ಭಕ್ತೆಯ ಪತ್ರ
ಈ ವರ್ಷ ಅಕ್ಟೋಬರ್ 13ರಂದು ಹಾಸನಾಂಬೆ ದೇವಾಲಯದ ಬಾಗಿಲು ಓಪನ್ ಮಾಡಿ 13 ದಿನಗಳ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಈ 13 ದಿನಗಳಲ್ಲಿ ಬರೋಬ್ಬರಿ 3 ಕೋಟಿ 6 ಲಕ್ಷ ರೂಪಾಯಿ ಹುಂಡಿ ಹಣ ಸಂಗ್ರಹವಾಗಿದೆ.
ಕಳೆದ ವರ್ಷ 2018ರಲ್ಲಿ 2.64 ಕೋಟಿ ಸಂಗ್ರಹವಾಗಿತ್ತು, ಕಳೆದ ವರ್ಷಕ್ಕಿಂತ ಈ ಬಾರಿ 50 ಸಾವಿರ ರೂ.ಏರಿಕೆಯಾಗಿದೆ. ಈ ಮೂಲಕ ಹಾಸನಾಂಬೆ A ಗ್ರೇಡ್ ಸ್ಥಾನ ಕಾಯ್ದುಕೊಂಡಿದೆ.
ಹಾಸನಾಂಬಾ ದೇವಾಲಯ ದರ್ಶನಕ್ಕೆ ತೆರೆ, 3 ಲಕ್ಷ ಭಕ್ತರ ಭೇಟಿ
ಯಾವುದರಿಂದ ಎಷ್ಟೇಷ್ಟು..?
ಹಾಸನಾಂಬ ದೇವಿಯ ದರ್ಶನೋತ್ಸವದ ಸಂದರ್ಭದಲ್ಲಿ ಒಟ್ಟಾರೆ 3,06,41,011 ರೂ. ಹಣ ಸಂಗ್ರಹವಾಗಿದೆ. ವಿವಿಧ ರೀತಿಯ ಟಿಕೇಟ್‍ಗಳು, ಲಾಡು ಮತ್ತಿತರ ಮಾರಾಟದಿಂದ 1,75,16,587 ರೂಪಾಯಿ ಸಂಗ್ರಹವಾದರೆ ಹಾಸನಾಂಬ ದೇವಾಲಯದ ಹುಂಡಿಯಲ್ಲಿ 1,31,24,424 ರೂ ಹಣ ಸಂಗ್ರವಾಗಿದೆ.
ಹಾಸನಾಂಬ ದೇವರ ದರ್ಶನದ 300 ರೂಪಾಯಿ ಟಿಕೇಟ್‍ಗಳ ಮಾರಾಟದಿಂದ 72,28,004 ರೂಪಾಯಿ ಹಾಗೂ 1000 ರೂ. ಟಿಕೇಟ್ ಮಾರಾಟದಿಂದ 76,16,000 ರೂಪಾಯಿ ಸಂಗ್ರಹವಾಗಿದೆ.
ಲಾಡು ಮಾರಾಟದಿಂದ 25,46,840 ರೂಪಾಯಿ ಸಂಗ್ರಹವಾದರೆ ದೇಣಿಗೆ ರೂಪದಲ್ಲಿ 32,011 ರೂಪಾಯಿ ಹಣ ಬಂದಿದೆ. ಅದೇ ರೀತಿ ಸೀರೆ ಮಾರಾಟದಿಂದ 93,732 ರೂಪಾಯಿ ಸಂಗ್ರಹವಾಗಿದೆ.
ಇದಲ್ಲದೇ ಸಿದ್ದೇಶ್ವರ ದೇವಾಲಯದ ಹುಂಡಿಯಲ್ಲಿ 12,18,329 ರೂ ಸಂಗ್ರಹವಾಗಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಡಾ|| ಹೆಚ್.ಎಲ್. ನಾಗರಾಜ್ ಅವರು ತಿಳಿಸಿದ್ದಾರೆ.
2.8 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿ ದರ್ಶನ
ಹೌದು...ಕೇವಲ 13 ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ಹಾಸನಾಂಬೆಯ ದರ್ಶನ ಪಡೆದುಕೊಂಡಿದ್ದಾರೆ. ಎಚ್.ಡಿ ದೇವೇಗೌಡ ಕುಟುಂಬ, ಸಂಸದೆ ಶೋಭಾ ಕರಂದ್ಲಾಜೆ, ಸಚಿವರಾದ ಸಿ.ಟಿ.ರವಿ, ಮಾಧುಸ್ವಾಮಿ ಸೇರಿದಂತೆ ಅನೇಕ ರಾಜಕೀಯ ನಾಯಕರು ಹಾಗೂ ವಿವಿಧ ಕ್ಷೇತ್ರದ ಕಲಾವಿದರು ಸೇರಿದಂತೆ ಹಲವರು ಹಾಸನಾಂಬೆ ದರ್ಶನ ಪಡೆದು ಪುನೀತರಾಗಿದ್ದಾರೆ. ಅಂಕಿ ಅಂಶಗಳ ಪ್ರಕಾರ 2.8 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ದರ್ಶನ ಪಡೆದಿದಿದ್ದಾರೆ ಎಂದು ಅಂದಾಜಿಸಲಾಗಿದೆ.
ಹಾಸನಾಂಬೆ ಉತ್ಸವದ ಆರಂಭದ ದಿನಗಳಲ್ಲಿ ಭಕ್ತರ ಸಂಖ್ಯೆಯಲ್ಲಿ ಇಳಿಮುಖ ಕಂಡಿತ್ತಾದರೂ ಬಳಿಕ ವೀಕೆಂಡ್, ರಜೆ ದಿನಗಳಲ್ಲಿ ದೇವಿಯ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿತ್ತು.
ಮುಂದಿನ ವರ್ಷ ದರ್ಶನ
ದೇವಿಗೆ ವಿಶಿಷ್ಟ ಮನವಿ ಪತ್ರಗಳು
ಹುಂಡಿ ಎಣಿಕೆ ವೇಳೆ ಭಕ್ತರಿಂದ ವಿಶಿಷ್ಟ ಮನವಿ ಪತ್ರಗಳು ಬಂದಿದೆ. ಅಷ್ಟೇ ಅಲ್ಲದೇ ಭಕ್ತರು ಪತ್ರದ ಮೂಲಕ ದೇವಿ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ.