ಖುಲ್ಲಂ, ಖುಲ್ಲಾ...! ಮಾಲ್‌ಲ್ಲಿ ಹಸ್ತಮೈಥುನ ಮಾಡ್ಕೊಂಡ ಯುವತಿ, ವಿಡಿಯೋ ವೈರಲ್!

First Published | May 12, 2020, 1:28 PM IST

ಚೀನಾ ಸದ್ಯ ಕೊರೋನಾ ವೈರಸ್‌ನಿಂದಾಗಿ ವಿಶ್ವದ ಅನೇಕ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ. ಅನೇಕ ದೇಶಗಳು ಚೀನಾ ಬೇಕೆಂದೇ ಕೊರೋನಾ ಹಬ್ಬಿಸಿದೆ ಎಂಬ ಆರೋಪ ಮಾಡಿವೆ. ಜೊತೆಗೆ ಅನೇಕ ರಾಷ್ಟ್ರಗಳು  ಚೀನಾದಲ್ಲಿರುವ ತಮ್ಮ ಕಂಪನಿಗಳನ್ನು ಬೇರೆಡೆ ಸ್ಥಳಾಂತರ ಮಾಡುವ ನಿರ್ಧಾರಕ್ಕೂ ಬಂದಿವೆ. ಇವೆಲ್ಲದರ ನಡುವೆ ಚೀನಾದ ಸೋಶಿಯಲ್ ನೆಟ್ವರ್ಕಿಂಗ್ ಸೈಟ್ ವೀಬೋದಲ್ಲಿ ತಲೆತಗ್ಗಿಸುವ ವಿಡಿಯೋ ಒಂದು ಬೆಳಕಿಗೆ ಬಂದಿದೆ. ಈ ವಿಡಿಯೋವನ್ನು ಚೀನಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವೀಡನ್‌ ಮೂಲದ IKEAದ ಸ್ಟೋರ್‌ ಒಂದರಲ್ಲಿ ರೆಕಾರ್ಡ್ ಮಾಡಲಾಗಿದೆ. ಇದರಲ್ಲಿ ಯುವತಿಯೊಬ್ಬಳು ಸಾರ್ವಜನಿಕವಾಗೇ ಸ್ಟೋರ್‌ನಲ್ಲಿ ಹಸ್ತಮೈಥುನ ಮಾಡಿಕೊಳ್ಳುವ ದೃಶ್ಯಗಳಿವೆ. ಇದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ IKEA ಕೆಲ ಬದಲಾವಣೆಗಳನ್ನೂ ತಂದಿದೆ.

IKEAದ ಸ್ಟೋರ್‌ ಒಂದರಲ್ಲಿ ಚಿತ್ರೀಕರಿಸಿರುವ ಈ ವಿಡಿಯೋದಲ್ಲಿ, ಸೋಫಾ ಹಾಗೂ ಬೆಡ್‌ ಮೇಲೆ ಯುವತಿಯೊಬ್ಬಳು ಅರೆನಗ್ನಳಾಗಿ ಕುಳಿತುಕೊಂಡಿದ್ದಾಳೆ. ಇನ್ನು ಈ ಘಟನೆ ಹಾಡ ಹಗಲೇ ನಡೆದಿದೆ ಎನ್ನಲಾಗಿದೆ.
ಸೋಫಾದ ಮೇಲೆ ಕುಳಿತುಕೊಂಡ ಯುವತಿ ನೋಡ ನೋಡುತ್ತಿದ್ದಂತೆಯೇ ಹಸ್ತಮೈಥುನ ಮಾಡಿಕೊಳ್ಳಲಾರಂಭಿಸಿದ್ದಾಳೆ. ಹೀಗಿರುವಾಗ ಬೇರೊಬ್ಬ ವ್ಯಕ್ತಿ ಇದನ್ನೆಲ್ಲಾ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ.
Tap to resize

ವಿಡಿಯೋದಲ್ಲಿ ಹಿಂಬದಿಯಲ್ಲಿ ಕೆಲ ಜನರು ಶಾಪಿಂಗ್ ಕೂಡಾ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಜನ ಸಂದಣಿ ನಡುವೆಯೇ ಈ ಯುವತಿ ಹೀಗೆ ವರ್ತಿಸಿದ್ದಾಳೆ.
ಸದ್ಯ ಯುವತಿಯ ಈ ನಡೆಯಿಂದ ಜನರು ಆಕ್ರೋಶಗೊಂಡಿದ್ದು, ಇದು ಖುದ್ದು IKEA ತನ್ನ ಪಬ್ಲಿಸಿಟಿಗಾಗಿ ಮಾಡಿಕೊಂಡ ಚೀಪ್ ಟ್ಯಾಕ್ಟಿಕ್ ಎಂದಿದ್ದಾರೆ.
ಸೆನ್ಸಾರ್‌ ಮಾಡದಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ಈವರೆಗೆ ಒಟ್ಟು 90 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಇನ್ನು ಈ ವಿಡಿಯೋ ಬಹಿರಂಗಗೊಂಡ ಬೆನ್ನಲ್ಲೇ IKEA ತನ್ನ ಸ್ಟೋರ್‌ಗಳಲ್ಲಿ ಭದ್ರತೆ ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದೆ. ಇನ್ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಲು, IKEAದ ಪ್ರತಿ ಸ್ಟೋರ್‌ಗಳ ಒಳಗೂ ಗಾರ್ಡ್‌ಗಳು ಕಾವಲು ಕಾಯಲಿದ್ದಾರೆ.
IKEA ಈ ಘಟನೆ ಯಾವ ಸ್ಟೋರ್‌ನಲ್ಲಿ ನಡೆದಿದ್ದು ಎಂಬ ಕುರಿತಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ವಿಡಿಯೋದಲ್ಲಿ ಕೇಳಿ ಬಂದ ಧ್ವನಿಯನ್ನಾಧರಿಸಿ ಇದು ಚೀನಾದ ಗ್ವಾಂಗ್‌ಡೋಂಗ್‌ ಪ್ರಾಂತ್ಯದಲ್ಲಿರುವ ಸ್ಟೋರ್‌ನಲ್ಲಿ ನಡೆದಿದ್ದು ಎಂದು ಜನರು ಅಂದಾಜಿಸಿದ್ದಾರೆ.
ಇನ್ನು ಈ ವಿಡಿಯೋ ಕುರಿತಾಗಿ ಸ್ಪಷ್ಟನೆ ನೀಡಿರುವ IKEA ಇದು ಹಳೆ ವಿಡಿಯೋ ಕ್ಲಿಪ್ ಆಗಿರಬಹುದು. ಯಾಕೆಂದರೆ ವಿಡಿಯೋದಲ್ಲಿ ಹಿಂಬದಿಯಲ್ಲಿ ಕಾಣಿಸುತ್ತಿರುವ ಜನರು ಮಾಸ್ಕ್ ಧರಿಸಿಲ್ಲ. ಹೀಗಾಗಿ ಇದು ಕೊರೋನಾ ವಕ್ಕರಿಸುವುದಕ್ಕೂ ಮೊದಲೇ ಶೂಟ್ ಮಾಡಿರುವ ವಿಡಿಯೋ ಆಗಿರಬಹುದು ಎಂದಿದೆ.
ಸ್ಟೀಡಿಶ್ ಕಂಪನಿ IKEA ಚೀನಾದ ಪ್ರಖ್ಯಾತ ಬ್ರಾಂಡ್‌ಗಳಲ್ಲಿ ಒಂದು. ಹೀಗಿರುವಾಗ ಇಂತಹ ಅಶ್ಲೀಲ ವಿಡಿಯೋ ವೈರಲ್ ಆದ ಬಳಿಕ ಇಲ್ಲಿನ ಜನರು ಕಂಪನಿ ವಿರುದ್ಧ ಬಹಿಷ್ಕಾರದ ಕೂಗು ಕೇಳಿ ಬಂದಿದೆ.
ಪೊಲೀಸರು ಈಗಾಗಲೇ ಪ್ರಕರಣ ಸಂಬಂಧ ತನಿಖೆ ಆರಂಭಿಸಿದೆ. ಇನ್ನು ಚೀನಾದಲ್ಲಿ ಇಂತಹ ಅಶ್ಲೀಲ ಕೃತ್ಯ ಎಸಗಿದವರಿಗೆ ಹತ್ತು ದಿನ ಜೈಲು ಮತ್ತು ವಿಡಿಯೋ ವೈರಲ್ ಮಾಡಿದವರಿಗೆ 15 ದಿನ ಜೈಲು ಶಿಕ್ಷೆಯಾಗುತ್ತದೆ. ಜೊತೆಗೆ ಮೂರು ಸಾವಿರ ಯುವಾನ್ ಅಂದರೆ 32 ಸಾವಿರ ರೂಪಾಯಿ ದಂಡ ಕೂಡಾ ಕಟ್ಟಬೇಕಾಗುತ್ತದೆ.

Latest Videos

click me!