ಕೊರೋನಾ ಜಗತ್ತಿಗೆ ಹರಡಿದ ಚೀನಾಗೆ ವಿಶ್ವ ಆರೋಗ್ಯ ಸಂಸ್ಥೆಯ ಶಾಕ್!

First Published May 9, 2020, 5:16 PM IST

ಇಡೀ ವಿಶ್ವವೇ ಕೊರೋನಾ ಹಬ್ಬಿಸಿದ್ದು ಚೀನಾವೇ ಎಂದು ಆರೋಪಿಸುತ್ತಿದೆ. ಅಮೆರಿಕಾವೂ ತನ್ನ ಬಳಿ ಇದಕ್ಕೆ ಸಾಕ್ಷಿ ಇದೆ ಎಂದಿತ್ತು. ಹೀಗಿದ್ದರೂ ವಿಶ್ವ ಆರೋಗ್ಯ ಸಂಸ್ಥೆ ಮಾತ್ರ ಇದನ್ನು ಅಲ್ಲಗಳೆದಿತ್ತು. ಈ ನಿಟ್ಟಿನಲ್ಲಿ ಅಮೆರಿಕಾ WHO ಫಂಡಿಂಗ್ ನಿಲ್ಲಿಸಿತ್ತು. ಆದರೀಗ ವಿಶ್ವ ಆರೋಗ್ಯ ಸಂಸ್ಥೆ ಚೀನಾಗೆ ಶಾಕ್ ನೀಡಿದೆ. ಏನದು? ಇಲ್ಲಿದೆ ವಿವರ
 

ಕೊರೊನಾ ವಿಶ್ವಕ್ಕೇ ಹರಡಿರುವ ಕುರಿತು ಚೀನಾ ಹಾಗೂ ಇತರ ರಾಷ್ಟ್ರಗಳ ನಡುವಿನ ಜಟಾಪಟಿ ಮುಂದುವರೆದಿದೆ. ಆದರೆ ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಚೀನಾಗೆ ಶಾಕ್ ನೀಡಿದ್ದು, ಕೊರೋನಾ ಜಗತ್ತಿಗೆ ವ್ಯಾಪಿಸುವ ಹಿಂದೆ ಚೀನಾ ಕೈವಾಡ ಇದೆ ಎಂದು ಹೇಳಿದೆ. ಇಲ್ಲಿನ ವುಹಾನ್ ಮಾರುಕಟ್ಟೆ ಕೊರೋನಾ ವಿಶ್ವಕ್ಕೆ ವ್ಯಾಪಿಸುವಲ್ಲಿ ಪ್ರಮುಖ ಕಾರಣ ಎಂದು WHO ಒಪ್ಪಿಕೊಂಡಿದೆ.
undefined
ವಿಶ್ವ ಆರೋಗ್ಯ ಸಂಸ್ಥೆಯ ಫುಡ್‌ ಸೇಫ್ಟಿ ಜುನಾಟಿಕ್ ವೈರಸ್ ತಜ್ಞ ಪೀಟರ್ ಬೆನ್ ಆಂಬರೆಕ್ ಶುಕ್ರವಾರ ಜಿನೆವಾದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ವುಹಾನ್‌ನ ವೆಟ್ ಮಾರ್ಕೆಟ್ ಕೊರೋನಾ ವ್ಯಾಪಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸಿದೆ. ಆದರೆ ಈ ಬಗ್ಗೆ ಹೆಚ್ಚಿನ ಸಂಶೋದನೆ ನಡೆಯಲಿದೆ ಎಂದಿದ್ದಾರೆ.
undefined
ಇನ್ನು ವೈರಸ್ ಈ ಮಾರುಕಟ್ಟೆಗೆ ಬೇರೆ ಕಡೆಯಿಂದ ಬಂದಿದ್ದೋ, ಅಥವಾ ಈ ಮಾರ್ಕೆಟ್‌ನಿಂದ ವ್ಯಾಪಿಸಿತೋ ಎಂಬುವುದೇ ಮುಂದೆ ಶೋಧಿಸಲಿದ್ದೇವೆ. ಆದರೆ ಕೊರೋನಾ ವ್ಯಾಪಿಸುವ್ಲಿ ಈ ನಗರ ಎಷ್ಟು ಪಾತ್ರ ವಹಿಸಿದೆ ಎಂಬ ಪ್ರಶ್ನೆ ಏಳುತ್ತದೆ.
undefined
ಹೀಗಿದ್ದರೂ ಅಮೆರಿಕಾ ಚೀನಾ ವಿರುದ್ಧ ಮಾಡಿರುವ ಆರೋಪಗಳ ಕುರಿತು ಪೀಟರ್ ಪ್ರತಿಕ್ರಿಯಿಸಿಲ್ಲ. ಇನ್ನು ಮರ್ಸ್ ವೈರಾಣು ಒಂಟೆಯಿಂದ ಹರಡಿದ್ದು ಎಂಬುವುದನ್ನು ಪತ್ತೆ ಹಚ್ಚಲು ಬರೋಬ್ಬರಿ ಒಂದು ವರ್ಷ ತಗುಲಿತ್ತು. ಹೀಗೇ ಕೊರೋನಾ ಮೂಲ ಕಂಡು ಹಿಡಿಯಲು ಸಮಯ ತಗುಲುತ್ತದೆ. ಸದ್ಯಕ್ಕೀಗ ಇದನ್ನು ಹೇಗೆ ತಡೆಗಟ್ಟುವುದು ಎಂಬ ಕುರಿತು ಯೋಚಿಸಬೇಕಿದೆ ಎಂದಿದ್ದಾರೆ.
undefined
ಚೀನಾ ಕುರಿತು ಪ್ರತಿಕ್ರಿಯಿಸಿರುವ ಪೀಟರ್ 'ತನಿಖೆ ಕುರಿತು ಹೇಳುವುದಾದರೆ ಚೀನಾ ಬಳಿ ಸಂಶೋನೆಗೆ ಬೇಕಾದ ಎಲ್ಲಾ ಸಾಧನಗಳಿವೆ. ಅಲ್ಲದೇ ಯೋಗ್ಯ ಸಂಶೋಧಕರೂ ಇದ್ದಾರೆ. ಆದರೆ ಕೆಲವೊಮ್ಮ ಸಂಶೋಧಕರೊಂದಿಗೆ ವಿಶ್ವಾದ್ಯಂತ ಜನರೊಡನೆ ವಿಚಾರ ವಿಮರ್ಶೆ ನಡೆಸುವುದು ಅಗತ್ಯವಾಗಿರುತ್ತದೆ.
undefined
ಇವೆಲ್ಲವನ್ನು ಹೊರತುಪಡಿಸಿ ಪೀಟರ್ ವಿಶ್ವಾದ್ಯಂತ ವಿವಾಟು ನಡೆಸುತ್ತಿರುವ ವೆಟ್ ಮಾರ್ಕೆಟ್‌ಗಳು ನಿಯಮಗಳನ್ನು ಪಾಲಿಸಬೇಕು ಎಂದೂ ಹೇಳಿದ್ದಾರೆ. ಸ್ವಚ್ಛತೆ ಕಾಪಾಡಿಕೊಳ್ಳುವುದು ಅಗತ್ಯ ಎಂದಿರುವ ಅವರು ಕೆಲ ಮಾರ್ಕೆಟ್‌ಗಳನ್ನು ಮುಚ್ಚುವ ಅಗತ್ಯವಿದೆ ಎಂದಿದ್ದಾರೆ.
undefined
ಇನ್ನು ಚೀನಾದ ವುಹಾನ್‌ನಲ್ಲಿ ಯಾವ ವೆಟ್‌ ಮಾರ್ಕೆಟ್‌ನಿಂದ ವೈರಸ್ ಹರಡಿದೆ ಎನ್ನಲಾಗಿತ್ತೋ, ಅದನ್ನು ಜನರವರಿಯಲ್ಲೇ ಕೊರೋನಾ ನಿಯಂತ್ರಿಸುವ ಸಲುವಾಗಿ ಮುಚ್ಚಲಾಗಿತ್ತು. ಆದರೀಗ ಲಾಕ್‌ಡೌನ್ ಬೆನ್ನಲ್ಲೇ ಈ ಮಾರ್ಕೆಟ್‌ ಕೂಡಾ ಆರಂಭವಾಗಿದೆ.
undefined
ಈ ಎಲ್ಲದರ ನಡುವೆ ಅತ್ತ ಅಮೆರಿಕದ ವಿದೇಶಾಂಗ ಸಚಿವ ಮೈಕ್ ಚೀನಾದ ವುಹಾನ್ ಮಾರ್ಕೆಟ್‌ನಿಂದಲೇ ಕೊರೋನಾ ಹರಡಿತ್ತು ಎಂಬುವುದಕ್ಕೆ ನಮ್ಮ ಬಿ ಸಾಕ್ಷಿ ಇದೆ ಎಂದು ವಾದಿಸಿದ್ದಾರೆ. ಅಲ್ಲದೇ ಚೀನಾ ತನ್ನ ದೇಶದ ಕೊರೋನಾ ಡೇಟಾವನ್ನು ಇಡೀ ವಿಶ್ವದಿಂದ ಮುಚ್ಚಿಟ್ಟಿದೆ ಎಂದೂ ಆರೋಪಿಸಿದ್ದಾರೆ.
undefined
ಇನ್ನು ಅಮೆರಿಕದ ಅಧ್ಯಕ್ಷ ಟ್ರಂಪ್ ಶೀಘ್ರದಲ್ಲೇ ವಿಶ್ವ ಆರೋಗ್ಯ ಸಂಘಟನೆ ವಿಚಾರವಾಗಿ ಬಹುದೊಡ್ಡ ಘೋಷಣೆ ಮಾಡುವುದಾಗಿ ಘೋಷಿಸಿದ್ದರು. ಇನ್ನು ಇದಕ್ಕೂ ಮೊದಲೇ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆ ಚೀನಾ ಕೈಗೊಂಬೆಯಾಗಿದೆ ಎಂದು ಆರೋಪಿಸಿ ಫಂಡ್ ಕಡಿತ ಮಾಡಿದ್ದರು.
undefined
ಚೀನಾದ ವುಹಾನ್‌ನಿಂದ ಹಬ್ಬಿದ ಕೊರೋನಾ ವೈರಸ್ ಅಮೆರಿಕ ಸೇರಿದಂತೆ ಇಡೀ ವಿಶ್ವವನ್ನೇ ಕಂಗಾಲಾಗಿಸಿದೆ.
undefined
click me!