ತಿಂಗಳ ಬಳಿಕ ತೆರೆದ ಶಾಪ್: ಬ್ರ್ಲಾಂಡೆಟ್ ವಸ್ತು ಸ್ಥಿತಿ ನೋಡಿ ಮಾಲೀಕ ಶಾಕ್!

First Published May 11, 2020, 5:35 PM IST

ವಿಶ್ವಾದ್ಯಂತ ಕೊರೋನಾ ಆತಂಕ ಸೃಷ್ಟಿಸಿದೆ. ಹಲವಾರು ದೇಶಗಳಲ್ಲಿ ಈ ವೈರಸ್ ಹೆಣದ ರಾಶಿಗಳನ್ನೇ ಸೃಷ್ಟಿಸಿದೆ. ವೈರಸ್‌ನಿಂದ ಈವರೆಗೂ ವಿಶ್ವವ್ಯಾಪಿ 42 ಲಕ್ಷ ಜನರಿಗೆ ಸೋಂಕು ಹರಡಿದೆ. ಈವರೆಗೂ ಇದನ್ನು ತಡೆಗಟ್ಟಲು ಯಾವುದೇ ಲಸಿಕೆ ಸಿಕ್ಕಿಲ್ಲ. ಭಾರತದಲ್ಲಿ ಮಾರ್ಚ್ 24 ರಂದು ಲಾಕ್ಡೌನ್ ಹೇರಲಾಗಿದ್ದು, ಇನ್ನೂ ಸಂಪೂರ್ಣವಾಗಿ ಅಂತ್ಯವಾಗಿಲ್ಲ. ಮಲೇಷ್ಯಾದಲ್ಲೂ ಮಾರ್ಚ್ 18 ರಂದು ಲಾಕ್‌ಡೌನ್ ಹೇರಲಾಗಿದ್ದು, ಕಳೆದೆರಡು ತಿಂಗಳಿಂದ ಇಲ್ಲಿ ಶಾಲಾ ಕಾಲೇಜು ಸೇರಿದಂತೆ ಅಂಗಡಿಗಳೆಲ್ಲವೂ ಮುಚ್ಚಿವೆ. ಸದ್ಯ ಲಾಕ್‌ಡೌನ್ ಕೊಂಚ ಸಡಿಲಿಸಿದ್ದು, ಎರಡು ತಿಂಗಳ ಬಳಿಕ ಕೆಲ ಶಾಪ್‌ಗಳನ್ನು ತೆರೆಯಲಾಗಿದೆ. ಆದರೆ ಮಲೇಷ್ಯಾದ ಸಬಾಹ್‌ ನಿವಾಸಿಗೆ ಲಾಕ್‌ಡೌನ್ ಬಳಿಕ ತನ್ನ ಶಾಪ್‌ನ ಪರಿಸ್ಥಿತಿ ನೋಡಲಾಗಿಲ್ಲ. ಮಾಲ್‌ ಒಂದರಲ್ಲಿರುವ ಇವರ ಶಾಪ್‌ ಮಾಡಿದಾಗ ಒಳಗಿನ ಪರಿಸ್ಥಿತಿ ನೋಡಿ ಮಾಲೀಕ ಕುಸಿದು ಹೋಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಬಾಹ್‌ನ ಈ ಶಾಪ್‌ನಲ್ಲಿ ಕೆಲಸ ಮಾಡುವ ವ್ಯಕ್ತಿ ಕೆಲ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಪುಟ್ಟ ಮಾಲ್‌ನಲ್ಲಿರುವ ಈ ಶಾಪ್‌ ಸ್ಥಿತಿ ಲಾಕ್‌ಡೌನ್ ವೇಳೆ ಹದಗೆಟ್ಟಿದೆ.
undefined
ದೀರ್ಘ ಕಾಲದಿಂದ ಶಾಪ್‌ ಬಂದ್ ಆಗಿದ್ದ ಕಾರಣ ಚರ್ಮದಿಂದ ತಯಾರಿಸಿದ ವಸ್ತುಗಳಿದ್ದ ಈ ಶಾಪ್‌ ಹದಗೆಟ್ಟಿದೆ. ಎಲ್ಲಾ ವಸ್ತುಗಳಿಗೂ ಫಂಗಸ್ ತಾಗಿದೆ. ಲೆದರ್ ಬ್ಯಾಗ್, ದುಬಾರಿ ಶೂಗಳೆಲ್ಲದರ ಮೇಲೂ ಬಿಳಿ ಬರ್ಣನದ ಫಂಗಸ್ ಹುಟ್ಟಿಕೊಂಡಿದೆ.
undefined
ಶೂಗಳ ಸ್ಥಿತಿಯೂ ಹೀಗೆ ಇದೆ.
undefined
ಬೆಲ್ಟ್, ಬ್ಯಾಗ್, ಶೂ ಹೀಗೆ ಎಲ್ಲವೂ ಹಾಳಾಗಿದ್ದು, ಶಾಪ್ ಮಾಲೀಕ ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದಾರೆ.
undefined
ಬ್ರ್ಯಾಂಡೆಡ್ ಹಾಗೂ ದುಬಾರಿ ವಸ್ತುಗಳ ಮೇಲೆ ಮೂಡಿದ ಈ ಫಂಗಸ್‌ನಿಂದಾಗಿ ಎಲ್ಲವೂ ಕೆಟ್ಟಿದೆ.
undefined
ಈ ಮೊದಲು ಲಾಕ್‌ಡೌನ್‌ನಿಂದಾಗಿ ಶಾಪ್‌ಗಳು ಬಂದ್ ಆಗಿದ್ದವು, ಹೀಗಾಗಿ ನಷ್ಟವಾಗಿತ್ತು. ಆದರೀಗ ಲಾಕ್‌ಡೌನ್ ಸಡಿಲಿಕೆಯಾಗಿ ಶಾಪ್‌ ತೆರೆದರೆ ವಸ್ತಗಳ್ಯಾವುದೂ ಮಾರಾಟ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿವೆ.
undefined
ಮಾಲೀಕ ಅಕ್ಷರಶಃ ಅಳಲಾರಂಭಿಸಿದ್ದಾರೆ. ಹೀಗಿದ್ದರೂ ಈ ಚರ್ಮದ ವಸ್ತುಗಳ ಮೇಲೆ ಇಷ್ಟು ಪ್ರಮಾಣದ ಫಂಗಸ್ ಹೇಗೆ ಹುಟ್ಟಿಕೊಂಡಿದೆ ಎಂಬುವುದು ಮಾತ್ರ ತಿಳಿದು ಬಂದಿಲ್ಲ.
undefined
ಇನ್ನು ಎರಡು ತಿಂಗಳು ಲಾಕ್‌ಡೌನ್ ಇದ್ದ ಕಾರಣ ಶಾಪ್‌ ಬಂದ್ ಆಗಿತ್ತು. ಹೀಗಾಗಿ ಇಲ್ಲಿ ತೇವಾಂಶವಿದ್ದು, ಈ ಸ್ಥಿತಿ ಆಗಿದೆ ಎಂಬುವುದು ಹಲವರ ಅಭಿಪ್ರಾಯ.
undefined
ಈ ತೇವಾಂಶದಿಂದ ಎಲ್ಲಾ ವಸ್ತುಗಳ ಮೇಲೆ ಫಂಗಸ್ ಹುಟ್ಟಿಕೊಂಡಿದೆ ಎನ್ನಲಾಗಿದೆ. ಅಲ್ಲದೇ ಎರಡು ತಿಂಗಳು ಈ ವಸ್ತುಗಳನ್ನು ಸರಿಯಾಗಿ ಆರೈಕೆ ಮಾಡದಿರುವುದರಿಂದ ಹೀಗಾಗಿರಬಹುದು ಎಂಬುವುದು ಇನ್ನು ಕೆಲವರ ಅಭಿಪ್ರಾಯ.
undefined
ಇನ್ನು ಈವರೆಗೂ ಶಾಪ್ ಮಾಲೀಕ ಇದರಿಂದಾದ ನಷ್ಟವೆಷ್ಟು ಎಂಬುವುದನ್ನು ಬಹಿರಂಗಪಡಿಸಿಲ್ಲ. ಆದರೆ ಕೋಟ್ಯಾಂತರ ರೂಪಾಯಿ ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ.
undefined
click me!