ಗಂಡ ಮೃತಪಟ್ಟ ಮೂರು ವರ್ಷದ ಬಳಿಕ ತಾಯಿಯಾದ ವಿಧವೆ!

Published : Aug 12, 2020, 06:11 PM IST

ಹಿಂದಿನ ಕಾಲದಲ್ಲಿ ಒಂದು ವೇಳೆ ಮಹಿಳೆಯೊಬ್ಬಳು ತಾಯಿಯಾಗದಿದ್ದರೆ ಆಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿತ್ತು. ಇದಾಧ ಬಳಿಕ ಅನೇಕ ಪುರುಷರು ಎರಡನೇ ಮದುವೆಯೂ ಆಗಲು ಹಿಂದೆ ಸರಿಯುತ್ತಿರಲಿಲ್ಲ. ಆದರೆ ವಿಜ್ಞಾನ ಅದೆಷ್ಟು ಮುಂದುವರೆದಿದೆ ಎಂದರೆ ಯಾವುದೂ ಅಸಾಧ್ಯವಿಲ್ಲ. ಹಿಂದೆ ಮಗು ಆಗದಿದ್ದರೆ ಮಗುವನ್ನು ದತ್ತು ಪಡೆಯುತ್ತಿದ್ದರೆ, ಇಂದು ಐವಿಎಫ್ ಅದನ್ನೂ ನಿಲ್‌ಲಿಸುವಂತೆ ಮಾಡಿದೆ. ಇಂಗ್ಲೆಂಡ್‌ನ ಬ್ರಿಸ್ಟಲ್ ನಿವಾಸಿ ಕೆಲ ತಿಂಗಳ ಹಿಂದೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಈ ಮಕ್ಕಳು ಆಕೆಯ ಪತಿಯದ್ದು. ಎಲ್ಲಕ್ಕಿಂತ ಅಚ್ಚರಿಯ ವಿಚಾರವೆಂದರೆ ಈಕೆ ತನ್ನ ಗಂಡ ಮೃತಪಟ್ಟ ಮೂರು ವರ್ಷಗಳ ಬಳಿಕ ಜನಿಸಿವೆ. ಈಕೆಯ ಗಂಡ ಮೂರು ವರ್ಷದ ಮೊದಲು ಕ್ಯಾನ್ಸರ್‌ನಿಂದಾಗಿ ಮೃತಪಟ್ಟಿದ್ದರು. ಆದರೆ ಆತ ಸಾಯುವ ಮೊದಲೇ ತನ್ನ ಹೆಂಡತಿಯನ್ನು ತಾಯಿಯಾಗಿಸಲು ಎಲ್ಲಾ ತಯಾರಿ ನಡೆಸಿದ್ದ.

PREV
17
ಗಂಡ ಮೃತಪಟ್ಟ ಮೂರು ವರ್ಷದ ಬಳಿಕ ತಾಯಿಯಾದ ವಿಧವೆ!

ಸೋಶಿಯಲ್ ಮೀಡಿಯಾದಲ್ಲಿ ಇಂಗ್ಲೆಂಡ್ ನಿವಾಸಿ 37 ವರ್ಷದ ಲೂಸಿ ಕೈಸಲ್ ತನ್ನ ಪ್ರೆಗ್ನೆನ್ಸಿ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಾನು ಹೇಗೆ ಗಂಡ ಮೃತಪಟ್ಟ ಮೂರು ವರ್ಷಗಳ ಬಳಿಕ ಅವಳಿ ಮಕ್ಕಳ ತಾಯಿಯಾದೆ ಎಂಬುವುದನ್ನೂ ಬಹಿರಂಗಪಡಿಸಿದ್ದಾರೆ.

27

ಲೂಸಿ  2012 ರಲ್ಲಿ ಡೇವಿಡ್‌ರನ್ನು ಮದುವೆಯಾಗಿದ್ದರು.  ಆದರೆ ಇದಾದ ಬಳಿಕ ಡೇವಿಡ್‌ಗೆ ಗಂಟಲು ಕ್ಯಾನ್ಸರ್ ಕಾಣಿಸಿಕೊಂಡಿದೆ. ಹೀಗಾಗಿ ಆತ  2017 ರಲ್ಲಿ ಮೃತಪಟ್ಟ.

37

ಗಂಡ ಮೃತಪಡುವುದಕ್ಕೂ ಮೊದಲೂ ಲೂಸಿ ಗರ್ಭಿಣಿಯಾಗಲು ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಆದರೆ ಡೇವಿಡ್ ಮಾತ್ರ ತನ್ನ ಬಳಿ ಹೆಚ್ಚು ಸಮಯ ಇಲ್ಲ ಎಂಬುವುದನ್ನು ಅರಿತರು. ಹೀಗಾಗಿ ಸಾಯುವ ಮುನ್ನ ಅವರೊಂದು ನಿರ್ಧಾರಕ್ಕೆ ಬಂದರು.

47

ಡೇವಿಡ್ ಸಾಯುವ ಮುನ್ನ ತನ್ನ ವೀರ್ಯವನ್ನು ಶೇಖರಿಸಿದ. ಇದರಿಂದ ಲೂಸಿ ಭವಿಷ್ಯದಲ್ಲಿ ಗರ್ಭಿಣಿಯಾಗಿಸಲು ಆತ ನಿರ್ಧರಿಸಿದ್ದ. ಪತಿ ಸಾವಿನ ಬಳಿಕ ಲೂಸಿ ಆಘಾತದಲ್ಲಿದ್ದರು ಆದರೆ ನಿಧಾನವಾಗಿ ಅವರು ಮತ್ತೆ ತಮ್ಮನ್ನು ತಾವು ನಿಯಂತ್ರಿಸಿದರು.

57

ಬಳಿಕ ಅವರು ತಮ್ಮ ಪತಿಯ ವೀರ್ಯದಿಂದ ಎರಡು ಬಾರಿ ಗರ್ಭಿಣಿಯಾಗಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಹೀಗಿರುವಾಗ ವೈದ್ಯರೂ ಕೈ ಚೆಲ್ಲಿದ್ದರು. ಆದರೆ  2019ರಲ್ಲಿ ಕೊನೆಗೂ ಲೂಸಿ ಗರ್ಭಿಣಿಯಾಗಲು ಯಶಸ್ವಿಯಾದರು.

67

ಈಗ ಲೂಸಿ ತನ್ನ ಗಂಡನ ಸಾವಿನ ಬಳಿಕ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇನ್ನು ಡೇವಿಡ್ ಜೀವಂತವಾಗಿದ್ದರೆ ಅವರೊಬ್ಬ ಒಳ್ಳೆಯ ತಂದೆಯಾಗಿರುತ್ತಿದ್ದರು ಎಂದಿದ್ದಾರೆ.

77

ಇನ್ನು ಮಕ್ಕಳಿಗೆ ಜನ್ಮ ನೀಡುವ ಸಮಯದಲ್ಲಿ ಒಂದು ಕ್ಷಣ ಡೇವಿಡ್ ಖುದ್ದು ತನ್ನ ಬಳಿ ನಿಂತಂತೆ ಭಾಸವಾಯ್ತು ಎಂದು ಲೂಸಿ ಹೇಳಿದ್ದಾರೆ. ಈ ಮಕ್ಕಳಲ್ಲಿ ಒಂದು ಮಗುವಿನ ಕಣ್ಣು ಡೇವಿಡ್‌ನಂತೆಯೇ ಇದೆ. ನಿರಂತರ ಪ್ರಯತ್ನದ ಬಳಿಕ ಕೊನೆಗೂ ಲೂಸಿ ಡೇವಿಡ್ ಮಕ್ಕಳ ತಾಯಿಯಾಗಿದ್ದಾರೆ.

click me!

Recommended Stories