ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬಾಂಗ್ಲಾದೇಶದ ಕಾರ್ಮಿಕರು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಸುಮಾರು 2500 ಜವಳಿ ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ. ಹಣದುಬ್ಬರದಿಂದಾಗಿ ಕನಿಷ್ಠ ವೇತನವನ್ನು 30 ಸಾವಿರ ಟಾಕಾಗೆ ಏರಿಸಲು ಕಾರ್ಮಿಕರು ಪಟ್ಟು ಹಿಡಿದಿದ್ದಾರೆ.
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬಾಂಗ್ಲಾದೇಶದಲ್ಲಿ ಪ್ರತಿಭಟನೆ
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬಾಂಗ್ಲಾದೇಶದ ಕಾರ್ಮಿಕರು ಬೀದಿಗಿಳಿದು ಪ್ರತಿಭಟಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಸುಮಾರು 2500 ಜವಳಿ ಕಾರ್ಖಾನೆಗಳು ಬಾಗಿಲು ಹಾಕಿವೆ.
ಇನ್ನೊಂದೆಡೆ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಅಶ್ರುವಾಯು ಹಾಗೂ ಸ್ಟನ್ ಗ್ರೆನೇಡ್ (ಪ್ರಖರ ಬೆಳಕು, ಶಬ್ದ ಮಾಡಿ ಜನರ ಕಣ್ಣು, ಕಿವಿ ನಿಸ್ತೇಜ ಮಾಡುತ್ತದೆ) ಬಳಸುತ್ತಿದ್ದಾರೆ. ಕೆಲವರನ್ನು ಬಂಧಿಸಿದ್ದಾರೆ.
24
ಬಾಂಗ್ಲಾದಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ಕನಿಷ್ಠ ವೇತನ
ಹಣದುಬ್ಬರ ಹಾಗೂ ಹೆಚ್ಚುತ್ತಿರುವ ಜೀವನವೆಚ್ಚವನ್ನು ಪರಿಗಣಿಸಿ, ಮಾಸಿಕ ಕನಿಷ್ಠ ವೇತನವನ್ನು 12,500 ಟಾಕಾದಿಂದ 30 ಸಾವಿರ ಟಾಕಾಗೆ ಏರಿಸಬೇಕು ಎಂಬುದು ಕಾರ್ಮಿಕರ ಬೇಡಿಕೆಯಾಗಿದೆ. ಇದನ್ನು ಈಡೇರಿಸುವಂತೆ ಆಗ್ರಹಿಸಿ ಕೆಲಸಕ್ಕೆ ಹೋಗದೆ, ರಸ್ತೆ, ಹೆದ್ದಾರಿಗಳನ್ನು ತಡೆದು ಪ್ರತಿಭಟಿಸಲಾಗುತ್ತಿದೆ. ಬಾಂಗ್ಲಾದಲ್ಲಿ ಸುಮಾರು 2500 ಜವಳಿ ಕಾರ್ಖಾನೆಗಳಿದ್ದು, 40 ಲಕ್ಷ ಮಂದಿ ಇಲ್ಲಿ ದುಡಿಯುತ್ತಿದ್ದಾರೆ. ಬಟ್ಟೆ ರಫ್ತಿನಿಂದ ದೇಶ ವಾರ್ಷಿಕ 3.78 ಲಕ್ಷ ಕೋಟಿ ರು. ಆದಾಯ ಗಳಿಸುತ್ತದೆ.
34
ಬಾಂಗ್ಲಾ ಸರ್ಕಾರದ ಭರವಸೆ ಏನು?
ಕಾರ್ಮಿಕರ ಬೇಡಿಕೆಯನ್ನು ಪರಿಗಣಿಸಿರುವ ಸರ್ಕಾರವು ಹೊಸ ವೇತವನ್ನು ನಿರ್ಧರಿಸಲು ಮಂಡಳಿಯನ್ನು ರಚಿಸಿದ್ದು, ಅದರ ಶಿಫಾರಸಿನಂತೆ ಜನವರಿಯಿಂದ ವೇತನ ಹೆಚ್ಚಳ ಮಾಡಲಾಗುವುದು ಎಂಬ ಭರವಸೆ ನೀಡಿದೆ. ಆದರೆ ಇದಕ್ಕೆ ಒಪ್ಪದ ಜನರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಸರ್ಕಾರದ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಿದ್ದಾರೆ. ಹಿಂಸಾಚಾರ ಭುಗಿಲೆದ್ದಿದೆ. ಉದ್ರಿಕ್ತ ಪ್ರತಿಭಟನೆಕಾರರು ಪೊಲೀಸರ ನಡುವಿನ ಸಂಘರ್ಷಗಳು ನಡೆಯುತ್ತಿದ್ದು ಹಿಂದಿನ ಬಾಂಗ್ಲಾ ಹಿಂಸಾಚಾರ ಮತ್ತೆ ಮರುಕಳಿಸುವಂತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ