68 ಸಾವಿರ ಮಂದಿ ನಾಪತ್ತೆ,ವೆನಿಜುವೆಲಾ ಭೂಕಂಪದ ಅವಶೇಷಗಳಡಿಯಿಂದ ಕೇಳಿಸುತ್ತಿದೆ ಆರ್ತನಾದ

Published : Jun 28, 2026, 08:19 PM IST

ವೆನಿಜುವೆಲಾಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಇತ್ತ ಸಾವಿನ ಸಂಖ್ಯೆ 1400 ದಾಟಿದರೆ, ನಾಪತ್ತೆಯಾದವರ ಸಂಖ್ಯೆ ಬರೋಬ್ಬರಿ 68,000.

PREV
16
ರಕ್ಷಣಾ ಕಾರ್ಯಾಚರಣೆ ವಿಳಂಬ

ವೆನಿಜುವೆಲಾ ಭೂಕಂಪದಿಂದ ಲಕ್ಷಕ್ಕೂ ಅಧಿಕ ಮಂದಿ ನರಳುತ್ತಿದ್ದಾರೆ. ಭೂಕಂಪ ಸಂಭವಿಸಿ ಎರಡು ದಿನಗಳಾದರೂ ರಕ್ಷಣಾ ಕಾರ್ಯಾಚರಣೆಗೆ ಚುರುಕಾಗಿಲ್ಲ ಅನ್ನೋ ಆರೋಪ, ಆಕ್ರೋಶಗಳು ಭುಗಿಲೆದ್ದಿದೆ. ಪರಿಣಾಮ ಅವಶೇಷಗಳಡಿ ಸಿಲುಕಿರುವ ಮಂದಿ ಗಾಯಗೊಂಡು ಪ್ರಾಣ ಕಳೆದಕೊಳ್ಳುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆ ತ್ವರಿತಗೊಳಿಸಲು ಆಗ್ರಹ ವ್ಯಕ್ತವಾಗಿದೆ.

26
68 ಸಾವಿರ ಮಂದಿ ನಾಪತ್ತೆ

ವೆನಿಜುವಾಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 1,400ಕ್ಕೆ ಏರಿಕೆಯಾಗಿದೆ. ಇತ್ತ ನಾಪತ್ತೆಯಾದವರ ಸಂಖ್ಯೆ 68,000. ಈ ಪೈಕಿ ಹಲವರು ಅವಶೇಷಗಳಡಿ ಜೀವಂತವಾಗಿದ್ದಾರೆ. ಆದರೆ ಅವರನ್ನು ಇನ್ನು ತಲಪಲು ಸಾಧ್ಯವಾಗುತ್ತಿಲ್ಲ. ಹಲವು ಅವಶೇಷಗಳಡಿ ನಾಯಿಗಳು ಬೊಗಳುತ್ತಿರುವ, ಸಹಾಯಕ್ಕಾಗಿ ಕೂಗುತ್ತಿರುವ ಆರ್ತನಾದಗಳು ಕೇಳಿಸುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಸರ್ಕಾರದ ಕಾರ್ಯಾಚರಣೆ ವಿಳಂಬದಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದು ಎಚ್ಚರಿಸಿದ್ದಾರೆ.

36
ಅವಶೇಷಗಳಿಡಲ್ಲಿ ಜೀವಂತವಾಗಿದ್ದಾರೆ ಹಲವರು

ಗಗನಚುಂಬಿ ಕಟ್ಟಡಗಳು ಧರೆಗುರುಳಿದ ಪರಿಣಾಮ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಇದೀಗ ಅಂತಾರಾಷ್ಟ್ರೀಯ ತಂಡಗಳು ರಕ್ಷಣಾ ಕಾರ್ಯಾಚರಣೆಗ ಆಗಮಿಸಿದೆ. ಆದರೂ ಅವಶೇಷಗಳಡಿ ಸಿಲುಕಿದ ಹಲವರನ್ನು ತಲಪು ಸಾಧ್ಯವಾಗುತ್ತಿಲ್ಲ. 2 ದಿನಗಳ ಬಳಿಕೂವ ಕೆಲವರನ್ನು ಜೀವಂತವಾಗಿ ಹೊರತೆಗೆಯಲಾಗಿದೆ. ಇದೀಗ ಸಮಯ ಮೀರುತ್ತಿದೆ. ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿರುವ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ.

46
ಜೀವಂತವಾಗಿ ಹೊರತೆಗೆಯಲು ಆಗ್ರಹ

ವೆನಿಜುವೆಲಾ ರಕ್ಷಣಾ ಪಡೆಗಳು ಸ್ಥಳದಲ್ಲಿವೆ. ರಕ್ಷಣಾ ಪಡೆಗಳಿಂದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಲು ಸಾಧ್ಯವಾಗುತ್ತಿಲ್ಲ. ಇತ್ತ ವೆನಿಜುವೆಲಾ ಸರ್ಕಾರದ ರಕ್ಷಣಾ ಕಾರ್ಯಾಚರಣೆಗಳು ವಿಳೆಂಬವಾಗುತ್ತಿದೆ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಾಪತ್ತೆಯಾಗಿರುವ 68 ಸಾವಿರ ಮಂದಿಯನ್ನು ಆದಷ್ಟು ಬೇಗ ಪತ್ತ ಹಚ್ಚಿ ಜೀವಂತವಾಗಿ ಹೊರತೆಗಯಲು ಆಗ್ರಹ ಹೆಚ್ಚಾಗಿದೆ.

56
ಸ್ವಯಂ ಸೇವಕರಿಗೆ ಸಿಗುತ್ತಿಲ್ಲ ಅನುಮತಿ

ವೆನಿಜುವೆಲಾಯದಲ್ಲಿರುವ ಹಲವು ಸಂಘಟನೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಧುಮಕಲು ಸಿದ್ಧವಾಗಿದೆ. ಆದರೆ ಸ್ವಯಂ ಸೇವಕರಿಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಇದು ಹಲವು ತಾಳ್ಮೆ ಕೆಡಿಸಿದೆ. ಪ್ರಾಣ ಉಳಿಸಲು ಸರ್ಕಾರದ ಅನುಮತಿ ಬೇಕು. ಅನುಮತಿ ನೀಡಲೂ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಹೀಗಾದರೆ ಅವಶೇಷಗಳಡಿ ಸಿಲುಕಿರುವವರ ಪ್ರಾಣ ಉಳಿಸುವುದು ಹೇಗೆ ಎಂದು ಹಲವರು ಪ್ರಶ್ನಿಸಿದ್ದಾರೆ.

66
ವಿಶ್ವಸಂಸ್ದೆ ಸ್ಫೋಟಕ ವರದಿ

ವೆನಿಜುವೆಲಾ ಭೂಕಂಪ ಬರೋಬ್ಬರಿ 6.76 ಮಿಲಿಯನ್ ಜನರಿಗೆ ತಟ್ಟಿದೆ. ವೆನಿಜುವೆಲಾಯದಲ್ಲಿ ತಕ್ಷಣವೇ ಪರಿಹಾರ ಕಾರ್ಯಗಳು ನಡೆಯಬೇಕು. ರಕ್ಷಣಾ ಕಾರ್ಯಾಚರಣೆಗೆ ವೇಗ ನೀಡಬೇಕು. ಇನ್ನು ಕುಡಿಯುವ ನೀರು, ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳು, ಪುನರ್ವಸತಿ ಕೇಂದ್ರಗಳನ್ನು ತೆರಯಬೇಕು ಎಂದು ವಿಶ್ವಸಂಸ್ಥೆ ಸೂಚನೆ ನೀಡಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories