ಅಫ್ಘಾನ್‌ನಲ್ಲಿ ಗೆಲ್ಲೋದು ಯಾರು? ಕಾಬೂಲ್‌ ಏರ್‌ಪೋರ್ಟ್‌ನ ಈ 10 ಚಿತ್ರಗಳೇ ಉತ್ತರ!

Published : Aug 23, 2021, 04:48 PM IST

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ, ಪ್ರಪಂಚದ ಎಲ್ಲಾ ದೇಶಗಳು ತಮ್ಮ ಪ್ರಜೆಗಳನ್ನು ಕಾಬೂಲ್ ವಿಮಾನ ನಿಲ್ದಾಣದಿಂದ ಏರ್‌ಲಿಫ್ಟ್‌ ಮಾಡಲಾರಂಭಿಸಿವೆ. ಹೀಗಿರುವಾಗ ಅಲ್ಲಿ ಅಮೆರಿಕ ಹೊರತುಪಡಿಸಿ ಬೇರೆ ದೇಶದ ಸೈನಿಕರೂ ಇಲ್ಲಿನ ವಿಮಾನ ನಿಲ್ದಾಣದಲ್ಲಿ ನಾಗರಿಕರ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸೈನಿಕರು ಜನರಿಗೆ ಕಾಬೂಲ್‌ನಿಂದ ಹೊರಬರಲು ಸಹಾಯ ಮಾಡುತ್ತಿದ್ದಾರೆ. ಹೀಗಿರುವಾಗ ಸೈನಿಕರು ಮಕ್ಕಳನ್ನು ನೋಡಿಕೊಳ್ಳುವ ಅನೇಕ ಚಿತ್ರಗಳು ವೈರಲ್ ಆಗಿವೆ. ಮಾನವೀಯತೆಗೆ ಸಾಕ್ಷಿಯಾಗಿರುವ ಈ ಚಿತ್ರಗಳು ತಾಲಿಬಾನ್ ಸಾವಿನ ನೆರಳಿನಲ್ಲಿ ಭರವಸೆಯ ಕಿರಣ ಇದೆ ಎಂಬ ಭರವಸೆ ನೀಡಿವೆ. ಈ ಚಿತ್ರಗಳು ಅಫ್ಘಾನಿಸ್ತಾನದಲ್ಲಿ ತಾಲಿಬಾನಿಯರು ಲಕ್ಷಾಂತರ ಗುಂಡುಗಳ ಮಳೆಗರೆಯಬಹುದು, ಹೀಗಿದ್ದರೂ ಅಂತಿಮವಾಗಿ ಮಾನವೀಯತೆ, ಪ್ರಜಾಪ್ರಭುತ್ವ, ಜನರ ಹಕ್ಕುಗಳಿಗೇ ಗೆಲುವಾಗುತ್ತದೆ ಎಂದು ಸಾರಿ ಹೇಳುತ್ತವೆ. 

PREV
111
ಅಫ್ಘಾನ್‌ನಲ್ಲಿ ಗೆಲ್ಲೋದು ಯಾರು? ಕಾಬೂಲ್‌ ಏರ್‌ಪೋರ್ಟ್‌ನ ಈ 10 ಚಿತ್ರಗಳೇ ಉತ್ತರ!

21 ಆಗಸ್ಟ್ 2021 ರಂದು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕಂಡುಬಂದ ದೃಶ್ಯ. ರಕ್ಷಣಾ ಕಾರ್ಯಾಚರಣೆಯ ವೇಳೆ ಸೈನಿಕನೊಬ್ಬ ಮಗುವಿನ ಆರೈಕೆ ಮಾಡುತ್ತಿರುವುದು. ಈ ಚಿತ್ರ ತಾಲಿಬಾನಿಗಳು ಅದೆಷ್ಟೇ ಕ್ರೌರ್ಯ ಮೆರೆದರೂ ಮಾನವೀಯತೆಯು ಜಗತ್ತಿನಲ್ಲಿ ಯಾವಾಗಲೂ ಜೀವಂತವಾಗಿರುತ್ತದೆ ಎಂದು ತೋರಿಸಿದೆ.
 

211

ಅಫ್ಘಾನಿಸ್ತಾನದ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದಾಗ, ಸೈನಿಕರು ಅಲ್ಲಿ ಇರುವ ಮಕ್ಕಳನ್ನು ಆರೈಕೆ ಮಾಡುತ್ತಿರುವ ದೃಶ್ಯ.

311

18 ಆಗಸ್ಟ್ 2021 ರ ಫೋಟೋ. ಟರ್ಕಿಯ ಸೈನಿಕರು ರಕ್ಷಣೆಕೇಳುತ್ತಿರುವ ಜನರಲ್ಲಿ ವಯಸ್ಸಾದ ವ್ಯಕ್ತಿಗೆ ಸಹಾಯ ಮಾಡುತ್ತಿರುವುದು.

411

ಟರ್ಕಿಯ ಸೈನಿಕರು ಮಹಿಳೆಗೆ ಸಹಾಯ ಮಾಡುತ್ತಿರುವುದು. ಮಹಿಳೆ ತನ್ನ ಪಾಸ್ಪೋರ್ಟ್ ಕಳೆದುಕೊಂಡಿದ್ದರು. ಆದರೆ ಬಳಿಕ ಅವರಿಗೆ ಇದು ಸಿಕ್ಕಿದೆ.

511

ಅಫ್ಘಾನಿಸ್ತಾನದ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನರು ರಕ್ಷಣೆಗಾಗಿ ಕಾಯುತ್ತಿದ್ದಾರೆ. ಈ ಸಮಯದಲ್ಲಿ, ಸೈನಿಕ ಮಹಿಳೆಯೊಬ್ಬರಿಗೆ ನೀರು ನೀಡುತ್ತಿರುವ ದೃಶ್ಯ.

611

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಟರ್ಕಿಯ ಸೈನಿಕರು ಮಗುವನ್ನು ನೋಡಿಕೊಳ್ಳುತ್ತಿರುವ ದೃಶ್ಯ. ಇಲ್ಲಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪೋಸ್ಟಿಂಗ್‌ನಲ್ಲಿರುವ ಮಹಿಳಾ ಯೋಧರು ಜನರಿಗೆ ಸಹಾಯ ಮಾಡುವ ಜೊತೆಗೆ ಮಕ್ಕಳನ್ನು ತಾಯಿಯಂತೆ ನೋಡಿಕೊಳ್ಳುತ್ತಿದ್ದಾರೆ.
 

711

ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಈ ಚಿತ್ರ ತಾಲಿಬಾನ್ ಹೋರಾಟಗಾರರಿಗೆ ತಕ್ಕ ಉತ್ತರ ನೀಡುತ್ತದೆ. ಇದು ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ ಎಂದು ತೋರಿಸುತ್ತದೆ.

811

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕರ್ತವ್ಯದಲ್ಲಿ ಟರ್ಕಿಯ ಪೊಲೀಸರು ಅಮಾಯಕನಿಗೆ ಆಹಾರ ನೀಡುತ್ತಿರುವುದು. ಈ ಚಿತ್ರ ಧೈರ್ಯವನ್ನು ನೀಡುತ್ತದೆ. ಅತ್ತ ತಾಲಿಬಾನಿಯರು ಜನರ ಮೇಲೆ ಗುಂಡು ಹಾರಿಸುತ್ತಿದ್ದರೆ, ಇತ್ತ ಅಪರಿಚಿತ ಪೊಲೀಸರು ಜನರ ಸಹಾಯಕ್ಕೆ ಧಾವಿಸಿದ್ದಾರೆ.
 

911

ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಕಿಶ್ ನಾಗರಿಕರು. 2021 ಆಗಸ್ಟ್ 20 ರಂದು ಅಫ್ಘಾನಿಸ್ತಾನದಿಂದ ವಿಮಾನದ ಮೂಲಕ ಅವರನ್ನು ಕಾಬೂಲ್‌ನಿಂದ ಸ್ಥಳಾಂತರಿಸಲಾಯಿತು.
 

1011

19 ಆಗಸ್ಟ್ 2021 ರ ಫೋಟೋ. ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುಎಸ್ ನೌಕಾಪಡೆ ಮಗುವನ್ನು ಮುಳ್ಳುತಂತಿಯ ಮೂಲಕ ಎತ್ತಿಕೊಂಡಿದ್ದು. ತಾವು ಬದುಕದಿದ್ದರೂ ಪರ್ವಾಗಿಲ್ಲ, ಮಕ್ಕಳು ಎಲ್ಲಾದರೂ ಬದುಕಿರಲಿ ಎಂಬ ಭಾವನೆಯೊಂದಿಗೆ ಹೆತ್ತವರು ತಮ್ಮ ಮಕ್ಕಳನ್ನು ಸೈನಿಕರಿಗೆ ಒಪ್ಪಿಸುತ್ತಿರುವುದು.

1111

ಕಾಬೂಲ್ ವಿಮಾನ ನಿಲ್ದಾಣದ ಫೋಟೋ. ತಾಯಂದಿರಿಗೆ ವಿಮಾನ ನಿಲ್ದಾಣದ ಒಳಗೆ ಬರಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಅವರು ತಮ್ಮ ಮಕ್ಕಳನ್ನು ಗೋಡೆಯ ಮೂಲಕ ಸೈನಿಕರ ಕೈಗೊಪ್ಪಿಸುತ್ತಿದ್ದಾರೆ. ಸೇನಾ ಸಿಬ್ಬಂದಿ ವಿಮಾನ ನಿಲ್ದಾಣದ ಒಳಗೆ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.

click me!

Recommended Stories