ತಾಲಿಬಾನ್ ಅಟ್ಟಹಾಸ, ಅಫ್ಘಾನ್ ಪತನಕ್ಕೆ ಕಾರಣವಾಗಿದ್ದೇ ಆ ಒಂದು ಘೋಷಣೆ!

First Published Aug 16, 2021, 10:12 AM IST

ಅಮೆರಿಕ ತನ್ನ ಸೇನೆ ಹಿಂದಕ್ಕೆ ಪಡೆದರೆ ಆಫ್ಘಾನಿಸ್ತಾನದಲ್ಲಿ ಏನಾಗಬಹುದೆಂಬ ಆತಂಕ ಇತ್ತೋ ಅದು ನಿರೀಕ್ಷೆಗೂ ಮೊದಲೇ ನಿಜವಾಗಿದೆ. ಸತತ 2 ದಶಕಗಳ ಕಾಲ ಅಮೆರಿಕ ಮತ್ತು ನ್ಯಾಟೋ ಪಡೆಗಳನ್ನೇ ಕಂಗೆಡಿಸಿದ್ದ ತಾಲಿಬಾನ್‌ ಉಗ್ರರು ಭಾನುವಾರ ರಾಜಧಾನಿ ಕಾಬೂಲ್‌ ಅನ್ನು ವಶಪಡಿಸಿಕೊಳ್ಳುವ ಮೂಲಕ ಅಕ್ಷರಶಃ ಇಡೀ ದೇಶವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಇದರೊಂದಿಗೆ 2 ದಶಕಗಳ ಬಳಿಕ ದೇಶ ಮತ್ತೆ ಕ್ರೂರಿಗಳ ಕೈವಶವಾಗಿದೆ.ಹಾಗಾದ್ರೆ ;ಅಪ್ಘಾನಿಸ್ತಾನ ತಾಲಿಬಾನಿಯರ ಕೈವಶವಾಗಿದ್ದು ಹೇಗೆ? ಇಲ್ಲಿದೆ ಟೈಮ್‌ಲೈನ್

ಏ.14: ಆಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೇನೆ ಮೇ 1- ಸೆ. 11ರವರೆಗೆ ಹಂತಹಂತವಾಗಿ ಹಿಂದಕ್ಕೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಘೋಷಣೆ

ಮೇ 4: ಅಮೆರಿಕ ಸೇನೆ ಹಿಂಪಡೆತ ಆರಂಭದ ಬೆನ್ನಲ್ಲೇ, ಆಷ್ಘಾನಿಸ್ತಾನದ ದಕ್ಷಿಣ ಪ್ರಾಂತ್ಯಗಳ ಮೇಲೆ ತಾಲಿಬಾನ್‌ ಉಗ್ರರ ದಾಳಿ ಆರಂಭ

taliban 2

ಜೂ.7: 34 ಪ್ರಾಂತ್ಯಗಳಲ್ಲಿ ನಡೆದ ದಾಳಿಗಳಲ್ಲಿ ಕಳೆದ 24 ಗಂಟೆಯಲ್ಲಿ 150 ಆಫ್ಘನ್‌ ಸೈನಿಕರು ಮೃತಪಟ್ಟಿದ್ದಾರೆ ಎಂದು ಸರ್ಕಾರ ಘೋಷಿಸಿತು.

ಜೂ.22: ಉತ್ತರ ಪ್ರಾಂತ್ಯಗಳ ಮೇಲೆ ಉಗ್ರ ದಾಳಿ. ಉಗ್ರರ ವಶಕ್ಕೆ 50ಕ್ಕಿಂತ ಹೆಚ್ಚು ಜಿಲ್ಲೆ.

न जाने कहां अब मिलेगा सहारा...

ಜು.2: ಬಾಗ್ರಾಂ ಏರ್‌ಬೇಸ್‌ನಲ್ಲಿದ್ದ ಅಮೆರಿಕ ಸೇನೆ ವಾಪಸ್‌. ಈ ಮೂಲಕ ಯುದ್ಧದಲ್ಲಿ ಅಮೆರಿಕ ತನ್ನ ಭಾಗವಹಿಸುವಿಕೆ ಸ್ಥಗಿತ.

ಜು.25: ಉಗ್ರರ ವಿರುದ್ಧ ಹೋರಾಟದಲ್ಲಿ ಆಫ್ಘನ್‌ ಸೇನೆಗೆ ನೆರವಾಗಲು ಅಮೆರಿಕದಿಂದ ಉಗ್ರರ ಮೇಲೆ ವಾಯುದಾಳಿ

ಆ.14: ಕಾಬೂಲ್‌ನಿಂದ 70 ಕಿ.ಮೀ ದೂರದಲ್ಲಿರುವ ಮಿಜಾರ್‌-ಇ-ಶರೀಫ್‌ ನಗರ ತಾಲಿಬಾನ್‌ ವಶಕ್ಕೆ

ಆ.15: ರಾಜಧಾನಿ ಕಾಬೂಲ್‌ ಪ್ರವೇಶ. 3 ಜಿಲ್ಲೆ ವಶ. ಅಧಿಕಾರ ಹಸ್ತಾಂತರಕ್ಕೆ ಸರ್ಕಾರಕ್ಕೆ ಸೂಚನೆ.

click me!