ದಾಳಿಯಲ್ಲಿ ನೂತನ ನಾಯಕ ಮೊಜ್ತಬಾ ಖಮೇನಿ ಎರಡೂ ಕಾಲು ಕಟ್, ಜೀವ ಮಾತ್ರ ಇದೆ ಎಂದ ಅಮೆರಿಕ

Published : Mar 13, 2026, 12:59 PM IST

ದಾಳಿಯಲ್ಲಿ ನೂತನ ನಾಯಕ ಮೊಜ್ತಬಾ ಖಮೇನಿ ಎರಡೂ ಕಾಲು ಕಟ್, ಜೀವ ಮಾತ್ರ ಇದೆ ಎಂದ ಅಮೆರಿಕ, ಹೊಟ್ಟೆ ಹಾಗೂ ಲಿವರ್ ಡ್ಯಾಮೇಜ್ ಆಗಿದೆ. ರಹಸ್ಯ ಸ್ಥಳದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. 

PREV
15
ಕಾಲು ಕಟ್, ಲಿವರ್ ಡ್ಯಾಮೇಜ್

ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ತೀವ್ರಸ್ವರೂಪ ಪಡೆದುಕೊಂಡಿದೆ. ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಮುಗಿಬಿದ್ದಿದೆ. ಫೆಬ್ರವರಿ 28 ರಂದು ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಸೇರಿದಂತೆ ಇಡೀ ಕುಟಂಬವನ್ನೇ ಇಸ್ರೇಲ್ ದಾಳಿ ಮೂಲಕ ಹತ್ಯೆ ಮಾಡಿತ್ತು. ಇದರ ಬಳಿಕ ಇರಾನ್ ಈ ಸ್ಥಾನಕ್ಕೆ ಸರ್ವೋಚ್ಚ ನಾಯಕನಾಗಿ ಮೊಜ್ತಬಾ ಖಮೇನಿ ನೇಮಕ ಮಾಡಿದೆ. ಆದರೆ ದಾಳಿಯಲ್ಲಿ ಮೊಜ್ತಬಾ ಖಮೇನಿ ಎರಡೂ ಕಾಲುಗಳು ಕಟ್ ಆಗಿದೆ. ಹೊಟ್ಟೆ ಹಾಗೂ ಲಿವರ್ ಭಾಗಕ್ಕೆ ಗಂಭೀರ ಗಾಯವಾಗಿದೆ. ಸದ್ಯ ಮೊಜ್ತಬಾ ಖಮೇನಿ ರಹಸ್ಯ ಸ್ಥಳದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.

25
ಮೊಜ್ತಬಾ ಖಮೇನಿ ಜೀವ ಮಾತ್ರ ಇದೆ

ಮೊಜ್ತಬಾ ಖಮೇನಿ ಸರ್ವೋಚ್ಚ ನಾಯಕನಾಗಿ ನೇಮಕಗೊಂಡ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಯಾವುದೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿಲ್ಲ. ಇದರ ಬೆನಲ್ಲ್ ಟ್ರಂಪ್ ಹೇಳಿಕೆ ಇದೀಗ ಕೋಲಾಹಲ ಸೃಷ್ಟಿಸಿದೆ. ಮೊಜ್ತಬಾ ಖಮೇನಿ ಗಂಭೀರವಾಗಿ ಗಾಯಗೊಂಡಿರುವ ಮಾಹಿತಿಯನ್ನು ಪುಷ್ಠೀಕರಿಸುತ್ತಿದೆ. ಮೊಜ್ತಬಾ ಖಮೇನಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಅನ್ನೋ ಮಾಹಿತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

35
ಅಲಿ ಖಮೇನಿ ಹತ್ಯೆ ದಾಲಿಯಲ್ಲೇ ಮೊಜ್ತಬಾ ಗಾಯ

ಆಯತೊಲ್ಲ ಅಲಿ ಖಮೇನಿ ಹತ್ಯೆಗೆ ನಡೆಸಿದ ದಾಳಿಯಲ್ಲಿ ಸರ್ವೋಚ್ಚ ನಾಯಕ ಮೊಮ್ಮಕ್ಕಳು, ಸೊಸೆ ಸೇರಿದಂತೆ ದೊಡ್ಡ ಕುಟುಂಬವೇ ಹತ್ಯೆಯಾಗಿತ್ತು. ಈ ದಾಳಿಯಲ್ಲಿ ಬುದುಕಿಳದ ಏಕೈಕ ವ್ಯಕ್ತಿ ಮೊಜ್ತಬಾ ಖಮೇನಿ. ಆದರೆ ಮೊಜ್ತಬಾ ಖಮೇನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಬದುಕಿರುವ ಸಾಧ್ಯತೆ ಇದೆ ಎಂದು ಟ್ರಂಪ್ ಹೇಳಿದ್ದಾರೆ.

45
ಕೋಮಾಗೆ ಜಾರಿದ್ದಾರೆ ಮೊಜ್ತಬಾ ಖಮೇನಿ

ಮೊಜ್ತಬಾ ಖಮೇನಿ ಕಳೆದ ಎರಡು ವಾರದಿಂದ ನಿರಂತರ ಚಿಕಿತ್ಸೆ ಪಡೆಯತ್ತಿದ್ದಾರೆ. ಸದ್ಯ ಮೊಜ್ತಬಾ ಖಮೇನಿ ಕೋಮಾಗೆ ಜಾರಿದ್ದಾರೆ ಎಂದು ವರದಿಯಾಗಿದೆ. ಮೊಜ್ತಬಾ ಖಮೇನಿ ಕುರಿತು ಹಲವು ವರಿದಿಗಳು ಹರಿದಾಡುತ್ತಿದೆ. ಇದಕ್ಕೆ ಪೂರಕವಾಗಿ ಮೊಜ್ತಬಾ ಕೂಡ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಅನುಮಾನಗಳು ಹೆಚ್ಚಾಗುತ್ತಿದೆ.

55
ಮೊದಲ ಸ್ಟೇಟ್‌ಮೆಂಟ್ ಮೇಲೆ ಅನುಮಾನ

ಮೊಜ್ತಬಾ ಖಮೇನಿ ಮಾರ್ಚ್ 12ಕ್ಕೆ ಮೊದಲ ಮಾಧ್ಯ ಹೇಳಿಕೆ ಬಿಡುಗಡೆ ಮಾಡಿದ್ದರು. ಹೊರ್ಮುಜ್ ಜಲಸಂಧಿ ಬಂದ್ ಮುಂದುವರಿಯಲಿದೆ.ನೆರೆ ರಾಷ್ಟ್ರಗಳ ಗೆಳತನವಿದೆ. ಆದರೆ ಅಮರಿಕ ನೆಲೆ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಅಮೆರಿಕ ಮೇಲೆ ದಾಳಿ ಮುಂದುವರಿಯಲಿದೆ ಎಂದಿದ್ದಾರೆ. ಈ ಹೇಳಿಕೆ ನಿಜವಾಗಿಯೂ ಮೊಜ್ತಬಾ ಖಮೇನಿ ಬಿಡುಗಡೆ ಮಾಡಿದ್ರಾ, ಅಥವಾ ಅವರ ಪರವಾಗಿ ಇರಾನ್ ಸರ್ಕಾರ ಬಿಡುಗಡೆ ಮಾಡಿತ್ತಾ ಅನ್ನೋ ಚರ್ಚೆಗಳು ಶುರುವಾಗಿದೆ.

ಮೊದಲ ಸ್ಟೇಟ್‌ಮೆಂಟ್ ಮೇಲೆ ಅನುಮಾನ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories