ಮಹಿಳಾ ಉದ್ಯೋಗಿಗೆ ಆಲುಗಡ್ಡೆ ಎಂದು ಅವಮಾನಿಸಿದ ಬಾಸ್, 29 ಲಕ್ಷ ರೂ ಪರಿಹಾರಕ್ಕೆ ಕೋರ್ಟ್ ಆದೇಶ

Published : Mar 12, 2026, 03:00 PM IST

ಮಹಿಳಾ ಉದ್ಯೋಗಿಗೆ ಆಲುಗಡ್ಡೆ ಎಂದು ಅವಮಾನಿಸಿದ ಬಾಸ್, 29 ಲಕ್ಷ ರೂ ಪರಿಹಾರಕ್ಕೆ ಕೋರ್ಟ್ ಆದೇಶ ನೀಡಿದೆ.  ಕೋರ್ಟ್ ಬಳಿ ಪರಿಪರಿಯಾಗಿ ಬೇಡಿದರೂ ಪರಿಹಾರ ಮೊತ್ತ ಕಡಿಮೆಯಾಗಿಲ್ಲ. ಇತ್ತ  ಬಾಸ್ ಕಂಗಾಲಾಗಿದ್ದಾರೆ. 

PREV
15
29 ಲಕ್ಷ ರೂಪಾಯಿ ಪರಿಹಾರ

ಕಚೇರಿಯಲ್ಲಿ ಉದ್ಯೋಗದ ನಡುವೆ ಬಾಸ್ ಕಿರಿಕಿರಿ, ಕೆಲಸದ ಒತ್ತಡಗಳು ಹೊಸದೇನಲ್ಲ. ಇದರ ನಡುವೆ ನಿಂದನೆಗಳು ಸೇರಿದಂತೆ ಕೆಲ ಘಟನೆಗಳು ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ. ಇಲ್ಲೊಬ್ಬ ಮ್ಯಾನೇಜರ್ ತನ್ನ ಕೆಳಗೆ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯನ್ನು ನಿಂದಿಸಿ ಕಂಗಾಲಾಗಿದ್ದಾರೆ. ಆಲುಗಡ್ಡೆ ಎಂದು ಪದೇ ಪದೇ ಮಹಿಳೆಯನ್ನು ಕರೆದು ಅವಮಾನಿಸಿದ ಬಾಸ್‌ಗೆ ಇದೀಗ ಕೋರ್ಟ್ ಬರೋಬ್ಬರಿ 29 ಲಕ್ಷ ರೂಪಾಯಿ ಪಾವತಿಸಲು ಆದೇಶಿಸಿದೆ.

25
ಆಲುಗಡ್ಡೆ, ಸ್ಟುಪಿಡ್ ಪ್ಯಾಡಿ ಪದ ಬಳಕೆ

ಬ್ರಿಟನ್‌ನ ಲೀಡ್ಸ್ ನಗರದಲ್ಲಿರುವ ವೆಸ್ಟ್ ಲೀಡ್ಸ್ ಸಿವಿಲ್ ಕಂಪನಿಯಲ್ಲಿ ಈ ಘಟನೆ ನಡೆದಿದೆ. ಬರ್ನಾಡೆಟ್ ಹೆಯ್ಸ್ ಅನ್ನೋ ಮಹಿಳೆ ವೆಸ್ಟ್ ಲೀಡ್ಸ್ ಸಿವಿಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಈಕೆಯ ಮೂಲಕ ಐರ್ಲೆಂಡ್. ವೆಸ್ಟ್ ಲೀಡ್ಸ್ ಸಿವಿಲ್ ಕಂಪನಿಯ ಬಾಸ್ ಅಟ್ಕಿನ್ಸ್ ಮಿಕ್ ಮಹಿಳಾ ಉದ್ಯೋಗಿಗೆ ಪದೆ ಪದೇ ಜನಾಂಗಿಯ ನಿಂದನೆ ಮಾಡಿದ್ದಾರೆ. ಐರೀಶ್ ಮಹಿಳೆಯರಿಗೆ ಅಲ್ಲಿನ ದೇಶದಲ್ಲಿ ಬಳಸುವ ಕೆಲ ಕೆಟ್ಟ ಬೈಗುಳ, ನಿಂದನೆ ಪದಗಳನ್ನು ಬಳಸಿದ್ದಾರೆ. ಈ ಪೈಕಿ ಆಲುಗಡ್ಡೆ, ಸ್ಟುಪಿಡ್ ಪ್ಯಾಡಿ ಸೇರಿದಂತೆ ಹಲವು ಪದ ಬಳಕೆ ಮಾಡಿದ್ದಾರೆ.

35
ಮಹಿಳೆಗೆ ಕಿರುಕುಳ

ಬಾಸ್ ಪದೇ ಪದೇ ಈ ರೀತಿ ಜನಾಂಗೀಯ ನಿಂದನೆ ಮಾಡಿದ ವಿರುದ್ಧ ಕೆರಳಿ ಕೆಂಡಾಮಂಡಲವಾಗಿದ್ದಾಳೆ. ಇದೇ ವೇಳೆ ಬಾಸ್ ಪದ ಬಳಕೆ ವಿರುದ್ದ ಕಾನೂನು ಹೋರಾಟ ಆರಂಭಿಸಿದ್ದಾಳೆ. ಈಕೆ ದೂರಿನಲ್ಲಿ ತನಗಾದ ಮಾನಿಸಿಕ ಒತ್ತಡದ ಕುರಿತು ಹೇಳಿದ್ದಾಳೆ. ಇದರಿಂದ ಖಿನ್ನತೆಗೆ ಒಳಗಾಗಿರುವುದಾಗಿ ಹೇಳಿದ್ದಾಳೆ.

45
ಉದ್ಯೋಗ ನ್ಯಾಯಮಂಡಳಿಯಿಂದ ಆದೇಶ

ಈ ಪ್ರಕರಣ ಉದ್ಯೋಗ ನ್ಯಾಮಮಂಡಳಿ (Employment Tribunal) ಮೆಟ್ಟಿಲೇರಿತ್ತು. ಜನಾಂಗೀಯ ನಿಂದನೆ ಹಾಗೂ ಮಹಿಳೆಯನ್ನು ಕಚೇರಿಯಲ್ಲಿ ಅವಮಾನ ಮಾಡಿದ ಪ್ರಕರಣವನ್ನು ಉದ್ಯೋಗ ನ್ಯಾಯಮಂಡಳಿ ಗಂಭೀರವಾಗಿ ಪರಿಗಣಿಸಿತ್ತು. ಇದೀಗ 23,000 ಪೌಂಡ್ ಪರಿಹಾರ ನೀಡುವಂತೆ ಆದೇಶ ನೀಡಿದೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ 29 ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಬಾಸ್, ಮಹಿಳೆಗೆ ನೀಡಬೇಕಿದೆ.

55
ದುಬಾರಿ ಮೊತ್ತದಿಂದ ಬಾಸ್ ಕಂಗಾಲು

ಕಂಪನಿ ಆಗಷ್ಟೇ ಚೇತರಿಕೆ ಹಾದಿಯಲ್ಲಿತ್ತು. ಇದರ ನಡುವೆ ಈ ಪ್ರಕರಣದಿಂದ ಬಾಸ್ ಕಂಗಾಲಾಗಿದ್ದಾರೆ. ಪರಿಹಾರ ಮೊತ್ತ ಕಡಿಮೆ ಮಾಡುವಂಕೆ ಮನವಿ ಮಾಡಿದ್ದಾರೆ. ಇಷ್ಟೇ ಅಲ್ಲ ಆಕೆ ಕಂಪನಿಯಲ್ಲಿ ಮುಂದುವರಿಸುವುದಾಗಿ ಆಫರ್ ನೀಡಿದ್ದಾರೆ. ಆದರೆ ಇದ್ಯಾವುದನ್ನು ನ್ಯಾಯ ಮಂಡಳಿ ಒಪ್ಪಿಕೊಂಡಲ್ಲ.

ದುಬಾರಿ ಮೊತ್ತದಿಂದ ಬಾಸ್ ಕಂಗಾಲು

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories