
ಪಾಕಿಸ್ತಾನ ಅಂದ್ರೆ ಉಗ್ರವಾದವನ್ನು ಬೆಳೆಸುವ ದೇಶ. ಇತ್ತೀಚಿನ ಆಪರೇಷನ್ ಸಿಂಧೂರ್ ಇಂದ ಈ ವಿಷಯ ಮತ್ತೆ ಜಗತ್ತಿಗೆ ಗೊತ್ತಾಗಿದೆ. ಅಮೆರಿಕಾದಲ್ಲಿರುವ ಉಗ್ರ ನೆಲೆಗಳನ್ನು ಸಾಕ್ಷಿ ಸಮೇತ ಭಾರತ ಜಗತ್ತಿಗೆ ತೋರಿಸಿದೆ. ಆದ್ರೆ ಉಗ್ರವಾದಕ್ಕೆ ವಿರುದ್ಧ ಅಂತ ಹೇಳ್ಕೊಳ್ಳೋ ಅಮೆರಿಕಾ ಪಾಕಿಸ್ತಾನದ ಜೊತೆ ಯಾಕೆ ಸ್ನೇಹ ಮಾಡ್ತಿದೆ? ಅಮೆರಿಕಾ-ಪಾಕಿಸ್ತಾನ ಸಂಬಂಧ ಯಾವಾಗ ಶುರುವಾಯ್ತು? ಈಗ ಹೇಗಿದೆ? ಇಂಥ ವಿವರಗಳಿಗೆ ಹೋದ್ರೆ..
ಶೀತಲ ಸಮರ ಕಾಲ: ಸೋವಿಯತ್ ಒಕ್ಕೂಟದ ವಿಸ್ತರಣೆಯನ್ನು ತಡೆಯಲು ಅಮೆರಿಕಾ ಪಾಕಿಸ್ತಾನವನ್ನು ತಂತ್ರಗಾರಿಕೆಗೆ ಬಳಸಿಕೊಂಡಿತು.
ಚೀನಾ ಸಂಪರ್ಕ (1970ರಲ್ಲಿ): ಅಮೆರಿಕಾ-ಚೀನಾ ಸಂಬಂಧಕ್ಕೆ ಪಾಕಿಸ್ತಾನ ಮಧ್ಯವರ್ತಿಯಾಗಿ ಕೆಲಸ ಮಾಡಿತು.
ಅಫ್ಘಾನಿಸ್ತಾನ (1980ರ ದಶಕ): ಸೋವಿಯತ್ ಪಡೆಗಳ ವಿರುದ್ಧ ಮುಜಾಹಿದ್ದೀನ್‌ಗಳಿಗೆ ಸಹಾಯ ಮಾಡಲು ಪಾಕಿಸ್ತಾನ ಅಮೆರಿಕಾಕ್ಕೆ ಪ್ರಮುಖ ನೆಲೆಯಾಯಿತು.
2001ರ ನಂತರ: 9/11 ದಾಳಿಯ ನಂತರ ಅಮೆರಿಕಾ ‘ಭಯೋತ್ಪಾದನೆ ವಿರುದ್ಧದ ಯುದ್ಧ’ದಲ್ಲಿ ಪಾಕಿಸ್ತಾನವನ್ನು ಮತ್ತೆ ತನ್ನತ್ತ ಸೆಳೆದುಕೊಂಡಿತು. ಅಫ್ಘಾನಿಸ್ತಾನದಲ್ಲಿ ತನ್ನ ಕಾರ್ಯಾಚರಣೆಗಳಿಗೆ ಪಾಕಿಸ್ತಾನವನ್ನು ಬಳಸಿಕೊಂಡಿತು.
2011ರ ನಂತರ: ಆದರೆ 2011ರಲ್ಲಿ ಒಸಾಮಾ ಬಿನ್ ಲಾಡೆನ್ ಹತ್ಯೆಯ ನಂತರ ಅಮೆರಿಕಾ-ಪಾಕಿಸ್ತಾನ ಸಂಬಂಧ ಹದಗೆಟ್ಟಿತು. ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದ ಒಸಾಮಾವನ್ನು ರಹಸ್ಯ ಕಾರ್ಯಾಚರಣೆಯ ಮೂಲಕ ಅಮೆರಿಕಾ ಹತ್ಯೆ ಮಾಡಿತು. ತಮಗೆ ಕನಿಷ್ಠ ಮಾಹಿತಿ ನೀಡದೆ ಅಮೆರಿಕಾ ಕಾರ್ಯಾಚರಣೆ ನಡೆಸಿದ್ದು, ತಮ್ಮ ಶತ್ರು ಆಶ್ರಯ ಪಡೆದಿರುವ ವಿಷಯವನ್ನು ಪಾಕಿಸ್ತಾನ ತಿಳಿಸದ ಕಾರಣಗಳಿಂದಾಗಿ ಎರಡೂ ದೇಶಗಳ ಸಂಬಂಧ ಹದಗೆಟ್ಟಿತು.
ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು
ಪ್ರಸ್ತುತ ಪಾಕಿಸ್ತಾನದ ಆರ್ಥಿಕತೆ ದಿವಾಳಿ ಸ್ಥಿತಿಯಲ್ಲಿದೆ.
IMF, ವಿಶ್ವ ಬ್ಯಾಂಕ್ ಸಾಲ ಪಡೆಯಲು ಅಮೆರಿಕಾದ ಸಹಾಯ ಅತ್ಯಗತ್ಯ.
FATF ನಿರ್ಬಂಧಗಳನ್ನು ತೆಗೆದುಹಾಕಲು ಅಮೆರಿಕಾ ಪ್ರಮುಖ ಪಾತ್ರ ವಹಿಸಲಿದೆ.
ಸುರಕ್ಷತಾ ಸಮಸ್ಯೆಗಳು
ಬಲೂಚಿಸ್ತಾನ್ ದಂಗೆ, ತೆಹ್ರೀಕೆ ತಾಲಿಬಾನ್ ದಾಳಿಗಳನ್ನು ಎದುರಿಸಲು ಅಮೆರಿಕಾದ ಸೇನಾ ನೆರವು ಅಗತ್ಯ.
ಪರಮಾಣು ಶಸ್ತ್ರಾಸ್ತ್ರಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಕೂಡ ಪ್ರಮುಖ ಸಮಸ್ಯೆ.
ಪಾಕಿಸ್ತಾನದಲ್ಲಿ ಖನಿಜ ಸಂಪತ್ತು ಇದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಹಲವು ದೇಶಗಳು ಅಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇವುಗಳಲ್ಲಿ ಪ್ರಮುಖವಾಗಿ..
ಚೀನಾ : ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ ಖನಿಜ ಹಕ್ಕುಗಳನ್ನು ಪಡೆಯುವ ಸಾಧ್ಯತೆ.
ಅಮೆರಿಕಾ: ಉತ್ತರ ಬಲೂಚಿಸ್ತಾನ್, ಖೈಬರ್ ಪಖ್ತೂನ್‌ಖ್ವಾದಲ್ಲಿ ಗಣಿಗಾರಿಕೆ ಯೋಜನೆಗಳಲ್ಲಿ ಆಸಕ್ತಿ.
ಸೌದಿ ಅರೇಬಿಯಾ :ರೇಕೊ ಡಿಕ್ ಗಣಿಗಳ ಮೇಲೆ ದೃಷ್ಟಿ.
ಯುಕೆ, ಯುಎಇ, ಟರ್ಕಿ: ಹೂಡಿಕೆಗಾಗಿ ಪೈಪೋಟಿ.