ವ್ಯಕ್ತಿಯ ಅತ್ಯಂತ ದೊಡ್ಡ ಶತ್ರುಗಳು ಯಾವಾಗಲೂ ಆ ವ್ಯಕ್ತಿಯ ಆಪ್ತರೇ ಆಗಿರುತ್ತಾರೆ ಎಂಬ ಮಾತಿದೆ, ದುಷ್ಮನ್ ಬಗಲ್ ಮೇಲೆ ಹೈ ಎಂಬ ಮಾತಿನಂತೆ ಈಗ ವೆನಿಜುವೆಲಾದ ಮಾಜಿ ನಿರ್ಗಮಿತ ಅಧ್ಯಕ್ಷ ನಿಕೋಲಸ್ ಮಡುರೊ ಅವರ ವಿಷಯದಲ್ಲೂ ಇದೇ ಆಯ್ತಾ ? ಹೌದು ಅಂತಿದೆ ದಿ ಗಾರ್ಡಿಯನ್‌ನ ಇತ್ತೀಚಿನ ವರದಿ.
ವೆನಿಜುವೆಲಾದ ಮಾಜಿ ನಿರ್ಗಮಿತ ಅಧ್ಯಕ್ಷ ನಿಕೋಲಸ್ ಮಡುರೊ ಬಗಲ್ ಕಾ ದುಷ್ಮನ್
ವ್ಯಕ್ತಿಯ ಅತ್ಯಂತ ದೊಡ್ಡ ಶತ್ರುಗಳು ಯಾವಾಗಲೂ ಆ ವ್ಯಕ್ತಿಯ ಆಪ್ತರೇ ಆಗಿರುತ್ತಾರೆ ಎಂಬ ಮಾತಿದೆ, ದುಷ್ಮನ್ ಬಗಲ್ ಮೇಲೆ ಹೈ ಎಂಬ ಮಾತಿನಂತೆ ಈಗ ವೆನಿಜುವೆಲಾದ ಮಾಜಿ ನಿರ್ಗಮಿತ ಅಧ್ಯಕ್ಷ ನಿಕೋಲಸ್ ಮಡುರೊ ಅವರ ವಿಷಯದಲ್ಲೂ ಇದೇ ಆಯ್ತಾ ಜೊತೆಗಿದ್ದವರೇ ಅವರಿಗೆ ಭಗ್ನಿ ಗೂಟಾ ಇಟ್ರಾ, ಹೌದು ಅಂತಿದೆ ದಿ ಗಾರ್ಡಿಯನ್‌ನ ಇತ್ತೀಚಿನ ವರದಿ.
ವೆನೆಜುವೆಲಾದ ನಿಕೋಲಸ್ ಮಡುರೊ ಅವರನ್ನು ಈ ವರ್ಷದ ಆರಂಭದಲ್ಲೇ ಜನವರಿ 3 ರಂದು ಅಮೆರಿಕದ ಪಡೆಗಳು ಬಂಧಿಸಿ ವಶದಲ್ಲಿರಿಸಿಕೊಂಡಿವೆ. ಅವರ ಬಂಧನದೊಂದಿಗೆ ವೆನಿಜುವೆಲಾದ ಮೇಲೆ ಅಮೆರಿಕಾ ಹೇರಿದ್ದ ವರ್ಷಗಳ ನಿರ್ಬಂಧಗಳು, ಬೆದರಿಕೆಗಳು ಮತ್ತು ವಿಫಲ ಮಾತುಕತೆಗಳ ಅಧ್ಯಾಯ ಅಂತ್ಯ ಕಂಡಿದೆ ಆದರೆ ಮಡುರೋ ಅವರ ಈ ನಾಟಕೀಯ ಬಂಧನಕ್ಕೆ ತಿಂಗಳುಗಳ ಮೊದಲು, ಮಡುರೊ ಅವರ ಸ್ವಂತ ಆಂತರಿಕ ವಲಯದ ಮಧ್ಯೆ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ಶಾಂತವಾದ ಮೈತ್ರಿಯೊಂದು ಹೊರಹೊಮ್ಮಿತು ಎಂದು ವರದಿಯಾಗಿದೆ.
28
ತಮ್ಮ ಜೊತೆಗಿದ್ದವರಿಂದಲೇ ಈ ಗತಿ ಬಂತಾ?
ನವೆಂಬರ್‌ನಲ್ಲಿ ಅಂದರೆ ಮಡುರೊ ಸೆರೆಹಿಡಿಯಲ್ಪಡುವ ಸರಿಸುಮಾರು ಎರಡು ತಿಂಗಳ ಮೊದಲು, ವೆನೆಜುವೆಲಾದ ಮಧ್ಯಂತರ ಅಧ್ಯಕ್ಷೆಯಾಗಿರುವ ಡೆಲ್ಸಿ ರೊಡ್ರಿಗಸ್(Delcy Rodríguez) ಅವರು ತಮ್ಮ ಸಹೋದರ ಜಾರ್ಜ್ ರೊಡ್ರಿಗಸ್ ಅವರೊಂದಿಗೆ ಅಮೆರಿಕದ ಅಧಿಕಾರಿಗಳನ್ನು ರಹಸ್ಯವಾಗಿ ಭೇಟಿ ಮಾಡಿದ್ದರು. ಅಮೆರಿಕಾದ ಅಧಿಕಾರಿಗಳ ಜೊತೆ ಅವರು ರಹಸ್ಯ ಮಾತುಕತೆ ನಡೆಸಿದ್ದರು ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಈ ಒಪ್ಪಂದ ಹೇಗೆ ನಡೆಯಿತು?
ದಿ ಗಾರ್ಡಿಯನ್ ವರದಿಯ ಪ್ರಕಾರ, ಅಮೆರಿಕದ ಅಧಿಕಾರಿಗಳು ಮತ್ತು ಆಗ ವೆನಿಜುವೆಲಾದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಡೆಲ್ಸಿ ರೊಡ್ರಿಗಸ್ ನಡುವಿನ ಸಂವಹನವು ನವೆಂಬರ್ 2025 ರಲ್ಲಿ ಪ್ರಾರಂಭವಾಯಿತು. ಅದೇ ಸಮಯದಲ್ಲೇ ಡೊನಾಲ್ಡ್ ಟ್ರಂಪ್, ವೆನಿಜುವೆಲಾದ ಅಧ್ಯಕ್ಷರಾಗಿ ಮಡುರೊ ಅವರೊಂದಿಗೆ ನೇರವಾಗಿ ಮಾತನಾಡಿ ಅವರನ್ನು ಪಕ್ಷ ಬಿಡುವಂತೆ ಒತ್ತಾಯಿಸಿದ್ದರು. ಆದರೆ ಮಡುರೊ ಟ್ರಂಪ್ ಮನವಿಯನ್ನು ನಿರಾಕರಿಸಿದರು. ಆದರೆ ಮಡುರೊ ಅವರನ್ನು ಅಧಿಕಾರದಿಂದ ಕೆಳಗಿಳಿಸಿಯೇ ಸಿದ್ಧ ಎಂದು ಪಟ್ಟು ಹಿಡಿದಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಶಕ್ತಿ ಪ್ರದರ್ಶನ ಮಾಡಿ, ಮಡುರೋ ಅವರನ್ನು ಬಲವಂತವಾಗಿ ಅಧಿಕಾರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದರು.
38
ಮಡುರೋ ಸರ್ಕಾರದಲ್ಲೇ ಇದ್ದ ಡೆಲ್ಸಿ ರೊಡ್ರಿಗಸ್
ದೇಶದಲ್ಲಿ ಅನಿಶ್ಚಿತತೆ ಹೆಚ್ಚಾದಂತೆ, ಡೆಲ್ಸಿ ರೊಡ್ರಿಗಸ್ ಅವರು ತಾವು ಸಂಪರ್ಕದಲ್ಲಿದ್ದ ಅಮೆರಿಕದ ಅಧಿಕಾರಿಗಳಿಗೆ ದೇಶದ ಅಧ್ಯಕ್ಷ ಮಡುರೊ ಅವರ ಪದಚ್ಯುತಿ ಅಗತ್ಯವಿದ್ದು, ಮಡುರೊ ನಂತರ ಉಂಟಾಗುವ ಸ್ಥಿತ್ಯಂತರವನ್ನು ತಾನು ನಿರ್ವಹಿಸುತ್ತೇನೆ ಎಂದು ಸೂಚಿಸಿದರು ಎಂದು ಗಾರ್ಡಿಯನ್ ವರದಿ ಮಾಡಿದೆ. ಈ ಬಗ್ಗೆ ಮೂಲವೊಂದನ್ನು ಉಲ್ಲೇಖಿಸಿ ವರದಿ ಮಾಡಿರುವ ದಿ ಗಾರ್ಡಿಯನ್, ದೇಶದ ಅಸ್ತವ್ಯಸ್ತವಾಗಿರುವ ಅರ್ಥಿಕ ಕುಸಿತಕ್ಕಿಂತ ನಿಯಂತ್ರಿತ ಹಸ್ತಾಂತರವು ಉತ್ತಮವಾಗಿದೆ ಎಂಬುದು ಅವರ ಸಂದೇಶವಾಗಿತ್ತು. ಡೆಲ್ಸಿ ರೋಡ್ರಿಗಸ್, ಅಧ್ಯಕ್ಷ ಮಡುರೊ ಹೋಗಬೇಕು. ನಂತರದ ಪರಿಣಾಮ ಏನೇ ಆಗಲಿ, ನಾನು ಅದರೊಂದಿಗೆ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ದರು ಎಂದು ಅಧಿಕೃತ ಮೂಲವನ್ನು ಉದ್ದೇಶಿಸಿ ಗಾರ್ಡಿಯನ್ ವರದಿ ಮಾಡಿದೆ..
ಮಡುರೊ ಆಡಳಿತದಲ್ಲಿ ಉನ್ನತ ಹುದ್ದೆ ಹೊಂದಿದ್ದ ಡೆಲ್ಸಿ ಜೊತೆಗೆ ಅಮೆರಿಕಾದ ಒಪ್ಪಂದ ಏಕೆ?
ಮಡುರೊ ಆಡಳಿತದಲ್ಲಿ ಡೆಲ್ಸಿ ರೊಡ್ರಿಗಸ್ ಉನ್ನತ ಹುದ್ದೆ ಹೊಂದಿದ್ದರೂ ಅಮೆರಿಕಾ ಅಂಥವರನ್ನೇ ಮಡುರೋನನ್ನು ಕೆಳಗಿಳಿಸಲು ಬಳಸಿದ್ದೇಕೆ ಎಂಬ ಪ್ರಶ್ನೆ ಇದೆ. ಉನ್ನತ ಹುದ್ದೆ ಹೊಂದಿದ್ದರೂ ಡೆಲ್ಸಿ ರೊಡ್ರಿಗಸ್ ಕ್ರಮೇಣ ಅಮೆರಿಕಾ ಅಧಿಕಾರಿಗಳ ವಿಶ್ವಾಸಾರ್ಹತೆಯನ್ನು ಗಳಿಸಿದರು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಆರಂಭದಲ್ಲಿ ವೆನಿಜುವೆಲಾದ ಸರ್ಕಾರದಲ್ಲಿ ಇರುವವರನ್ನೇ ತಮ್ಮ ಕೆಲಸಕ್ಕೆ ಬಳಸುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಆದರೆ ರೊಡ್ರಿಗಸ್ ನೀಡಿದ ಭರವಸೆಗಳನ್ನು ಗಮನಿಸಿದ ಅವರು, ರಾಜ್ಯದ ಕುಸಿತವನ್ನು ತಡೆಗಟ್ಟಲು ಮತ್ತು ಮೂಲಭೂತ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಅತ್ಯಂತ ಕಾರ್ಯಸಾಧ್ಯವಾದ ಮಾರ್ಗ ಅದೆಂದುನೋಡಿದರು ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
58
ಡೆಲ್ಸಿ ರೊಡ್ರಿಗಸ್ ರಹಸ್ಯ ಮಾತುಕತೆ
ಡೆಲ್ಸಿ ರೊಡ್ರಿಗಸ್ ಅಮೆರಿಕದ ಇಂಧನ ಹಿತಾಸಕ್ತಿಗಳೊಂದಿಗೆ ಕೆಲಸ ಮಾಡಲು ಸಿದ್ಧರಿರುವುದಾಗಿ ಸೂಚಿಸಿದರು ಮತ್ತು ಆ ವಲಯದಲ್ಲಿ ಸಂಪರ್ಕ ಹೊಂದಿದ್ದರು, ಇದು ಟ್ರಂಪ್ ಆಡಳಿತದ ಅಂಕಿ ಅಂಶಗಳಿಗೆ ಮರುಜೀವ ನೀಡಿದೆ ಎಂದು ವರದಿಯಾಗಿದೆ. ಈ ಮಾತುಕತೆಗಳನ್ನು ಸುಗಮಗೊಳಿಸುವಲ್ಲಿ ಕತಾರ್ ಪ್ರಮುಖ ಪಾತ್ರ ವಹಿಸಿದೆ. ಡೆಲ್ಸಿ ಕತಾರಿ ಅಧಿಕಾರಿಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು ಮತ್ತು ದೋಹಾ ವಾಷಿಂಗ್ಟನ್‌ನಲ್ಲಿ ತನ್ನ ಪ್ರಭಾವವನ್ನು ಬಳಸಿಕೊಂಡು ರಹಸ್ಯ ಮಾತುಕತೆ ನಡೆಸಿದರು.
68
ಬೆನ್ನ ಹಿಂದೆ ಕೆಲಸ ಮಾಡಲು ರೆಡಿಯಾದ ಡೆಲ್ಸಿ
ಆದರೆ ಮಹತ್ವದ ವಿಚಾರ ಎಂದರೆ ಡೆಲ್ಸಿ ಮಡುರೊ ಅವರನ್ನು ನೇರವಾಗಿ ತೆಗೆದುಹಾಕಲು ಸಹಾಯ ಮಾಡಲು ಒಪ್ಪಲಿಲ್ಲ. ಬದಲಾಗಿ, ಅವರು ಅಧಿಕಾರದಿಂದ ಹೋದ ನಂತರ ಪರಿಸ್ಥಿತಿಯನ್ನು ನಿರ್ವಹಿಸಲು ಅವರು ಹಾಗೂ ಅವರ ಸಹೋದರ ತಮ್ಮನ್ನು ತಾವು ತೊಡಗಿಸಿಕೊಂಡರು. ಈ ಚರ್ಚೆಗಳ ಬಗ್ಗೆ ಪರಿಚಿತವಾಗಿರುವ ಒಬ್ಬ ಅಧಿಕಾರಿ ಹೇಳುವಂತೆ ಡೆಲ್ಸಿ ಮಡುರೊಗೆ ಹೆದರುತ್ತಿದ್ದರು ಮತ್ತು ಅವರ ಪತನದ ಮೊದಲು ಯಾವುದೇ ಬಹಿರಂಗ ದ್ರೋಹವನ್ನು ತಪ್ಪಿಸಿದರು ಎಂದು ಹೇಳಿದರು.
78
ಈಗ ವೆನಿಜುವೆಲಾದ ಹಂಗಾಮಿ ಅಧ್ಯಕ್ಷೆ ಈ ಡೆಲ್ಸಿ
ಮಡುರೊ ಸೆರೆಹಿಡಿಯಲ್ಪಟ್ಟ ದಿನ ಅಮೆರಿಕದ ವಿಮಾನಗಳು ಬಂದಾಗ, ಡೆಲ್ಸಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಲಿಲ್ಲ. ಅವರು ಮಾಸ್ಕೋಗೆ ಪ್ರಯಾಣಿಸಿದ್ದಾರೆ ಎಂಬ ವದಂತಿಗಳು ಹರಡಿದವು, ಆದರೆ ದಿ ಗಾರ್ಡಿಯನ್ ವರದಿ ಪ್ರಕಾರ ಅವರು ಮಾರ್ಗರಿಟಾ ದ್ವೀಪದಲ್ಲಿದ್ದು, ದೇಶದ ಹೊಸ ಬೆಳವಣಿಗೆಗಳಿಗಾಗಿ ಕಾಯುತ್ತಿದ್ದರು. ಜನವರಿ 5 ರಂದು, ಅವರು ಕ್ಯಾರಕಾಸ್‌ಗೆ ಮರಳಿದರು ಮತ್ತು ಮಡುರೊ ಬದಲಿಗೆ ಹಂಗಾಮಿ ಅಧ್ಯಕ್ಷರಾಗಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರೀಯ ಅಸೆಂಬ್ಲಿಯ ಮುಖ್ಯಸ್ಥರಾದ ಅವರ ಸಹೋದರ ಜಾರ್ಜ್ ರೊಡ್ರಿಗಸ್ ಕೂಡ ಪ್ರಮುಖ ಪಾತ್ರವನ್ನು ವಹಿಸಿಕೊಂಡರು. ಇದು ತಿಂಗಳುಗಳ ಹಿಂದೆ ಚರ್ಚಿಸಲಾದ ಪ್ಲಾನ್ ಆಗಿತ್ತು.
88
ಆಕೆಯ ಪಾತ್ರ ಬಹಿರಂಗಪಡಿಸಿದ ಟ್ರಂಪ್
ಮಡುರೊ ಸೆರೆಹಿಡಿಯಲ್ಪಟ್ಟ ಕೆಲವೇ ಗಂಟೆಗಳ ನಂತರ, ಟ್ರಂಪ್ ವೆನಿಜುವೆಲಾದ ಅಧ್ಯಕ್ಷರ ಕೆಳಗಿಳಿಸಲು ರಹಸ್ಯ ಸಂಪರ್ಕಗಳು ನಡೆದಿರುವುದನ್ನು ದೃಢಪಡಿಸಿದರು. ನಾವು ಅವಳೊಂದಿಗೆ ಹಲವಾರು ಬಾರಿ ಮಾತನಾಡಿದ್ದೇವೆ, ಮತ್ತು ಅವಳು ಅರ್ಥಮಾಡಿಕೊಂಡಿದ್ದಾಳೆ ಎಂದು ಅವರು ನ್ಯೂಯಾರ್ಕ್ ಪೋಸ್ಟ್‌ಗೆ ತಿಳಿಸಿದ್ದರು.
ಅಮೆರಿಕಾ ವೆನೆಜುವೆಲಾದ ಆಸ್ತಿಗಳನ್ನು ಗುರಿಯಾಗಿಸಿಕೊಂಡು ತಿಂಗಳುಗಳ ಕಾಲ ನಡೆದ ದಾಳಿಗಳು ಮತ್ತು ಮಿಲಿಟರಿ ಕ್ರಮಗಳ ನಂತರ, ಜನವರಿಯ ಆರಂಭದಲ್ಲಿ ಅವರ ನಿವಾಸದ ಮೇಲೆ ದಾಳಿ ನಡೆಸಿ ವೆನೆಜುವೆಲಾದ ನಾಯಕ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದಿತು. ನೋಡಿದ್ರಲ್ಲ, ಹೇಗೆ ಜೊತೆಗಿದ್ದವರೇ ವೆನಿಜುವೆಲಾದ ಅಧ್ಯಕ್ಷರಿಗೆ ದ್ರೋಹ ಬಗೆದ್ರು ಅಂತ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ