ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ನಡುವಿನ ಗಾಢ ಸ್ನೇಹದ ಬಗ್ಗೆ ಭಾರತದಲ್ಲಿನ ಅಮೆರಿಕ ರಾಯಭಾರಿ ಸರ್ಗಿಯೋ ಗೋರ್ ಮಾತನಾಡಿದ್ದಾರೆ. ಟ್ರಂಪ್ ಅವರು ಮೋದಿಯನ್ನು ನಿಜವಾದ ಸ್ನೇಹಿತ ಎಂದು ಪರಿಗಣಿಸುತ್ತಾರೆ ಎಂಬುದಕ್ಕೆ ಸ್ವಾರಸ್ಯಕರ ಪ್ರಸಂಗವೊಂದನ್ನು ವಿವರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಅವಿನಾಭಾವ ಸ್ನೇಹ ಇದ್ದು, ಅವರ ಮಧ್ಯೆ ಔಪಚಾರಿಕ ಶಿಷ್ಟಾಚಾರದ ಅಗತ್ಯವಿಲ್ಲ’ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಸರ್ಗಿಯೋ ಗೋರ್ ಹೇಳಿದ್ದಾರೆ ಹಾಗೂ ಪ್ರಸಂಗವೊಂದನ್ನು ಮೆಲುಕು ಹಾಕಿದ್ದಾರೆ.
24
ಬೆಳಗ್ಗೆ 6 ಗಂಟೆ
ವಾಷಿಂಗ್ಟನ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಇತ್ತೀಚೆಗೆ ಒಂದು ಸಂಜೆ ಮಿಯಾಮಿಯಲ್ಲಿ ಕಾರ್ಯಕ್ರಮವಿತ್ತು. ಆಗ ಟ್ರಂಪ್ ಅವರಾಗಿಯೇ ಮೋದಿಗೆ ಕರೆ ಮಾಡು ಎಂದರು. ನಾನು ಈಗ ಬೆಳಗಿನ 6 ಗಂಟೆ ಎಂದೆ. ಅದಕ್ಕವರು, ಮೋದಿ ನನ್ನ ಹಾಗೆಯೇ, ಬೇಗ ಎದ್ದಿರುತ್ತಾರೆ ಎಂದರು’ ಎಂದು ಸ್ವಾರಸ್ಯಕರವಾಗಿ ವಿವರಿಸಿದರು.
34
ಟ್ರಂಪ್‌ಗೆ ಮೋದಿ ಒಳ್ಳೆಯ ಸ್ನೇಹಿತ
‘ಆದರೆ ಮರುದಿನ ಕರೆ ಮಾಡುವುದು ನಿಗದಿಯಾಯಿತು. ನೀವು ಯಾರೊಂದಿಗಾದರೂ ಸ್ನೇಹದಲ್ಲಿದ್ದಾಗ, ಎಲ್ಲವನ್ನೂ ನಿಗದಿಪಡಿಸಬೇಕಾಗಿಲ್ಲ. ಟ್ರಂಪ್ ನಿಜವಾಗಿಯೂ ಮೋದಿಯನ್ನು ಸ್ನೇಹಿತ ಎಂದು ಪರಿಗಣಿಸುತ್ತಾರೆ. ಈ ಸಂಬಂಧದ ಬಗ್ಗೆ ತುಂಬ ಕಾಳಜಿ ವಹಿಸುತ್ತಾರೆ. ಅವರ ಮೊದಲ ಅವಧಿಯಲ್ಲಿ ಭಾರತಕ್ಕೆ ನೀಡಿದ ಭೇಟಿಯ ಬಗ್ಗೆ ಪ್ರೀತಿಯಿಂದ ಮಾತನಾಡುತ್ತಲೇ ಇರುತ್ತಾರೆ’ ಎಂದರು.
‘ಪ್ರಸ್ತಾವಿತ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಏರ್ಪಡಲು ಶೇ.1-2ರಷ್ಟು ಅಂಶಗಳಷ್ಟೇ ಬಾಕಿ ಇವೆ. ಎರಡೂ ದೇಶಗಳ ಸಂಧಾನಕಾರರು ಬಹುನಿರೀಕ್ಷಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಮುಕ್ತಾಯಗೊಳಿಸುವ ಅಂತಿಮ ಹಂತದಲ್ಲಿದ್ದಾರೆ’ ಎಂದು ಇದೇ ವೇಳೆ ಗೋರ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ