Russia Ukraine War: 7 ವರ್ಷದ ಮೊಮ್ಮಗಳು ಕಣ್ಣೆದುರೇ ನರಳಿ ಸಾಯೋದನ್ನು ನೋಡುತ್ತಲೇ ನಿಂತ ಅಜ್ಜ!
First Published | Mar 8, 2022, 12:10 PM ISTಈ ಫೋಟೋ ರಷ್ಯಾದ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ 7 ವರ್ಷದ ಅಲಿಸಾ ಹಲಾನ್ಸ್ ಅವರದ್ದು. ಉಕ್ರೇನ್ ಯುದ್ಧದಲ್ಲಿ ಸತ್ತ ಅನೇಕ ಮಕ್ಕಳಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧ ಆರಂಭವಾಗಿ 13 ನೇ ದಿನವಾಗಿದೆ. ಯುದ್ಧದ ಆರಂಭದಿಂದಲೂ 1.5 ಮಿಲಿಯನ್‌ಗಿಂತಲೂ ಹೆಚ್ಚು ಜನರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ, ನೂರಾರು ಸಾವಿರ ಜನರು ಪೋಲೆಂಡ್, ರೊಮೇನಿಯಾ, ಸ್ಲೋವಾಕಿಯಾ ಮತ್ತು ಇತರೆಡೆಗೆ ಆಗಮಿಸಿದ್ದಾರೆ. ಯುಎನ್ ಪ್ರಕಾರ, ಪೋಲೆಂಡ್ 1,028,000 ನಿರಾಶ್ರಿತರನ್ನು ತೆಗೆದುಕೊಂಡಿದೆ. ಹಂಗೇರಿ 180,000, ಮೊಲ್ಡೊವಾ 83,000, ಸ್ಲೋವಾಕಿಯಾ 128,000, ರೊಮೇನಿಯಾ 79,000, ರಷ್ಯಾ 53,000, ಬೆಲಾರಸ್ 406 ನಿರಾಶ್ರಿತರಿಗೆ ಆಶ್ರಯ ನೀಡಿದೆ. ಯುರೋಪ್‌ನಲ್ಲಿ 183,000 ಕ್ಕೂ ಹೆಚ್ಚು ಜನರು ಈ ದೇಶಗಳಿಂದ ವಲಸೆ ಹೋಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ರಷ್ಯಾದ ಸೇನೆಯು ಉಕ್ರೇನ್‌ನ ವಸತಿ ಪ್ರದೇಶಗಳ ಮೇಲೆ ದಾಳಿ ಮಾಡಿದ ನಂತರ, ಇಡೀ ದೇಶವನ್ನು ಸ್ಥಳಾಂತರಿಸಲಾಗುತ್ತಿದೆ. 10 ದಿನಗಳಲ್ಲಿ ಸುಮಾರು 1.5 ಮಿಲಿಯನ್ ನಿರಾಶ್ರಿತರು ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಯುಎನ್ ನಿರಾಶ್ರಿತರ ಹೈ ಕಮಿಷನರ್ ಫಿಲಿಪ್ಪೊ ಗ್ರಾಂಡಿ ಟ್ವೀಟ್ ಮಾಡಿದ್ದಾರೆ. ಇದು ಎರಡನೇ ಮಹಾಯುದ್ಧದ ನಂತರ ಯುರೋಪಿನಲ್ಲಿ ನಡೆದ ಅತಿ ದೊಡ್ಡ ನಿರ್ಗಮನವಾಗಿದೆ. ಯುದ್ಧದಿಂದ ಪಾರಾಗಲು 4 ಮಿಲಿಯನ್‌ಗಿಂತಲೂ ಹೆಚ್ಚು ಜನರು ಉಕ್ರೇನ್‌ನಿಂದ ಹೊರಹೋಗಬಹುದು ಎಂದು ಯುಎನ್ ಭಯಪಡುತ್ತದೆ.